ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಅಸಹಕಾರ ಚಳವಳಿ

Last Updated 20 ಆಗಸ್ಟ್ 2017, 9:28 IST
ಅಕ್ಷರ ಗಾತ್ರ

ವಿಜಯಪುರ: ‘ತಾಲ್ಲೂಕು ಕೇಂದ್ರವನ್ನಾಗಿ ಪಟ್ಟಣವನ್ನು ಸರ್ಕಾರ ಘೋಷಣೆ ಮಾಡದಿದ್ದಲ್ಲಿ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಮಾಡುವ ಮೂಲಕ ನಾವು ನ್ಯಾಯ ಪಡೆಯುತ್ತೇವೆ’ ಎಂದು ಹೋರಾಟಗಾರ ಬಿ.ಕೆ.ಶಿವಪ್ಪ ಹೇಳಿದರು. ಇಲ್ಲಿನ ಶಿವಗಣೇಶ ಸರ್ಕಲ್ ನಲ್ಲಿ ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ವತಿಯಿಂದ ನಡೆ ಯುತ್ತಿರುವ ಅನಿರ್ದಿಷ್ಟಾವಧಿ 5ನೇ ದಿನದ ಧರಣಿಯಲ್ಲಿ ಮಾತನಾಡಿದರು.

ವಿಜಯಪುರ, ಸುತ್ತಮುತ್ತಲಿನ ಗ್ರಾಮಗಳ ಜನರ ನಿರೀಕ್ಷೆ, ಹಾಗೂ ಸರ್ಕಾರದ ಉದ್ದೇಶದಂತೆ ಯೋಜನೆಗಳು ಮುಟ್ಟುತ್ತಿಲ್ಲ. ಇಲ್ಲಿನ ಜನರು ಅಭಿವೃದ್ಧಿಯಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು. ಹೋರಾಟಗಾರ ಜಿ.ಟಿ.ಸದಾ ಶಿವರೆಡ್ಡಿ ಮಾತನಾಡಿ, ‘ವಿಜಯಪುರ ತಾಲ್ಲೂಕು ಕೇಂದ್ರವಾದರೆ, ತಾಲ್ಲೂಕು ಪಂಚಾಯಿತಿ ಇಲ್ಲೆ ಆಗುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಜನರು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಂಡು ನಿರಾ ಯಾಸವಾಗಿ ಕೆಲಸ ಕಾರ್ಯ ಮಾಡಿ ಕೊಳ್ಳಬಹುದಾಗಿದೆ’ ಎಂದರು.

ಹೋರಾಟಗಾರ ಗಜೇಂದ್ರ ಮಾತನಾಡಿ, ‘ಜನಪ್ರತಿನಿಧಿಗಳು ಅಭಿವೃದ್ಧಿ ಪರವಾಗಿದ್ದರೆ, ತಾಲ್ಲೂಕು ಕೇಂದ್ರಕ್ಕಾಗಿ ಸರ್ಕಾರದ ಮೇಲೆ ಒತ್ತಡ ವೇರಲಿ, ಐದು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಇಲ್ಲಿನ ಜನರಿಂದ ಮತ ಪಡೆದು ಹೋಗಿರುವವರು ಈ ಕಡೆಗೆ ತಿರುಗಿಯೂ ನೋಡಿಲ್ಲ’ ಎಂದು ಹೇಳಿದರು.

ಕರವೇ ವಿ.ರಾ.ಶಿವಕುಮಾರ್ ಮಾತ ನಾಡಿದರು. ಬೆಳಿಗ್ಗೆ ರಾಷ್ಟ್ರಗೀತೆಯೊಂದಿಗೆ ಹೋರಾಟ ಆರಂಭಿಸಲಾಯಿತು. ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹೋರಾಟದ ಗೀತೆಗಳೊಂದಿಗೆ ಚಾಲನೆ ನೀಡಿದರು. ಕನ್ನಡ ಪರ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು, ಕಲಾವಿದರ ಸಂಘ, ರೈತ ಪರ ಸಂಘಟನೆಗಳು, ಹೋರಾಟಕ್ಕೆ ಬೆಂಬಲ ನೀಡಿದ್ದರು.

ಹೋರಾಟಗಾರರಾದ ಎನ್. ರಾಜ ಗೋಪಾಲ್, ಕನಕರಾಜು, ಮಹೇಶ್ ಕುಮಾರ್, ಬಿ.ಎಸ್.ಪ್ರವೀಣ್ಕುಮಾರ್, ನಾರಾಯಣಸ್ವಾಮಿ, ಪಾಲ್ ಮುನಿ ಕೃಷ್ಣಪ್ಪ, ಪ್ರಭಾಕರ್, ರವಿ ಕುಮಾರ್, ಮುನಿವೆಂಕಟರವಣಪ್ಪ, ಎಸ್.ಮಂಜುನಾಥ್, ಅಶ್ವಥ್ಥಪ್ಪ, ಎನ್. ದೇವರಾಜ್, ಚಿಕ್ಕನಹಳ್ಳಿ ಪಿಳ್ಳಪ್ಪ, ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT