ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಜಿಯಲ್ಲಿ ಭೂಕಂಪನ: 6.4ರಷ್ಟು ತೀವ್ರತೆ ದಾಖಲು

Last Updated 19 ಆಗಸ್ಟ್ 2017, 6:59 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಫಿಜಿಯಲ್ಲಿ 6.4ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಉಂಟಾಗಿದೆ ಎಂದು ಅಮೆರಿಕದ ಭೂಕಂಪನ ಶಾಸ್ತ್ರಜ್ಞರು ಹೇಳಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ಅತ್ಯಂತ ಆಳದಲ್ಲಿದ್ದು, ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಸುವದಿಂದ ಪೂರ್ವಕ್ಕೆ 280 ಕಿ.ಮೀ. ದೂರದಲ್ಲಿ, 538 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕದ ಭೂಗರ್ಭ ಶಾಸ್ತ್ರ ಇಲಾಖೆ ಹೇಳಿದೆ.

ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಕ್ಷಣಕ್ಕೆ ಯಾವುದೆ ಎಚ್ಚರಿಕೆಯನ್ನು ನೀಡಲಿಲ್ಲ.

ಪೆಸಿಫಿಕ್‌ ವ್ಯಾಪ್ತಿಯಲ್ಲಿ ಭೂಖಂಡಗಳ ನಡುವಿನ ಘರ್ಷಣೆಯಿಂದ ಆಗಾಗ್ಗೆ ಭೂಕಂಪನ ಚಟುವಟಿಕೆಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT