ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ತಿಕ್ ಯೂನಿಯನ್‌ಗೆ ಪ್ರಶಸ್ತಿ

ಕೆಎಸ್‌ಸಿಎ ಅಂತರ ಕ್ಲಬ್‌ ಕ್ರಿಕೆಟ್‌
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶುಭಾಂಗ್‌ ಹೆಗಡೆ (15ಕ್ಕೆ4) ಹಾಗೂ ದೇವದತ್‌ ಪಡಿಕ್ಕಲ್‌ (62) ಅವರ ಉತ್ತಮ ಆಟದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಸ್ವಸ್ತಿಕ್ ಯೂನಿಯನ್ ತಂಡ ಇಲ್ಲಿ ನಡೆದ 19 ವರ್ಷದೊಳಗಿನವರ ಕೆಎಸ್‌ಸಿಎ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ವಲ್ಚರ್ಸ್‌ ಕ್ಲಬ್‌ ಎದುರು ಜಯದಾಖಲಿಸುವ ಮೂಲಕ ಚಾಂಪಿಯನ್‌ ಆಗಿದೆ.

ವಲ್ಚರ್ಸ್‌ ಕ್ಲಬ್ ವಿರುದ್ಧದ ಪಂದ್ಯವನ್ನು ಸ್ವಸ್ತಿಕ್ ಯೂನಿಯನ್ ತಂಡ ಡ್ರಾ ಮಾಡಿಕೊಂಡಿತ್ತು. ಆದರೆ ಮೊದಲ ಇನಿಂಗ್ಸ್ ಮುನ್ನಡೆಯ ನೆರವಿನಿಂದ ಈ ತಂಡಕ್ಕೆ ಪ್ರಶಸ್ತಿ ಒಲಿದಿದೆ. ಮೊದಲ ಇನಿಂಗ್ಸ್‌ನಲ್ಲಿ ಸ್ವಸ್ತಿಕ್ ತಂಡ 45.1 ಓವರ್‌ಗಳಲ್ಲಿ 8 ವಿಕೆಟ್‌ಗೆ 184 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ವಲ್ಚರ್ಸ್ ಕ್ಲಬ್‌ 49.3 ಓವರ್‌ಗಳಲ್ಲಿ ಕೇವಲ 101 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ದೇವದತ್ ಪಡಿಕ್ಕಲ್ ಸ್ವಸ್ತಿಕ್ ತಂಡಕ್ಕೆ ಉತ್ತಮ ಇನಿಂಗ್ಸ್ ಕಟ್ಟುವ ಮೂಲಕ ನೆರವಾದರು. ಅವರು 62 ರನ್‌ಗಳನ್ನು ದಾಖಲಿಸಿದರು. ಸುಜನ್ ಸತೇರಿ 43 ರನ್‌ಗಳ ನೆರವು ನೀಡಿದರು. ಶುಭಾಂಗ್ ಹೆಗಡೆ ಎದುರಾಳಿ ತಂಡದ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದರು. ಕೇವಲ 15 ರನ್‌ಗಳನ್ನು ಅವರು ನೀಡಿದರು.

ಸಂಕ್ಷಿಪ್ತ ಸ್ಕೋರು
ವಲ್ಚರ್ಸ್ ಕ್ಲಬ್‌: 49.3 ಓವರ್‌ಗಳಲ್ಲಿ 101 (ಸುರನ್ ಮುತ್ತೂರ್‌ 31; ವಿದ್ಯಾಧರ ಪಾಟೀಲ 32ಕ್ಕೆ3, ಶುಭಾಂಗ್‌ ಹೆಗಡೆ 15ಕ್ಕೆ4, ಶುಭಂ ಸಿನ್ಹಾ 26ಕ್ಕೆ2). ಸ್ವಸ್ತಿಕ್ ಯೂನಿಯನ್ ಕ್ಲಬ್‌ (ಸಿ): 45.1 ಓವರ್‌ಗಳಲ್ಲಿ 8 ವಿಕೆಟ್‌ಗೆ 184 (ದೇವದತ್ ಪಡಿಕ್ಕಲ್‌ 62, ಗೌತಮ್ ಸಾಗರ್‌ 38, ಸುಜನ್ ಸತೇರಿ 43, ರುಚಿತ್ ಜೋಷಿ
32ಕ್ಕೆ2, ಅಮಯ್ ಶುಭಾಂಗ್‌ 35ಕ್ಕೆ2). ಸ್ವಸ್ತಿಕ್ ಯೂನಿಯನ್ ತಂಡಕ್ಕೆ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT