ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸೇನೆಗೆ ವಾಯುಪಡೆಯ ಶಕ್ತಿ ಕೊಟ್ಟ ಅಪಾಚೆ

Last Updated 18 ಆಗಸ್ಟ್ 2017, 19:37 IST
ಅಕ್ಷರ ಗಾತ್ರ

ನವದೆಹಲಿ: ಭೂಸೇನೆಯು ಕಾರ್ಯಾಚರಣೆಗೆ ಬೆಂಬಲವಾಗಿ ತನ್ನದೇ ಆದ ವಾಯು ಘಟಕವೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಅದರ ಭಾಗವಾಗಿ ಅಮೆರಿಕ ನಿರ್ಮಿತ ಆರು ಅಪಾಚೆ–64ಇ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಒಪ್ಪಿಗೆ ನೀಡಿದೆ.

ಭೂಸೇನೆಯು ತನ್ನದೇ ಆದ ವಾಯುನೆಲೆಗಳನ್ನು ಕೂಡ ಅಭಿವೃದ್ಧಿಪಡಿಸುತ್ತಿದೆ. ದೇಶದ ಈಶಾನ್ಯ ಭಾಗದಲ್ಲಿ ವಾಯುನೆಲೆಯೊಂದು ಸಿದ್ಧವಾಗುತ್ತಿದೆ. ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಮತ್ತೊಂದು ನೆಲೆ ಸ್ಥಾಪಿಸಲು ಪ್ರಯತ್ನ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಶಸ್ತ್ರಾಸ್ತ್ರ ಹೊಂದಿರುವ ಹೆಲಿಕಾಪ್ಟರ್‌ಗಳನ್ನು ಭೂಸೇನೆ ಖರೀದಿಸಿದೆ. ಅಪಾಚೆ–64ಇ ಹೆಲಿಕಾಪ್ಟರ್‌ನಲ್ಲಿ ಮೂರು ವಿಧದ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ.

ಕ್ಷಿಪಣಿಗಳು
ಹೆಲ್‌ಫೈರ್‌ ಲಾಂಗ್‌ಬೊ, ಹೆಲ್‌ಫೈರ್‌–2 ಮತ್ತು ಸ್ಟಿಂಗರ್‌ ಕ್ಲಿಪಣಿ
ಇದಲ್ಲದೆ, ಅಗ್ನಿ ನಿಯಂತ್ರಣ ರೇಡಾರ್‌ಗಳನ್ನು ಕೂಡ ಇದು ಹೊಂದಿರುತ್ತದೆ

ವಿವಾದಕ್ಕೆ ಪರಿಹಾರ
ಭೂಸೇನೆಯು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ವಿಚಾರ ಭೂಸೇನೆ ಮತ್ತು ವಾಯುಸೇನೆ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಯುದ್ಧ ಸಾಮರ್ಥ್ಯದ ಹೆಲಿಕಾಪ್ಟರ್‌ಗಳನ್ನು ಭೂಸೇನೆಯು ಖರೀದಿ ಮಾಡುವುದಕ್ಕೆ ವಾಯುಪಡೆ ಆಕ್ಷೇಪ ವ್ಯಕ್ತಪಡಿಸಿತ್ತು.

‘ಸಣ್ಣ ಸಣ್ಣ ವಾಯುಪಡೆಗಳು ತಮಗೆ ಬೇಕಾದುದನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲ’ ಎಂದು ವಾಯುಪಡೆಯ ಮುಖ್ಯಸ್ಥರಾಗಿದ್ದ ಎನ್‌.ಎ.ಕೆ ಬ್ರೌನ್‌ ಹೇಳಿದ್ದರು.ಆದರೆ ತನ್ನದೇ ಆದ ವಾಯುಘಟಕವೊಂದನ್ನು ಹೊಂದರಲು ಭೂಸೇನೆಗೆ ರಕ್ಷಣಾ ಸಚಿವಾಲಯ 2012ರಲ್ಲಿ ಅನುಮತಿ ನೀಡಿತ್ತು.

ರುದ್ರ ಸೇರ್ಪಡೆ
ಹಿಂದುಸ್ಥಾನ್‌ ಎರೊನಾಟಿಕ್ಸ್‌ ಲಿ. ಅಭಿವೃದ್ಧಿಪಡಿಸಿದ 22 ಲಘು ಹೆಲಿಕಾಪ್ಟರ್‌ಗಳನ್ನು ಭೂಸೇನೆಗೆ ಹಸ್ತಾಂತರಿಸಿದೆ. ಈ ಹೆಲಿಕಾಪ್ಟರ್‌ಗಳು ಕೂಡ ಶಸ್ತ್ರಾಸ್ತ್ರಗಳನ್ನು ಹೊಂದಿವೆ.

*
ಆರು ಹೆಲಿಕಾಪ್ಟರ್‌ಗಳಿಗೆ ನೀಡಲಾಗುವ ಮೊತ್ತ ₹4,168 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT