ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರೀಫ್‌ ಗೈರು

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ದೂರುಗಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್‌ ಷರೀಫ್‌, ಅವರ ಪುತ್ರರಾದ ಹುಸೇನ್‌ ಮತ್ತು ಹಸನ್‌ ಉನ್ನತ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಎದುರು ಶುಕ್ರವಾರ ವಿಚಾರಣೆಗೆ ಹಾಜರಾಗಲಿಲ್ಲ. ಪನಾಮ ಪೇಪರ್ಸ್‌ ಸೋರಿಕೆಯಿಂದ ಈ ಹಗರಣ ಬಹಿರಂಗವಾಗಿತ್ತು.

ವಿಚಾರಣೆ ನಡೆಸಲು ಹತ್ತು ಸದಸ್ಯರ ತಂಡ ರಾವಲ್ಪಿಂಡಿಯಿಂದ ಲಾಹೋರ್‌ನಲ್ಲಿರುವ ಕಚೇರಿಗೆ ಬಂದಿತ್ತು. ಆದರೆ, ವಿಚಾರಣೆಗೆ ಹಾಜರಾಗುವಂತೆ ಎನ್‌ಬಿಎ ಸಮನ್ಸ್‌ ನೀಡಿರುವುದನ್ನು ಷರೀಫ್‌ ಅವರಿಗೆ ಆಪ್ತರಾಗಿರುವ ನಾಯಕರೊಬ್ಬರು ಅಲ್ಲಗಳೆದಿದ್ದಾರೆ. ಅವರು ಇನ್ನೂ ಸಮನ್ಸ್‌ ಸ್ವೀಕರಿಸಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT