ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸಾಧಾರಣ ಮೊತ್ತ

Last Updated 21 ಆಗಸ್ಟ್ 2017, 19:37 IST
ಅಕ್ಷರ ಗಾತ್ರ

ಪೊಚೆಸ್‌ಟ್ರೂಮ್‌: ಕರ್ನಾಟಕದ ಆರ್‌. ಸಮರ್ಥ್‌ (77; 113ಎ, 13ಬೌಂ) ಮತ್ತು ಶ್ರೇಯಸ್‌ ಅಯ್ಯರ್‌ (65; 82ಎ, 5ಬೌಂ, 4ಸಿ) ಅವರು ಸೆನ್‌ವೆಸ್‌ ಪಾರ್ಕ್‌ ಮೈದಾನದಲ್ಲಿ ಅರ್ಧಶತಕದ ಸಂಭ್ರಮ ಆಚರಿಸಿದರು. ಹೀಗಿದ್ದರೂ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ದಿನಗಳ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆ ಅನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ 124.4 ಓವರ್‌ಗಳಲ್ಲಿ 322ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಕರುಣ್‌ ನಾಯರ್‌ ಬಳಗ 89.4 ಓವರ್‌ಗಳಲ್ಲಿ 276ರನ್‌ಗಳಿಗೆ ಆಲೌಟ್‌ ಆಯಿತು.

46ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಹರಿಣಗಳ ನಾಡಿನ ತಂಡ ಸೋಮವಾರದ ಅಂತ್ಯಕ್ಕೆ 52 ಓವರ್‌ಗಳಲ್ಲಿ 4 ವಿಕೆಟ್‌ಗೆ 138ರನ್‌ ಕಲೆಹಾಕಿದೆ.

ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಸುದೀಪ್‌ ಚಟರ್ಜಿ (46; 96ಎ, 5ಬೌಂ, 1ಸಿ) ಮತ್ತು ಆರ್‌.ಸಮರ್ಥ್‌ ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 106ರನ್‌ ಗಳಿಸಿದರು. 30ನೇ ಓವರ್‌ನಲ್ಲಿ ಸುದೀಪ್‌ ಔಟಾದರು. ಬಳಿಕ ಬಂದ ಶ್ರೇಯಸ್‌ ಅಯ್ಯರ್‌ ಕೂಡ ಮಿಂಚಿನ ಆಟ ಆಡಿದರು. ಹೀಗಾಗಿ ತಂಡ ಇನಿಂಗ್ಸ್‌ ಮುನ್ನಡೆ ಗಳಿಸಲಿದೆ ಎಂದೇ ಭಾವಿಸಲಾಗಿತ್ತು.

41ನೇ ಓವರ್‌ನಲ್ಲಿ ಸಮರ್ಥ್‌ ಔಟಾಗುತ್ತಿದ್ದಂತೆ ಭಾರತ ತಂಡ ಕುಸಿತದ ಹಾದಿ ಹಿಡಿಯಿತು. ಕರುಣ್‌ (1), ಹನುಮ ವಿಹಾರಿ (7) ಮತ್ತು ಇಶಾನ್‌ ಕಿಶನ್‌ (17) ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌: 124.4 ಓವರ್‌ಗಳಲ್ಲಿ 322 ಮತ್ತು 52 ಓವರ್‌ಗಳಲ್ಲಿ 4 ವಿಕೆಟ್‌ಗೆ 138 (ಸ್ಟೀಫನ್‌ ಕುಕ್‌ ಬ್ಯಾಟಿಂಗ್‌ 55; ಅಂಕಿತ್‌ ರಜಪೂತ್‌ 15ಕ್ಕೆ1). ಭಾರತ ಮೊದಲ ಇನಿಂಗ್ಸ್‌: 89.4 ಓವರ್‌ಗಳಲ್ಲಿ 276.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT