ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ರೈಲು ನಿಲ್ದಾಣದಲ್ಲಿ ಅವ್ಯವಸ್ಥೆ

Last Updated 22 ಆಗಸ್ಟ್ 2017, 8:33 IST
ಅಕ್ಷರ ಗಾತ್ರ

ನಂಜನಗೂಡು: ನಗರದ ರೈಲು ನಿಲ್ದಾಣದಲ್ಲಿ 15 ದಿನಗಳ ಹಿಂದೆ ನಿಲ್ದಾಣಕ್ಕೆ ನೀರು ಒದಗಿಸುವ ಕೊಳವೆ ಬಾವಿಯ ನೀರಿನ ಪಂಪ್ ಕೆಟ್ಟು ನಿಂತು ನಿಲ್ದಾಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ಬಂದ್ ಆಗಿದೆ. ಇದರಿಂದ ನಿತ್ಯ ಪ್ರಯಾಣಿಸುವ ಹೆಂಗಸರು ಮಕ್ಕಳು ಪರದಾಡಬೇಕಿದೆ.

ರೈಲು ನಿಲ್ದಾಣಕ್ಕೆ ನೀರು ಒದಗಿಸುವ ಕೊಳವೆ ಬಾವಿಯ ಮೋಟಾರು ಕೆಟ್ಟಿರುವುದರಿಂದ ನೀರು ಸರಬರಾಜು ನಿಂತಿದೆ. ರೈಲು ನಿಲ್ದಾಣದ ಸ್ವಚ್ಛತೆ ಸಿಬ್ಬಂದಿ ನೀರು ದೊರಕದ ಕಾರಣ ಸ್ವಚ್ಛತೆ ಕಾರ್ಯ ನಡೆಸುತ್ತಿಲ್ಲ. ಹಳಿಗಳ ಮೇಲೆ ನೀರು ಹರಿಸಿ ಸ್ವಚ್ಛಮಾಡುವ ಕಾರ್ಯ ಸ್ಥಗಿತಗೊಂಡಿದೆ. ಇದರಿಂದಾಗಿ ನಿಲ್ದಾಣದ ಪರಿಸರದ ಅವ್ಯವಸ್ಥೆ ಮನೆ ಮಾಡಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸ್ಟೇಷನ್ ಮಾಸ್ಟರ್ ಗೋಪಾಲಕೃಷ್ಣ, ‘ನಿಲ್ದಾಣದಲ್ಲಿ 15 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕುಗಳು ಇವೆ. ಕೊಳವೆ ಬಾವಿಯಿಂದ ಸರಬರಾಜಾಗುವ ನೀರನ್ನು ಬಳಸಲಾಗುತ್ತಿತ್ತು. 15 ದಿನದ ಹಿಂದೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ತೊಂದರೆಯಾಗಿದೆ. ಈ ವಿಚಾರವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT