ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಸೂರ್ಯ ಗ್ರಹಣದಂದು ‘ಆ್ಯಂಡ್ರಾಯ್ಡ್‌ O’ ಬಿಡುಗಡೆ

Last Updated 19 ಆಗಸ್ಟ್ 2017, 12:04 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಗೂಗಲ್‌ ಸಂಸ್ಥೆಯು ’ಆ್ಯಂಡ್ರಾಯ್ಡ್‌’ ಮೊಬೈಲ್ ಆಪರೇಟಿಂಗ್‌ ಸಿಸ್ಟಮ್‌ನ ಹೊಸ ಆವೃತ್ತಿಯನ್ನು ಇದೇ ತಿಂಗಳು ಹೊರ ತರುವುದಾಗಿ ಪ್ರಕಟಿಸಿದೆ.

ಕಾಲಕ್ಕೆ ತಕ್ಕಂತೆ ಬಳಕೆಗೆ ಅನುಗುಣವಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವ ಆ್ಯಂಡ್ರಾಯ್ಡ್‌, ತನ್ನ ನೂತನ ಆವೃತ್ತಿ 'ಆ್ಯಂಡ್ರಾಯ್ಡ O' ಅನ್ನು ಸಂಪೂರ್ಣ ಸೂರ್ಯ ಗ್ರಹಣ(ಅಗಸ್ಟ್ 21) ದಂದು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಹೇಳಿದೆ.

’ಆ್ಯಂಡ್ರಾಯ್ಡ O’ ನೌಗಾಟ್ ನಂತರದ ಆ್ಯಂಡ್ರಾಯ್ಡ್‌ 8.0 ವರ್ಷನ್‌ ಆಗಿದೆ. ಇಲ್ಲಿಯ ತನಕ ಗೂಗಲ್ 'O' ಎಂದರೇನು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಸಾಮಾನ್ಯವಾಗಿ ಸಿಹಿ ತಿನಿಸುಗಳ ಹೆಸರನ್ನೆ ಆ್ಯಂಡ್ರಾಯ್ಡ್ ತನ್ನ ನೂತನ ಆವೃತ್ತಿಗಳಿಗೆ ಇಡುತ್ತಿದೆ.

ಹಾಗಾಗಿ 'O' ಎಂದರೆ ಒರಿಯೊ ಎಂದೇ ನಂಬಲಾಗಿದೆ. ಆಂಡ್ರಾಯ್ಡ್‌  ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಬ್ಲಾಗ್ ’ಆ್ಯಂಡ್ರಾಯ್ಡ್‌ ಪೊಲೀಸ್‌’ನಲ್ಲಿ ಹೊಸ ಮಾದರಿ ಹೆಸರು ’ಒರಿಯೊ’ ಎಂದು ಗೂಗಲ್ ಆಕಸ್ಮಿಕವಾಗಿ ಪ್ರಕಟಿಸಿದೆ.

’ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಆ್ಯಂಡ್ರಾಯ್ಡ್‌ O ಭೂಮಿಯನ್ನು ಸ್ಪರ್ಶಿಸಲಿದ್ದು, ಹೊಸ ಸಾಮರ್ಥ್ಯವನ್ನು ಹೊತ್ತು ತರಲಿದೆ’ ಎಂದು ಪ್ರಕಟಣೆಯಲ್ಲಿ ಬರೆಯಲಾಗಿದೆ.

ಈ ನೂತನ ಆವೃತ್ತಿಯು ಮೊದಲು ಗೂಗಲ್ ಸಂಸ್ಥೆಯ ’ಪಿಕ್ಸೆಲ್’ ಮತ್ತು ’ನೆಕ್ಸಸ್‌’ ಗಳಲ್ಲಿ ದೊರೆಯಲಿದ್ದು, ನಂತರ ಸ್ಯಾಮ್‌ಸಂಗ್ ಮತ್ತು ನೋಕಿಯ ಫೋನ್‌ಗಳಲ್ಲಿ ಬಳಕೆಗೆ ಸಿಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT