ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ವಾಪಸ್‌ ಪಡೆದರೆ ಮಾತ್ರ ಪರಿಹಾರ: ಚೀನಾ

ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯೆ
Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೀಜಿಂಗ್‌ : ಸಿಕ್ಕಿಂ ವಲಯದ ದೋಕಲಾ ಪ್ರದೇಶದಲ್ಲಿ ಇರುವ ಸೇನೆಯನ್ನು ಭಾರತ ಬೇಷರತ್‌ ಆಗಿ ವಾಪಸ್ ಕರೆಯಿಸಿಕೊಂಡರೆ ಮಾತ್ರ ಬಿಕ್ಕಟ್ಟು ಬಗೆಹರಿಯಲು ಸಾಧ್ಯ ಎಂದು ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ದೋಕಲಾ ಸಮಸ್ಯೆ ಬಗೆಹರಿಸಲು ಚೀನಾ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭಾರತದ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರು ಸೋಮವಾರ ನೀಡಿದ ಹೇಳಿಕೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ.

‘ಭಾರತೀಯ ಸೇನೆ ಅಕ್ರಮವಾಗಿ ಗಡಿ ದಾಟಿದೆ. ದೋಕಲಾ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸುವುದಕ್ಕೆ ಭಾರತ ಅಡ್ಡಿಪಡಿಸುವುದು ಹಾಸ್ಯಾಸ್ಪದ. ಹೀಗಾಗಿ ಭಾರತ ತನ್ನ ಸೇನೆ ಮತ್ತು ಎಲ್ಲ ಸೇನಾ ಉಪಕರಣಗಳನ್ನು ವಾಪಸ್‌ ಪಡೆಯುವ ಅಗತ್ಯವಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನ್ಯಿಂಗ್‌ ತಿಳಿಸಿದ್ದಾರೆ.

‘ಚೀನಾ ಶಾಂತಿ ಬಯಸುತ್ತದೆ. ಶಾಂತಿ ನೆಲೆಸಲು ನಡೆಯುವ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ. ಜತೆಗೆ ನಮ್ಮ ಪ್ರದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT