ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಗ್ರಾಮದಲ್ಲಿ ಅಪಾಯಕಾರಿ ತಿರುವು

Last Updated 22 ಆಗಸ್ಟ್ 2017, 9:04 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಒಂದಲ್ಲ, ಎರಡಲ್ಲ ಅನೇಕ ಜೀವಗಳು ಇಲ್ಲಿ ಬಲಿಯಾದವು. ಅನೇ ಕರು ಕೈಕಾಲು ಮುರಿದುಕೊಂಡರು. ಕೆಲವು ವಾಹನಗಳು ಜಖಂಗೊಂಡವು. ಹಾಗಿದ್ದರೂ ಲೋಕೋಪಯೋಗಿ ಇಲಾ ಖೆ ಎಚ್ಚೆತ್ತುಕೊಂಡಿಲ್ಲ. ಜನಪ್ರತಿನಿಧಿಗಳು ಮೌನ ಮುರಿದಿಲ್ಲ. ಸಂಸದರ ಆದರ್ಶ ಗ್ರಾಮದ ಈ ತಿರುವಿನಲ್ಲಿ ಇನ್ನೆಷ್ಟು ಜೀವ ಇಲ್ಲಿ ಬಲಿಯಾಗಬೇಕು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇದು ಬಳ್ಪ ಆದರ್ಶ ಗ್ರಾಮದಲ್ಲಿ ಹಾದು ಹೋಗುವ ಸುಬ್ರಹ್ಮಣ್ಯ - ಮಂ ಜೇಶ್ವರ ರಾಜ್ಯ ಹೆದ್ದಾರಿಯ ಅಡ್ಡಬೈಲು ಸಮೀಪದ ಕತೆ. ಸುಳ್ಯ ತಾಲ್ಲೂಕಿನ ಬಳ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡ ಬೈಲು ಸಮೀಪ ಅಪಾಯಕಾರಿ ತಿರುವು ಇದೆ. ಸುಬ್ರಹ್ಮಣ್ಯ - ಪಂಜ ರಸ್ತೆ ಒಂದು ಕಾಲದಲ್ಲಿ ತೀರಾ ಅವ್ಯವಸ್ಥೆಯಿಂದ ಕೂಡಿತ್ತು. ಅದಾದ ಬಳಿಕ ರಸ್ತೆ ಮೇಲ್ದರ್ಜೆಗೇರಿ ವಿಸ್ತಾರಗೊಂಡಿದ್ದು, ರಸ್ತೆ ದುರಸ್ತಿಯೂ ಆಯಿತು. ನಂತರವೇ ಸಮಸ್ಯೆ ಎದುರಾಗಿದೆ.

ಬಳ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬರುವ ಅಡ್ಡಬೈಲು ಬಳಿಯ ಈ ಮುಖ್ಯ ರಸ್ತೆಯಲ್ಲಿ ಇರುವ ಅಪಾಯಕಾರಿ ತಿರುವು ಬೈಕ್ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಇಲ್ಲಿ ಎರಡೂ ಕಡೆಗೆ ವಾಹನ ಬರುವುದು ಕಾಣಿಸುವುದಿಲ್ಲ. ಪಂಜ ಕಡೆಯಿಂದ ಬರುವ ವಾಹನಗಳು ಒಮ್ಮೆಲೇ ಎತ್ತರಭಾಗದಿಂದ ಇಳಿಯ ಬೇಕಾಗುತ್ತದೆ.

ಬಳ್ಪ ಕಡೆಯಿಂದ ಬರುವ ವಾಹನಗಳು ತಿರುವು ಜತೆಗೆ ದಿಬ್ಬ ಏರ ಬೇಕಾಗುತ್ತದೆ. ಹೀಗಾಗಿ ವಾಹನಗಳ ಬರುವಿಕೆ ಕಾಣಿಸದೇ ಅಪಘಾತಗಳು ನಡೆಯುತ್ತಿದೆ. ಇದರ ಜತೆಗೆ ಬಳ್ಪ ಕಡೆಯಿಂದ ಅಡ್ಡಬೈಲು ಕಡೆಗೆ ತೆರಳುವ ವೇಳೆ ಈ ತಿರುವಿನಲ್ಲಿ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ವಾಹನಗಳು ನಿಯಂತ್ರಣ ಕಳೆದುಕೊಂಡು ಎಡಗಡೆ ಯಿಂದ ಬಲಗಡೆಗೆ ಸಾಗುತ್ತದೆ. ಇದು ಅಪಾಯಕ್ಕೆ ಕಾರಣವಾಗುತ್ತದೆ. ದ್ವಿಚಕ್ರ ಸವಾರರಂತೂ ಈ ಸಂದರ್ಭ ನಿಯಂತ್ರಣ ಕಳೆದುಕೊಂಡು ಬೀಳುತ್ತಾರೆ.

ಹೀಗೆ ಕಳೆದ ಕೆಲವು ಸಮಯಗಳಿಂದ ಅನೇಕ ದ್ವಿಚಕ್ರ ಸವಾರರು ಇಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇನ್ನು ಇಲ್ಲಿ ಅಪಘಾತ ನಡೆದು ಗಾಯಗೊಂಡು ಐದಾರು ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವಾರ ಇದೇ ತಿರುವಿನಲ್ಲಿ ಎರಡು ಅಪಘಾತ ನಡೆದಿದೆ. ಒಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಸ್ಥಳೀ ಯರಿಗೆ ಈ ತಿರುವಿನ ಅಪಾಯದ ಸ್ಥಿತಿಯ ಬಗ್ಗೆ ಮಾಹಿತಿ ಇದ್ದ ಕಾರಣ ಎಚ್ಚರಿಕೆ ವಹಿಸುತ್ತಾರೆ.

ಆದರೆ ದೂರದ ಊರಿನಿಂದ ಬರುವ ಮಂದಿಗೆ ಅಪಾಯದ ಕುರಿತು ಮಾಹಿತಿ ಇಲ್ಲದೆ ಅಪ ಘಾತಕ್ಕೆ ಒಳಗಾಗುತ್ತಾರೆ. ಜೀವ ಕಳೆದುಕೊಳ್ಳುತ್ತಾರೆ. ಹೀಗಾಗಿ ತಕ್ಷಣವೇ ಇಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆಯಾಗಬೇಕಿದೆ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT