ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಇಳಿಯದ ತರಕಾರಿ ಬೆಲೆ

Last Updated 22 ಆಗಸ್ಟ್ 2017, 7:30 IST
ಅಕ್ಷರ ಗಾತ್ರ

ಮಡಿಕೇರಿ: ಈ ವಾರವೂ ತರಕಾರಿ ಬೆಲೆಗಳ ಬೆಲೆ ಇಳಿಕೆಯಾಗಿಲ್ಲ. ಬಹುತೇಕ ತರಕಾರಿಗಳು ₨ 10 ಬೆಲೆ ಹೆಚ್ಚಿಸಿಕೊಂಡಿವೆ. ಮಳೆಗಾಲದಲ್ಲಿ ತರಕಾರಿ ಬೆಲೆ ಈ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಕಳೆದ ವಾರದ ಪ್ರತಿ ಕೆ.ಜಿ ಈರುಳ್ಳಿ ಬೆಲೆ ₨ 50 ಆಗಿತ್ತು. ಈ ವಾರ ₨ 10 ಹೆಚ್ಚಾಗಿದೆ. ಬೆಳ್ಳುಳ್ಳಿ ಬೆಲೆ ಪ್ರತಿ ಕೆ.ಜಿಗೆ ₨ 80, ಟೊಮೆಟೊ ₨ 50, ಹೂಕೋಸು ₨ 40, ಕ್ಯಾರೇಟ್‌ ₨ 60, ಹಸಿರುಮೆಣಸಿನ ಕಾಯಿ ₨ 50, ಕ್ಯಾಪ್ಸಿಕಂ ₨ 50, ಬೀಟ್‌ರೋಟ್‌ ₨ 30, ನುಗ್ಗೇಕಾಯಿ ₨ 60, ಬಾಳೆಹಣ್ಣು ₨ 35 ಆಗಿದೆ.

ಕ್ಯಾಬೇಜ್‌ ₨ 30, ಬೆಂಡೆಕಾಯಿ ₨ 28, ಮೂಲಂಗಿ ₨ 30, ಆಲೂಗೆಡ್ಡೆ ₨ 20, ಸೌತೇಕಾಯಿ ₨ 35, ಬೆಳ್ಳಾರೆ ₨ 20, ಕುಂಬಳಕಾಯಿ ₨ 16, ಹೀರೇಕಾಯಿ ₨ 24, ಪಡುವಲಕಾಯಿ ₨ 30, ಪ್ರತಿ ಕೆ.ಜಿ ತೊಂಡೆಕಾಯಿಗೆ ₨ 30 ಇದೆ. ದೊಡ್ಡಗಾತ್ರದ ತೆಂಗಿನಕಾಯಿಗೆ ₨ 20ರಿಂದ ₨ 25 ಬೆಲೆಯಿದೆ.

ಬಾಳೆಹಣ್ಣು ದರ ಏರಿಕೆ: ಮಾರುಕಟ್ಟೆಗೆ ಬಾಳೆಹಣ್ಣು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಾಳೆಹಣ್ಣು ಧಾರಣೆ ಹೆಚ್ಚುತ್ತಲೆ ಇದೆ. ಕಳೆದವಾರ ಉತ್ತಮ ದರ್ಜೆಯ ಬಾಳೆಹಣ್ಣಿಗೆ ₨ 80 ಇತ್ತು. ಈ ವಾರವೂ ₨ 65ರಿಂದ ₨ 70 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT