ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರೆ ಕಿನಾರೆಯ ಚೆಲುವು ನೋಡಿರಿ...

Last Updated 21 ಆಗಸ್ಟ್ 2017, 6:07 IST
ಅಕ್ಷರ ಗಾತ್ರ

ಹೊಸಪೇಟೆ: ದಿನದಿಂದ ದಿನಕ್ಕೆ ತುಂಗಭದ್ರೆಯ ಒಡಲಿನಲ್ಲಿ ನೀರಿನ ಸಂಗ್ರಹ ಅಧಿಕವಾಗುತ್ತಿದ್ದು, ಜಲಾ ಶಯದ ಕಿನಾರೆಗೆ ವಿಶೇಷ ಕಳೆ ಬಂದಿದೆ. ಐದಾರು ತಿಂಗಳಿಂದ ನೀರಿಲ್ಲದೇ ಸೊರಗಿದ ನದಿ ದಂಡೆಯಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಮಳೆಯಿಂದ ಸುತ್ತಲಿನ ಪರಿಸರ ಹಚ್ಚ ಹಸಿರಾಗಿದೆ. ನದಿ ನಟದಲ್ಲಿ ನಿಂತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರೆ ಮನಸ್ಸಿಗೆ ಏನೋ ನೆಮ್ಮದಿ. ಪ್ರಕೃತಿಯ ಮಡಿಲಲ್ಲಿ ನಿಂತ ಅನುಭವ.

ನದಿ ಕಿನಾರೆ ಕೆಲವರಿಗೆ ಮೋಜು ಮಸ್ತಿಯ ತಾಣವಾದರೆ, ಮತ್ತೆ ಕೆಲವರು ಭಕ್ತಿಯಿಂದ ಅದರಲ್ಲಿ ಮಿಂದೆದ್ದು ಪುನೀತರಾಗುತ್ತಿದ್ದಾರೆ. ಹೊಸಪೇಟೆ–ಚಿತ್ರದುರ್ಗ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಸುರಂಗ ಮಾರ್ಗ ದಾಟಿದೊಡನೆ ಕಣ್ಣಿಗೆ ಕಾಣುವ ತುಂಗಭದ್ರೆಯ ತೀರ ಇದೀಗ ತನ್ನ ಸೌಂದರ್ಯದಿಂದ ಎಲ್ಲ ರನ್ನು ಆಕರ್ಷಿಸುತ್ತಿದೆ. ಹೀಗಾಗಿಯೇ ಕಳೆದ ಕೆಲವು ದಿನಗಳಿಂದ ಗುಂಡಾ ಅರಣ್ಯದಂಚಿನ ನದಿ ತಟದಲ್ಲಿ ನಿತ್ಯ ಪ್ರವಾಸಿಗರ ದಂಡು ಕಾಣಿಸಿಕೊಳ್ಳುತ್ತಿದೆ.

ಸ್ಥಳೀಯರು, ಹಂಪಿಗೆ ಭೇಟಿ ಕೊಡುವ ಪ್ರವಾಸಿಗರು, ರಾಷ್ಟ್ರೀಯ ಹೆದ್ದಾರಿ ಮೂಲಕ ದೂರದ ಊರು ಗಳಿಗೆ ಹೋಗುವವರು ಕೆಲಹೊತ್ತು ನದಿ ತಟದಲ್ಲಿ ಕಾಲ ಕಳೆದು ಹೋಗುತ್ತಿ ದ್ದಾರೆ. ಕುಟುಂಬ ಸದಸ್ಯರು, ಗೆಳೆಯರು ಒಟ್ಟಿಗೆ ಬಂದು ನದಿಯಲ್ಲಿ ಈಜಾಡಿ, ಅಲೆಗಳನ್ನು ನೋಡಿ ಆನಂದ ಪಡುತ್ತಿದ್ದಾರೆ. ಅಷ್ಟೇ ಅಲ್ಲ, ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸುಂದರ ನೆನಪು ಗಳೊಂದಿಗೆ ಮರಳುತ್ತಿದ್ದಾರೆ. ಪವಿತ್ರ ನೀರನ್ನು ಊರಿಗೆ ಕೊಂಡೊಯ್ಯುತ್ತಿದ್ದಾರೆ.

ನದಿ ಕಿನಾರೆಗೆ ಪ್ರವಾಸಿಗರು ಬರುತ್ತಿರುವುದರಿಂದ ಇಲ್ಲಿನ ಗುಂಡಾ ಸಸ್ಯೋದ್ಯಾನಕ್ಕೂ ಈಗ ವಿಶೇಷ ಕಳೆ ಬಂದಿದೆ. ಈಗಷ್ಟೇ ಅಭಿವೃದ್ಧಿ ಕಾಣು ತ್ತಿರುವ ಗುಂಡಾ ಉದ್ಯಾನದಲ್ಲಿ ಬೆಳಿಗ್ಗೆ ಯಿಂದ ಸಂಜೆಯ ವರೆಗೆ ಜನಜಾತ್ರೆ ಕಾಣಿಸಿಕೊಳ್ಳುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ನೀರಿದ್ದರೆ ಮಾತ್ರ ಇದಕ್ಕೆ ವಿಶೇಷ ಕಳೆ.

ಉದ್ಯಾನದಲ್ಲಿ ಅಲೆಗಳ ಅಬ್ಬರವನ್ನು ನೋಡುವುದಕ್ಕೆಂದೇ ಜನ ಬರುತ್ತಾರೆ. ಆದರೆ, ಹಿನ್ನೀರಿನಲ್ಲಿ ನೀರಿಲ್ಲದಿದ್ದ ಕಾರಣಕ್ಕೆ ಐದಾರೂ ತಿಂಗಳಿಂದ ಜನ ಇಲ್ಲಿಗೆ ಭೇಟಿ ಕೊಡುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಆದರೆ, ಈಗ ಇದಕ್ಕಿದ್ದಂತೆ ಜನರ ಓಡಾಟ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆ ಯಲ್ಲಿ ಜನ ಭೇಟಿ ಕೊಡುತ್ತಿರುವುದ ರಿಂದ ಸಣ್ಣ ವ್ಯಾಪಾರಿಗಳ ಬದುಕು ಮತ್ತೆ ಚೇತರಿಸಿಕೊಂಡಿದೆ. ಮೆಕ್ಕೆ ಜೋಳ, ಕಡಲೆಕಾಯಿ, ಐಸ್‌ಕ್ರೀಂ ಮಾರಾಟ ಮಾಡಿ ಕೈತುಂಬ ಹಣ ಗಳಿಸುತ್ತಿದ್ದಾರೆ.

‘ತುಂಗಭದ್ರಾ ಹಿನ್ನೀರಿನಲ್ಲಿ ನೀರಿ ಲ್ಲದ ಕಾರಣ ಜನ ಇಲ್ಲಿಗೆ ಬರುವುದು ಕಡಿಮೆಯಾಗಿತ್ತು. ಕಳೆದ ತಿಂಗಳಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾ ಗಿದ್ದು, ಈಗ ನಿತ್ಯ ವಿವಿಧ ಕಡೆಗಳಿಂದ ನೂರಾರು ಜನ ಬರುತ್ತಿದ್ದಾರೆ’ ಎಂದು ಉದ್ಯಾನದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ನದಿ ಕಿನಾರೆಗೆ ಮುಖ ಮಾಡಿ ಪ್ರವಾಸಿಗರು ಕುಳಿತುಕೊಳ್ಳಲು ಸಿಮೆಂಟ್‌ ಬೆಂಚ್‌ ಹಾಕಿದ್ದೇವೆ. ಅಲ್ಲಿ ಕುಳಿತು ಅಲೆಗಳ ಅಬ್ಬರದ ಸುಂದರ ದೃಶ್ಯ ಕಣ್ತುಂಬಿಕೊಳ್ಳಬಹುದು. ಶೀಘ್ರ ಸುಮಾರು ಒಂದು ಕಿ.ಮೀ ಉದ್ದದ ಕಾಲ್ನಡಿಗೆ ಪಥವನ್ನು ಅಭಿವೃದ್ಧಿಪಡಿಸ ಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT