ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಕ್‌ನಲ್ಲಿ ಭಾರತ–ಚೀನಾ ಯೋಧರ ಗುದ್ದಾಟ; ಕಲ್ಲು ತೂರಾಟದಲ್ಲಿ ಗಾಯಗೊಂಡವರು ಅನೇಕ!

Last Updated 19 ಆಗಸ್ಟ್ 2017, 13:53 IST
ಅಕ್ಷರ ಗಾತ್ರ

ಲಡಾಕ್‌: ಒಬ್ಬರನ್ನೊಬ್ಬರು ಹಿಡಿದು ಗುದ್ದುವುದು, ಕೈಗೆ ಸಿಗುವ ಕಲ್ಲು ತೂರುವುದು, ಒದೆಯುತ್ತ ಸಂಘರ್ಷದಲ್ಲಿ ತೊಡಗಿರುವ ಯೋಧರನ್ನು ಈ ವಿಡಿಯೊದಲ್ಲಿ ಕಾಣಬಹುದು. ಇದು ಆಗಸ್ಟ್‌ 15ರಂದು ನಡೆದಿದೆ ಎನ್ನಲಾಗಿರುವ ಭಾರತ–ಚೀನಾ ಯೋಧರ ನಡುವಿನ ಸಂಘರ್ಷ.

(ವಿಡಿಯೊ)

ಭಾರತದ ಸ್ವಾತಂತ್ರ್ಯೋತ್ಸವದ ದಿನದಂದು ಚೀನಾ ಯೋಧರು ಭಾರತೀಯ ಯೋಧರೊಂದಿಗೆ ಗುಡ್ಡಾಟಕ್ಕೆ ಇಳಿದಿರುವುದು ಇಲ್ಲಿ ಕಾಣಬಹುದು. ಪ್ರಾರಂಭದಲ್ಲಿ ಒಬ್ಬರಿಗೊಬ್ಬರು ಹೊಡೆಯುತ್ತಿರುವುದು, ಬಳಿಕ ಕೆಲವೇ ಕ್ಷಣಗಳಲ್ಲಿ ಕಲ್ಲು ತೂರಾಟ. ಜೋರಾದ ಹೊಡೆತದಿಂದಾಗಿ ಯೋಧನೊಬ್ಬ ನೆಲಕ್ಕೆ ಉರುಳಿದ್ದು, ಉಳಿದವರು ಅವರನ್ನು ಹೊತ್ತು ಸಾಗಲು ಪ್ರಯತ್ನಿಸುತ್ತಿದ್ದಾರೆ.

ಲಡಾಕ್ ಪ್ರದೇಶದಲ್ಲಿ ಭಾರತದ ಗಡಿಯೊಳಗೆ ಚೀನಾ ಲಿಬರೇಷನ್ ಆರ್ಮಿ ಪ್ರವೇಶಿಸಲು ಯತ್ನಿಸಿದ್ದರ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ‘ಈ ಬಗ್ಗೆ ತಿಳಿದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಸಿಕ್ಕಿಂ ವಲಯದ ಗಡಿ ಭಾಗ ವಿವಾದದಲ್ಲಿ ಭಾರತ–ಚೀನಾ ಸಿಲುಕಿರುವ ನಡುವೆ ಇಂಥ ಘಟನೆಗಳು ಉಭಯ ರಾಷ್ಟ್ರಗಳ ಸೌಹಾರ್ದತೆಗೆ ಮತ್ತಷ್ಟು ಧಕ್ಕೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT