ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್‌: ₹ 3,644 ಕೋಟಿ ಲಾಭ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) 2016–17ನೇ ಆರ್ಥಿಕ ವರ್ಷದಲ್ಲಿ ₹ 59,415 ಕೋಟಿ ಮೊತ್ತದ ವಹಿವಾಟು ನಡೆಸಿದ್ದು, ₹ 3,644 ಕೋಟಿ ನಿವ್ವಳ ಲಾಭ ಗಳಿಸಿದೆ.

ಶನಿವಾರ ನಡೆದ ಕಂಪೆನಿಯ ವಾರ್ಷಿಕ ಸರ್ವ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಆರ್‌ಪಿಎಲ್‌ ಅಧ್ಯಕ್ಷ ದಿನೇಶ್ ಕೆ.ಸರಾಫ್‌, ‘ಕಂಪೆನಿ 2014–15ರಲ್ಲಿ ₹ 1,712 ಕೋಟಿ ನಷ್ಟ ಅನುಭವಿಸಿತ್ತು. 2015–16ರಲ್ಲಿ ತೆರಿಗೆ ಪಾವತಿಯ ನಂತರ ₹ 1,148 ಕೋಟಿ ಲಾಭ ಗಳಿಸಿತ್ತು. 2016–17ರಲ್ಲಿ ತೆರಿಗೆ ಪಾವತಿಯ ನಂತರ ₹ 3,644 ಕೋಟಿ ಲಾಭ ಗಳಿಸಿದೆ’ ಎಂದು ತಿಳಿಸಿದರು.

‘ಷೇರುದಾರರಿಗೆ ₹ 10ರ ಮುಖಬೆಲೆಯ ಪ್ರತಿ ಷೇರಿಗೆ ₹ 6ರಂತೆ ಲಾಭಾಂಶ ವಿತರಿಸಲಾಗುವುದು. ಒಟ್ಟು ₹ 1,020 ಕೋಟಿ ಲಾಭಾಂಶ ವಿತರಿಸಲಾಗುತ್ತದೆ. ಕಂಪೆನಿಯ ಅತಿದೊಡ್ಡ ಪಾಲುದಾರ ಸರ್ಕಾರಿ ಸ್ವಾಮ್ಯದ ಓಎನ್‌ಜಿಸಿಗೆ ₹ 753 ಕೋಟಿ ಲಾಭಾಂಶದ ಚೆಕ್‌ ಹಸ್ತಾಂತರ ಮಾಡಲಾಗಿದೆ. 2015–16ರಲ್ಲಿ ಎಂಆರ್‌ಪಿಎಲ್‌ನ ಒಟ್ಟು ವಹಿವಾಟು ₹ 50,864 ಕೋಟಿ ಇತ್ತು. 2016–17ರಲ್ಲಿ ಅದು ₹ 59,415 ಕೋಟಿಗೆ ಹೆಚ್ಚಳವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT