ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ, ಲಿಂಗಾಯತ ಒಂದೇ– ಒಕ್ಕೊರಲ ನಿರ್ಧಾರ

Last Updated 22 ಆಗಸ್ಟ್ 2017, 8:33 IST
ಅಕ್ಷರ ಗಾತ್ರ

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟಗಳು ಇಲ್ಲಿನ ಸುತ್ತೂರು ಮಠದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸಭೆಯಲ್ಲಿ ವೀರಶೈವ, ಲಿಂಗಾಯತ ಒಂದೇ. ಇದನ್ನು ವಿಭಜಿಸುವುದು ಬೇಡ ಎಂಬ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ನವೆಂಬರ್‌ನಲ್ಲಿ ಎಲ್ಲ ಜಿಲ್ಲೆಗಳ 2 ಸಾವಿರಕ್ಕೂ ಅಧಿಕ ವೀರಶೈವ, ಲಿಂಗಾಯತ ಪ್ರಮುಖರ ಸಭೆ ಕರೆದು ಅಂತಿಮ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು.
ಪಂಚಾಚಾರ್ಯರು ವೀರಶೈವ ಧರ್ಮವನ್ನು ಗುತ್ತಿಗೆ ಪಡೆದಿಲ್ಲ. ಅವರು ತಮ್ಮ ಅಹಂ ಬಿಡಬೇಕು ಹಾಗೂ ವಿರಕ್ತ ಮಠಾಧೀಶರೂ ತಮ್ಮ ಪ್ರತಿಷ್ಠೆ ಬಿಡಬೇಕು ಎಂದು ಬಹುತೇಕ ಮಂದಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ಗೊ.ರು.ಚನ್ನಬಸಪ್ಪ, ‘ವೀರಶೈವ ಸಮುದಾಯದ ಸ್ಥಾಪಕರು ರೇಣುಕಾಚಾರ್ಯ ಅಲ್ಲ. ಲಿಂಗಾಯತ ಸಮುದಾಯದ ಸ್ಥಾಪಕರು ಬಸವಣ್ಣನವರೂ ಅಲ್ಲ. ವೀರಶೈವ ಪರಂಪರೆ ಹರಪ್ಪಾ, ಮೊಹೆಂಜೊದಾರೊ ನಾಗರಿಕತೆಯಿಂದಲೂ ಇದೆ. ಅದು ವಿಕಾಸದ ಹಂತದಲ್ಲಿ ಸಾಕಷ್ಟು ಪರಿವರ್ತನೆಗಳಿಗೆ ಒಳಾಗಾಗಿದೆ’ ಎಂದು ವಿವರಿಸಿದರು.

ಪ್ರಾಧ್ಯಾಪಕ ನಂದೀಶ್‌ ಹಂಚೆ ಮಾತನಾಡಿ, ‘ಲಿಂಗಾಯತ ಸಮುದಾಯದ ಸ್ಥಾಪಕ ಬಸವಣ್ಣ ಎಂದರೆ ಅದು ಇತರ ವಚನಕಾರರಿಗೆ ಮಾಡುವ ಅವಮಾನ’ ಎಂದು ವಿಶ್ಲೇಷಿಸಿದರು.

ಲಿಂಗಾಯತ ಸಮುದಾಯ ಬಸವಣ್ಣನಿಗೂ ಪೂರ್ವದಲ್ಲಿ ಏಕಾಂತ ರಾಮಯ್ಯ ಅವರ ಕಾಲದಿಂದಲೂ ಇದೆ. ವೀರಶೈವದ 21 ದೀಕ್ಷೆಗಳಲ್ಲಿ ಲಿಂಗಾಯತ ದೀಕ್ಷೆಯೂ ಒಂದು. ಶೈವ– ವೀರಶೈವ– ಲಿಂಗಾಯತ ಹೀಗೆ ವಿಕಾಸವಾಗುತ್ತಾ ಬರುತ್ತಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ತಿಪ್ಪಣ್ಣ, ‘ಮಹಾಸಭಾವನ್ನು ಒಡೆಯಬಾರದು. ಅಖಿಲ ಭಾರತ ಲಿಂಗಾಯತ ಮಹಾಸಭಾಕ್ಕೆ ಯಾರೂ ಹೋಗಬಾರದು’ ಎಂದು ಮನವಿ ಮಾಡಿದರು. ಸಭಿಕರ ಸಾಲಿನಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT