ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ಕ್ಕೆ ಕೇರಳದಲ್ಲಿ 9 ಲಕ್ಷ ಕಾರ್ಯಕರ್ತರನ್ನು ಹೊಂದುವುದು ಆರ್‌ಎಸ್‌ಎಸ್‌ ಗುರಿ

Last Updated 20 ಆಗಸ್ಟ್ 2017, 9:54 IST
ಅಕ್ಷರ ಗಾತ್ರ

ನವದೆಹಲಿ: ಕೇರಳದಲ್ಲಿ ತನ್ನ ಪ್ರಬಲ್ಯ ಹೆಚ್ಚಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ನಿರ್ಧರಿಸಿದ್ದು, 2019ರ ವೇಳೆಗೆ 9 ಲಕ್ಷ ಕಾರ್ಯಕರ್ತರನ್ನು ಹೊಂದುವ ಗುರಿ ಇದೆ ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಜೆ. ನಂದಕುಮಾರ್‌ ಹೇಳಿದ್ದಾರೆ.

‘ಕೇರಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಹಲ್ಲೆಗಳು ಹೆಚ್ಚಾಗುತಲ್ಲೇ ಇವೆ. ಆದರೂ ಅಲ್ಲಿ ತನ್ನ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ.

ಇದುವರೆಗೂ ಕೇರಳದಲ್ಲಿ ನಡೆದಿರುವ ದಾಳಿಗಳು ವಾಸ್ತವವಾಗಿ ರಾಷ್ಟ್ರೀಯ ಹಾಗೂ ಸಮಾಜದೆಡೆಗಿನ ನಮ್ಮ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ನಾವು ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, 2019ರ ವೇಳೆಗೆ 9 ಲಕ್ಷ ಕಾರ್ಯಕರ್ತರನ್ನು ಹೊಂದುವ ಗುರಿ ನಮ್ಮ ಮುಂದಿದೆ ಎಂದಿದ್ದಾರೆ.

ಪ್ರಸ್ತುತ ಕೇರಳದಲ್ಲಿ ಐದು ಸಾವಿರ, ಗುಜರಾತ್‌ನಲ್ಲಿ ಒಂದು ಸಾವಿರ ಆರ್‌ಎಸ್‌ಎಸ್‌ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಹೆಚ್ಚು ಜನ ಸೇರ್ಪಡೆಯಾಗಲಿದ್ದು, ನಮ್ಮ ವಿರೋಧಿಗಳಿಗೆ ಸವಾಲೊಡ್ಡಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT