ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆ ನಮ್ಮ ಉತ್ತರ

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ನನ್ನ ಹೆಸರು ತೇಜಸ್. ನಾನು ಅಂತಿಮ ವರ್ಷದ ಬಿ.ಇ (ಸಿವಿಲ್) ಓದುತ್ತಿದ್ದೇನೆ. ನಾನು ಎಂ.ಆರ್ಕ್‌ ಡಿಗ್ರಿ ಪ್ರವೇಶ ಪಡೆಯಲು ಸಾಧ್ಯವೇ?. ಇದಕ್ಕೆ ಪೂರಕವಾಗಿ ಯಾವ ಪರೀಕ್ಷೆ ಬರೆಯಬೇಕು? 
ನೀವು ಮುಂಚಿತವಾಗಿ ಸಿದ್ಧತೆ ಮಾಡುತ್ತಿರುವುದು ಸಂತೋಷದ ವಿಷಯ. ಸಿವಿಲ್ ಇಂಜಿನಿಯರಿಂಗ್ ನಂತರ ಹಲವಾರು ಸ್ನಾತಕೋತ್ತರ ಕೋರ್ಸ್‌ಗಳನ್ನು ಮಾಡಬಹುದು. ಎಂ.ಆರ್ಕ್‌ ಪಿಜಿ ಕೋರ್ಸ್‌ಗೆ ಬಿ.ಆರ್ಕ್ ಎಲಿಜಿಬಿಲಿಟಿ ಬೇಕು. ಪಿಜಿ ಲೆವೆಲ್‌ನಲ್ಲಿ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಚ್‌ರ್, ಆರ್ಕಿಟೆಕ್ಚರಲ್‌ ಕನ್‌ಸರ್‌ವೇಷನ್ ಅರ್ಬನ್‌ ಡಿಸೈನಿಂಗ್ ಬಿಲ್ಡಿಂಗ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌, ಎನ್ವಿರಾನ್‌ ಮೆಂಟಲ್ ಪ್ಲಾನಿಂಗ್ ಹೌಸ್, ಟ್ರಾನ್ಸ್‌ಪೋರ್ಟ್ ಪ್ಲಾನಿಂಗ್, ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಇಂಡಸ್ಟ್ರೀಯಲ್ ಡಿಸೈನ್ ಹೀಗೆ ವಿಶೇಷ ಕೋರ್ಸ್‌ಗಳಿವೆ. ಎಂ.ಆರ್ಕ್ ಕೋರ್ಸ್ 2 ವರ್ಷದ್ದು. ಗೇಟ್ ಪ್ರವೇಶಪರೀಕ್ಷೆ ತೆಗೆದುಕೊಳ್ಳಬೇಕು. ಇದನ್ನು ಐಐಟಿಗಳು ಹಾಗೂ ಐಐಎಸ್‌ಸಿಯವರು ಎಂಎಚ್‌ಆರ್‌ಡಿ, ಭಾರತ ಸರ್ಕಾರ ಇದರ ಪರವಾಗಿ ನಡೆಸುತ್ತಾರೆ. ಈ ಪರೀಕ್ಷೆಯ ರ್‍ಯಾಂಕಿಂಗ್ ಮೇರೆಗೆ ನೀವು ಐಐಟಿ ಮತ್ತು ಐಐಎಸ್ಸ್‌ಸಿಯಲ್ಲಿ ಇರುವ ಪಿಜಿ ಕೋರ್ಸ್‌ಗೆ ಅರ್ಹತೆ ‍ಪಡೆಯುತ್ತೀರಿ. ಈ ಪರೀಕ್ಷೆಯ ಫಲಿತಾಂಶ 3 ವರ್ಷಗಳವರೆಗೆ ಗಣ್ಯತೆಗೆ ತೆಗೆದುಕೊಳ್ಳುತ್ತಾರೆ.
ಐಐಟಿ ಕೋರ್ಸ್‌ನಲ್ಲಿ ಅರ್ಬನ್ ಮತ್ತು ರೂರಲ್‌ ಪ್ಲಾನಿಂಗ್ ಕೋರ್ಸ್ ಇದೆ. ಗೇಟ್ ಪರೀಕ್ಷೆಯ ಪ್ರಕಟಣೆ ಸೆಪ್ಟೆಂಬರ್ 1, 2017 ಎಂದು ಬರುತ್ತದೆ. ಐಐಟಿಗಳಲ್ಲದೇ ಭಾರತದಲ್ಲಿ ಹಲವಾರು ಯೂನಿವರ್ಸಿಟಿಗಳು ಸಹ ಈ ಕೋರ್ಸ್‌ಗಳನ್ನು ನಡೆಸುತ್ತದೆ. ಅದಕ್ಕೆ ಅವರದೇ ಆದ ಪಿಜಿಸಿಇಟಿ ‍ಪರೀಕ್ಷೆಗಳನ್ನು ಬರೆಯಬೇಕು.

* ನನ್ನ ಹೆಸರು ಅಭಿಷೇಕ ಕುಮಾರ್. ನಾನು ದ್ವಿತೀಯ ‌‌‌‌ಪಿಯುಸಿ ಓದುತಿದ್ದೇನೆ. ನನಗೆ ಮುಂದೆ ರೋಬೊಟಿಕ್ಸ್ ಇಂಜಿನಿಯರಿಂಗ್ ಕೋರ್ಸ್ ಮಾಡುವ ಆಸೆ. ಅದಕ್ಕೆ ಬೇಕಾದ ಕೋರ್ಸ್ ಬಗ್ಗೆ ತಿಳಿಸಿ ಕೊಡಿ.
ರೋಬೊಟಿಕ್ಸ್ ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ನೀವು ರೋಬೊಟ್‌ಗಳನ್ನು ತಯಾರಿಸಿ ಕೆಲಸ ಮಾಡುವುದನ್ನು ಕಲಿಯುತ್ತೀರಿ. ಇಂದಿನ ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ರೋಬೊಟ್‌ಗಳು ಸರ್ಜರಿ  ಮಾಡುವುದು, ಸಿ ಏಕ್ಸ್‌ಪ್ಲೋರೇಶನ್, ಸರ್ವಿಂಗ್ ಟ್ರಾನ್ಸ್‌ಮಿಶನ್‌ ಎಲೆಕ್ಟ್ರಿಕ್ ಸೈನ್ಸ್‌, ನ್ಯೂಕ್ಲಿಯರ್ ಸ್ಟೈನ್ಸ್, ಬಯೋ ಮೆಡಿಕಲ್ ಟೂಲ್ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಉಪಯೋಗವಾಗುತ್ತಿದೆ.
ಇದಕ್ಕೆ ಪಿಯುಸಿಯಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತಶಾಸ್ತ್ರದ ಕಾಂಬಿನೇಷನ್‌ ತೆಗೆದುಕೊಳ್ಳಬೇಕು. ರೋಬೊಟಿಕ್ಸ್‌ ಎಂಜಿನಿಯರಿಂಗ್ ಪಿಜಿ ಲೆವೆಲ್‌ನಲ್ಲಿ ಹಲವು ಐಐಟಿಗಳಲ್ಲಿ ಇದೆ. ಮೆಕಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದವರು ಸಹ ರೋಬೊಟಿಕ್ಸ್‌ ಎಂಜಿನಿಯರಿಂಗ್ ಮಾಡಬಹುದು. ಐಐಟಿಎಸ್ ಮತ್ತು ಐಐಎಸ್‌ಸಿನಲ್ಲಿ ಸ್ನಾತಕೋತ್ತರ ಪದವಿ ಸಂಬಂಧಿಸಿದಂತೆ ಇದೆ.
ಪದವಿ ಕೋರ್ಸ್‌ಗಳಿಗೆ ಜೆಇಇ, ಕೆಸಿಇಟಿ, ಎಐಇಇಇ, ಬಿಐಟಿಎಸ್‌ಎಟಿ ಪರೀಕ್ಷೆಗಳನ್ನು ಬರೆಯಿರಿ. ಪಿಜಿ ಲೆವೆಲ್‌ನಲ್ಲಿ ಹಲವಾರು ಯೂನಿರ್ವಸಿಟಿಗಳು ರೋಬೊಟಿಕ್ಸ್‌ಗೆ ಮಾನ್ಯತೆ ನೀಡುತ್ತವೆ.

* ನನ್ನ ಹೆಸರು ಆಕಾಶ್, ನಾನು ಸಿರಗುಪ್ಪ ವಿಕೆಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ತೋಟಗಾರಿಕಾ ಎಂಜಿನಿಯರಿಂಗ್ ಕೋರ್ಸ್‌ನ ಬಗ್ಗೆ ವಿಸ್ತಾರವಾಗಿ ತಿಳಿಸಿ.
ನೀವು ಅಪರೂಪದ ಕೋರ್ಸ್‌ ಅನ್ನು ಆಯ್ಕೆ ಮಾಡಲು ಇಚ್ಛಿಸಿದ್ದೀರಿ. ಪಿಯುಸಿನಲ್ಲಿ  ಭೌತವಿಜ್ಞಾನ, ಗಣಿತಶಾಸ್ತ್ರ, ರಸಯಾನವಿಜ್ಞಾನ, ಜೀವವಿಜ್ಞಾನ ತೆಗೆದುಕೊಂಡಿರಬೇಕು.  ಬಿ.ಎಸ್ಸಿ (ತೋಟಗಾರಿಕೆ)  3/4 ವರ್ಷದ ಕೋರ್ಸ್. ಉದಾಹರಣೆಗೆ ಈ ಕೆಳಗಿನ ಕಾಲೇಜುಗಳಲ್ಲಿ ಇದೆ.
1. ಕಾಲೇಜ್ ಆಫ್‌ ಅಗ್ರಿಕಲ್ಚರ್‌
2. ಸೌತ್‌ ಗುಜರಾತ್ ಯೂನಿವರ್ಸಿಟಿ, ಸೂರತ್
3. ಕಾಲೇಜ್ ಆಫ್‌ ಅಗ್ರಿಕಲ್ಚರ್‌ ಹೈದ್ರಾಬಾದ್‌
4. ಅಲಿಘರ್ ಮುಸ್ಲಿಂ ಯೂನಿವರ್ಸಿಟಿ ಮುಂಬೈ
5. ಮುಂಬೈ ಯೂನಿವರ್ಸಿಟಿ, ಮುಂಬೈ ಇನ್ನೂ ಅನೇಕ...
ಕೆಸಿಇಟಿ  ಮೂಲಕ ಬಿ.ಎಸ್ಸಿ (ತೋಟಗಾರಿಕೆ) ಮತ್ತು ಬಿ.ಟೆಕ್ ಇನ್ ಅಗ್ರಿಕಲ್ಚರ್ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೇರಬಹುದು. ಕೆಸಿಇಟಿ ಅಡ್ವಟೈಸ್‌ಮೆಂಟ್ ಜನವರಿ ತಿಂಗಳಲ್ಲಿ ಬರುತ್ತದೆ. ಪಿ.ಯು.ಸಿ. ಮತ್ತು ಪ್ರವೇಶ ಪರೀಕ್ಷೆ ಎರಡರಲ್ಲೂ ಚೆನ್ನಾಗಿ ಮಾಡಿ.

* ನನ್ನ ಹೆಸರು ಅದಿತ್‌, ನಾನು ಆಳ್ವಾಸ್ ಪಿಯು ಕಾಲೇಜಿನಲ್ಲಿ ಓದಿದ್ದೇನೆ. ಪಿಯುಸಿಯಲ್ಲಿ ಶೇ.86 ಅಂಕ ಗಳಿಸಿದ್ದೇನೆ. ನೀಟ್ ಪರೀಕ್ಷೆಯಲ್ಲಿ 3 ಲಕ್ಷ ರ್‍ಯಾಂಕ್‌ ಗಳಿಸಿದ್ದೆ. ಆದರೆ ಮೆಡಿಕಲ್ ಸೀಟು ದೊರಕಲಿಲ್ಲ. ಈಗ ವೈದ್ಯಕೀಯಕ್ಕೆ ಸಂಬಂಧಿಸಿದ ಯಾವ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಲಿ. ನನಗೆ ಜೀವವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇದೆ. ಮತ್ತೊಂದು ಪ್ರಶ್ನೆ ಎಂದರೆ ಬಿ.ಎಸ್ಸಿ ಕಾರ್ಡಿಯಾಲಜಿ ಕೋರ್ಸ್‌ ಉತ್ತಮವೇ? ಈ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಉದ್ಯೋಗ ಪಡೆದುಕೊಳ್ಳುವ ದೃಷ್ಟಿಯಿಂದ ಉತ್ತಮವೇ?
ಪ್ರತಿಯೊಂದು ಪ್ರವೇಶ ಪರೀಕ್ಷೆ ಮಾಡುವುದು, ವಿದ್ಯಾರ್ಥಿಗಳ ಅರ್ಹತೆಯನ್ನು ಪರೀಕ್ಷಿಸಲು. ಆ್ಯಪ್ಟಿಟ್ಯೂಡ್ ಇಲ್ಲದೆ ಇರುವ ಕೋರ್ಸ್‌ ಅನ್ನು ಮಾಡಿದರೆ, ವೃತ್ತಿಯಲ್ಲಿ ಜಯಶಾಲಿಗಳಾಗುವುದಿಲ್ಲ. ಮೆಡಿಕಲ್ ಸೀಟು ಸಿಕ್ಕದಿದ್ದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಅನ್ನು ಮಾಡಿ. ನರ್ಸಿಂಗ್, ಫಿಸಿಯೋಥೆರಪಿ,  ಬಿ ಫಾರ್ಮಾ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಕಾರ್ಡಿಯಾಕ್ ಕೇರ್‌ ಟೆಕ್ನಿಷಿಯನ್‌, ರೆಡಿಯೋಗ್ರಫಿ ಇನ್ನೂ ಅನೇಕ. ಜೀವವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಅಂದರೆ ಬಿ.ಎಸ್ಸಿ ಬಯೋಟೆಕ್ನಾಲಜಿ, ಜೆನೆಟಿಕ್ಸ್‌, ಮೈಕ್ರೋಬಯಾಲಜಿ ಇತರ. ಸೈಕೋ– ಸೋಷಿಯಲ್ ರಿಹೆಬಿಲಿಟೇಷನ್ ಕೋರ್ಸ್ ಕೂಡ ಮಾಡಬಹುದು. ಬಿ.ಎಸ್ಸಿ ಇನ್ ಸ್ವೀಚ್ ಅಂಡ್ ಹಿಯರಿಂಗ್ ಕೂಡ ಒಂದು ಭಿನ್ನವಾದ ಕೋರ್ಸ್.
ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದರೆ ಕೂಡ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಯನ್ನು ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT