ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ಹಾದಿಯ ಆಚೆಈಚೆ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

–ಕಲಾವತಿ ಬೈಚಬಾಳ

ಛಾಯಾಗ್ರಾಹಕ ಕೆ.ವೆಂಕಟೇಶ್‌ ಅವರು ಬೆಂಗಳೂರು ಮಹಾನಗರ ಮೂರು ದಶಕಗಳಲ್ಲಿ ಬೆಳೆದಿರುವ ಬಗೆಯನ್ನು ಅಂದರೆ ಕಾಸ್ಮೊಪಾಲಿಟನ್ ನಗರದ ನಾನಾ ಮುಖಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಆ ಚಿತ್ರಗಳ ಪ್ರದರ್ಶನ ಆಗಸ್ಟ್‌ 25ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

ರಸ್ತೆಯ ಆಜುಬಾಜು ಕಾಣುವ ಅರ್ಧರ್ಧ ಕಟ್ಟಗಳು, ಧರೆಗುರುಳಿದ ಸಸ್ಯರಾಶಿ, ಹಸಿರು ಮೀರಿ ನಿಂತ ಕಟ್ಟಡಗಳು, ಅವುಗಳ ನಡುವೆಯೇ ಸಾಗುವ ಮೆಟ್ರೊ ಮಾರ್ಗ, ವೇಗದ ಒಡಲಲ್ಲಿ ಬಂಧಿಯಾದ ಜನಸಮೂಹ... ಹೀಗೆ ಬೆಂಗಳೂರನ್ನಾವರಿಸಿದ ‘ನಮ್ಮ ಮೆಟ್ರೊ’ ನಡೆಯನ್ನು ತಿಳಿಸುವ ನಾನಾ ಚಿತ್ರಗಳು ಪ್ರದರ್ಶನದಲ್ಲಿ ಕಣ್ಸೆಳೆಯುತ್ತವೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ವೆಂಕಟೇಶ್‌ ಅವರು ಇಲ್ಲಿಯ ಬೆಳವಣಿಗೆಯ ಪ್ರತಿ ಹಂತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವರು. 2009ರಲ್ಲಿ ನಮ್ಮ ಮೆಟ್ರೊಗೆ ಸಂಬಂಧಿಸಿದಂತೆ ‘ರೂಪಾಂತರ’ ಎನ್ನುವ ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಈಗ ‘ನಮ್ಮ ಮೆಟ್ರೊದ ಸುಂದರ, ವಿರೂಪ ಹಾಗೂ ಕುರೂಪ ಮುಖಗಳು’ ಎನ್ನುವ ಹೆಸರಿನಲ್ಲಿ 50 ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

‘ಮೆಟ್ರೊ ನೆಪದಲ್ಲಿ ಬೆಂಗಳೂರು ಸಂಪೂರ್ಣ ಬದಲಾಗಿದೆ. ಹಸಿರು ಕಾಣದಂತಾಗಿದೆ. ಗಾರ್ಡನ್‌ ಸಿಟಿ ಹೋಗಿ ಪಿಲ್ಲರ್‌ ಸಿಟಿ ಆಗಿದೆ. ಆಕರ್ಷಕ ಸ್ಥಳಗಳಲ್ಲಿ ಮೆಟ್ರೊ ಕಂಬಗಳು ಎದ್ದು ನಿಂತಿವೆ. ಮುಂಚಿನ ಸೌಂದರ್ಯ ಶ್ರೀಮಂತಿಕೆಯನ್ನು ಉಳಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಬೆಂಗಳೂರು ಹೇಗಿತ್ತು ಎನ್ನುವುದನ್ನು ಮುಂದಿನ ಪೀಳಿಗೆಯವರಿಗೆ ತಿಳಿಯಲು ಈ ಚಿತ್ರಗಳು ಸಹಾಯವಾಗಲಿವೆ’ ಎನ್ನುತ್ತಾರೆ ವೆಂಕಟೇಶ್‌.

ಪ್ರದರ್ಶನದ ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ. ವೀಕ್ಷಣೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಅವಕಾಶವಿದೆ. ವೆಂಕಟೇಶ್‌ ಸೆರೆಹಿಡಿದಿರುವ ಇನ್ನಷ್ಟು ಚಿತ್ರಗಳನ್ನು ವೀಕ್ಷಿಸಲು– bit.ly/2wjund3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT