ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆಯ ವಾರಸುದಾರ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನ್ಯಾಯಾಲಯದ ನ್ಯಾಯ ಪೀಠದ ಮುಂದೆ ದರೋಡೆ ಹಾಗೂ ಕೊಲೆ ಆರೋಪದ ಮೇಲೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಮೂರು ತಲೆಮಾರುಗಳಿಗೆ ಸೇರಿದವರು ಆ ಪ್ರಕರಣದ ಆರೋಪಿಗಳಾಗಿದ್ದರು. ಅಜ್ಜ–ಅಜ್ಜಿ, ಮಗ–ಸೊಸೆ, ಮಕ್ಕಳು.

ನ್ಯಾಯಾಧೀಶರು ಆರೋಪಿಗಳು ಎಲ್ಲರೂ ಹಾಜರು ಇರುವುದನ್ನು ಖಚಿತ ಮಾಡಿಕೊಂಡು, ‘ನೋಡ್ರಿ ಇಲ್ಲಿಯವರೆಗೆ ಸಾಕ್ಷಿಗಳು ಹೇಳುವುದನ್ನ ಕೇಳಿದ್ದೀರಾ? ಎಂದು ಪ್ರಕರಣದಲ್ಲಿ ಸಾಕ್ಷಿಗಳು ಹೇಳಿದ್ದನ್ನು ಪುನರ್ ಉಚ್ಚರಿಸಿದರು. ಮುಂದುವರೆದು ಆರೋಪಿಗಳನ್ನು ಕೇಳಿದರು, ‘ಎಲ್ಲಾ ಕೇಳಿಸಿಕೊಂಡ್ರಾ? ಇದಕ್ಕೆ ಏನು ಹೇಳುತ್ತಿರಿ?’ ಎಂದು. ಎಲ್ಲಾ ಆರೋಪಿಗಳು ‘ಸುಳ್ಳು’ ಎಂದು ಒಕ್ಕೊರಲಿನಿಂದ ಹೇಳಿದರು.

ಸ್ವಲ್ಪ ತಡವಾಗಿ ಸಣ್ಣ ಧ್ವನಿಯೊಂದು ‘ಸುಳ್ಳು’ ಎಂದು ಗುನುಗಿತು. ಆ ದನಿ ಮುಂದಿನ ಭಾರತದ ಪ್ರಜೆಯದ್ದಾಗಿತ್ತು. ಐದು ವರ್ಷಗಳ ಮೊಮ್ಮಗ ಇದ್ದ. ಆರೋಪಿಯಾಗಿ ಅಲ್ಲದಿದ್ದರೂ ಇಡಿ ಕುಟುಂಬದ ಜೊತೆ ಅವನು ಆರೋಪಿಗಳ ಸಾಲಿನಲ್ಲಿ ಅಜ್ಜನ ಮುಂದೆ ಕೈ ಮುಗಿದು ನಿಂತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT