ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಡ್ಡೀಸ್‌ ಜಯಭೇರಿ

ಇಂಡಿಯನ್ ಕ್ಯೂ ಮಾಸ್ಟರ್ಸ್ ಲೀಗ್‌
Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅಹಮ್ಮದಾಬಾದ್‌: ಪಂಕಜ್ ಅಡ್ವಾನಿ ನೇತೃತ್ವದ ಚೆನ್ನೈ ಸ್ಟ್ರೈಕರ್ಸ್ ತಂಡವನ್ನು ಮಣಿಸಿದ ಬೆಂಗಳೂರು ಬಡ್ಡೀಸ್ ತಂಡದವರು ಇಂಡಿಯನ್ ಕ್ಯೂ ಮಾಸ್ಟರ್ಸ್ ಲೀಗ್‌ನಲ್ಲಿ ಜಯಭೇರಿ ಮೊಳಗಿಸಿದರು. ಒಂದು ಹಂತದಲ್ಲಿ 2–1ರ ಮುನ್ನಡೆ ಗಳಿಸಿದ್ದ ಬೆಂಗಳೂರು ಬಡ್ಡೀಸ್‌ ನಂತರ ಅಮೋಘ ಆಟವಾಡಿ ಜಯ ತನ್ನದಾಗಿಸಿಕೊಂಡಿತು. ನಿರ್ಣಾಯಕ ಪಂದ್ಯದಲ್ಲಿ ಡ್ಯಾರೆನ್ ಮಾರ್ಗನ್‌ ಅವರು ಪಂಕಜ್ ಅಡ್ವಾನಿ ಎದುರು ಗಳಿಸಿದ ಜಯ ಬೆಂಗಳೂರು ತಂಡ ಮೇಲುಗೈ ಸಾಧಿಸಲು ನೆರವಾಯಿತು.

ಮೊದಲ ಪಂದ್ಯದಲ್ಲಿ ಸಂದೀಪ್‌ ಕುಲಾಟಿ ಅವರು ಅನುಭವಿ ಆಟಗಾರ ಧರ್ಮೇಂದರ್ ಲಿಲ್ಲಿ ಎದುರು ಜಯ ಸಾಧಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ವಿದ್ಯಾ ಪಿಳ್ಳೆ ಅತ್ಯುತ್ತಮ ಆಟವಾಡಿ ಚೆನ್ನೈಗೆ ಜಯದ ಕಾಣಿಕೆ ನೀಡಿದರು. ಪಂಕಜ್‌ ಅಡ್ವಾನಿ ಜೊತೆಗೆ ಮಿಶ್ರ ಡಬಲ್ಸ್‌ ಸ್ನೂಕರ್‌ನಲ್ಲಿ ಗೆದ್ದ ಅವರು ಪಾಂಡುರಂಗಯ್ಯ ಅವರೊಂದಿಗೆ ಮಿಶ್ರ ಡಬಲ್ಸ್‌ ಪೂಲ್ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಹೀಗಾಗಿ ಬೆಂಗಳೂರು ತಂಡ 1–2ರ ಹಿನ್ನಡೆ ಅನುಭಿವಿಸಿತು.

ಆದರೆ ಐಕಾನ್‌ ಪಂದ್ಯದಲ್ಲಿ ಗೆದ್ದು ಮಾರ್ಗನ್‌ 2–2ರ ಸಮಬಲ ಸಾಧಿಸಲು ನೆರವಾದರು. ಧರ್ಮೇಂದರ್ ಲಿಲ್ಲಿ ಅವರನ್ನು 42–0ಯಿಂದ ಮಣಿಸಿದ ಲಕ್ಷ್ಮಣ್ ರಾವತ್‌ ಬೆಂಗಳೂರು ಬಡ್ಡೀಸ್ ಪಾಳಯದಲ್ಲಿ ಸಂಭ್ರಮದ ಅಲೆ ಉಕ್ಕಿಸಿದರು.

ಮಿಶ್ರ ಡಬಲ್ಸ್‌ ಪಂದ್ಯ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಉಭಯ ತಂಡದ ಆಟಗಾರರು ತಾಳ್ಮೆಯಿಂದ ಆಡಿ ಪಾಯಿಂಟ್ ಗಳಿಸಲು ಶ್ರಮಿಸಿದರು. ಹೀಗಾಗಿ ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂತು. ಅಡ್ವಾನಿ ಮತ್ತು ಪಿಳ್ಳೆ ಜೋಡಿಗೆ ಪ್ರಬಲ ಸ್ಪರ್ಧೆ ಒಡ್ಡಿದ ಮಾರ್ಗನ್‌ ಮತ್ತು ಅನಸ್ತೇಸಿಯಾ ಜೋಡಿ ಒಂದು ಹಂತದಲ್ಲಿ 9–9ರಿಂದ ಸಮಬಲ ಸಾಧಿಸಿದರು. ನಂತರ ಬೆಂಗಳೂರು ಬಡ್ಡೀಸ್‌ 10 ಪಾಯಿಂಟ್‌ಗಳನ್ನು ಬಾಚಿಕೊಂಡು 19–7ರಿಂದ ಮೊದಲ ಫ್ರೇಮ್ ತಮ್ಮದಾಗಿಸಿಕೊಂಡರು.

ಎರಡನೇ ಫ್ರೇಮ್‌ನಲ್ಲೂ ಉಭಯ ತಂಡದವರು ಪರಿಣಾಮಕಾರಿ ಆಟ ಆಡಿದರು. ಹೀಗಾಗಿ ಸ್ಕೋರ್ ಕಾರ್ಡ್‌ನಲ್ಲಿ ನಿಧಾನವಾಗಿ ಪಾಯಿಂಟ್‌ಗಳು ಸೇರಿದವು. ಆದರೆ ಅಡ್ವಾನಿ ಅವರ ಅಮೋಘ ಆಟದ ಬಲದಿಂದ ಚೆನ್ನೈ ತಂಡದವರು 10–8ರಿಂದ ಮುನ್ನಡೆ ಸಾಧಸಿದರು. ನಂತರ ಸುಲಭವಾಗಿ ಫ್ರೇಮ್‌ ತನ್ನದಾಗಿಸಿಕೊಂಡ ಚೆನ್ನೈ ನಿರ್ಣಾಯಕ ಫ್ರೇಮ್‌ನಲ್ಲಿ 22–5ರಿಂದ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT