ಟ್ರಂಪ್‌ ಹೇಳಿಕೆಗೆ ತಾಲಿಬಾನ್‌ ಎಚ್ಚರಿಕೆ

ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ

ಅಫ್ಗಾನಿಸ್ತಾನದಲ್ಲಿರುವ ಸೇನೆಯನ್ನು ಅಮೆರಿಕ ವಾಪಸ್‌ ಕರೆಸಿಕೊಳ್ಳಬೇಕು ಎಂದು ತಾಲಿಬಾನ್‌ ಎಚ್ಚರಿಕೆ ನೀಡಿದೆ.

ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ

ಕಾಬೂಲ್‌ (ಎಎಫ್‌ಪಿ): ಅಫ್ಗಾನಿಸ್ತಾನದಲ್ಲಿರುವ ಸೇನೆಯನ್ನು ಅಮೆರಿಕ ವಾಪಸ್‌ ಕರೆಸಿಕೊಳ್ಳಬೇಕು ಎಂದು ತಾಲಿಬಾನ್‌ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಅಮೆರಿಕದ ಪಾಲಿಗೆ ಅಫ್ಗಾನಿಸ್ತಾನ ಸ್ಮಶಾನವಾಗಲಿದೆ ಎಂದು ಕಠಿಣ ಸಂದೇಶ ನೀಡಿದೆ.

‘ನಮ್ಮ ನೆಲದಲ್ಲಿ ಅಮೆರಿಕದ ಒಬ್ಬ ಸೈನಿಕ ಇರುವವರೆಗೂ ಮತ್ತು ನಮ್ಮ ಮೇಲೆ ಯುದ್ಧ ಹೇರುವುದನ್ನು ನಿಲ್ಲಿಸುವವರೆಗೂ ಜಿಹಾದ್‌ ಅನ್ನು ಇನ್ನೂ ಹೆಚ್ಚು ಉತ್ಸಾಹದಿಂದ ಮುಂದುವರಿಸುತ್ತೇವೆ’ ಎಂದು ತಾಲಿಬಾನ್‌ ವಕ್ತಾರ ಝಬಿವುಲ್ಲಾಹ್‌ ಮುಜಾಹಿದ್‌ ತಿಳಿಸಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಕ್ರಮಣಕಾರಿ ನಡವಳಿಕೆಯನ್ನು ಮುಂದುವರಿಸಿದ್ದಾರೆ. ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ ಸಹ ಇದೇ ರೀತಿ ವರ್ತಿಸಿದ್ದರು. ಅಮೆರಿಕದ ಸೈನಿಕರ ಶಕ್ತಿ ಮತ್ತು ಸಾಮರ್ಥ್ಯ ಇಲ್ಲಿ ವ್ಯರ್ಥವಾಗುತ್ತಿದೆ. ನಮ್ಮ ದೇಶವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ. ಯಾವುದನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ತಾಲಿಬಾನ್‌ನ ಹಿರಿಯ ಕಮಾಂಡರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಹಲವಾರು ವರ್ಷಗಳಿಂದ ನಾವು ಹೋರಾಟ ನಡೆಸುತ್ತಿದ್ದೇವೆ. ನಾವು ಭಯಪಟ್ಟುಕೊಂಡಿಲ್ಲ. ನಮ್ಮ ಕೊನೆ ಉಸಿರು ಇರುವವರೆಗೂ ಯುದ್ಧವನ್ನು ಎದುರಿಸುತ್ತೇವೆ. ಪ್ರಸ್ತುತ ಅಫ್ಗನ್‌ ಸರ್ಕಾರ ಅಮೆರಿಕದ ಕೈಗೊಂಬೆಯಾಗಿದೆ ಎನ್ನುವುದು ಟ್ರಂಪ್‌ ಅವರು ನೀಡಿಕೆ ಹೇಳಿಕೆಯಿಂದ ಸಾಬೀತಾಗಿದೆ’ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನದಿಂದ ಆತುರದಲ್ಲಿ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವುದಿಲ್ಲ. ಬದಲಾಗಿ ಇನ್ನೂ ಸಾವಿರಾರು ಸೈನಿಕರನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿಕೆ ನೀಡಿದ ಬಳಿಕ ತಾಲಿಬಾನ್‌ ಈ ಪ್ರತಿಕ್ರಿಯೆ ನೀಡಿದೆ.

ಅಫ್ಗಾನಿಸ್ತಾನದಲ್ಲಿನ ಸುದೀರ್ಘ ಯುದ್ಧವನ್ನು ಶೀಘ್ರದಲ್ಲಿ ಅಂತ್ಯಗೊಳಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ಅವರು ಈ ಮೊದಲು ಹೇಳಿಕೆ ನೀಡಿದ್ದರು. ಆದರೆ, ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌ ಅವರು, ಈ ಬಗ್ಗೆ  ತದ್ವಿರುದ್ವ ಹೇಳಿಕೆ ನೀಡಿದರು. ಅಫ್ಗಾನಿಸ್ತಾನದಿಂದ ನಿರ್ಗಮಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಆದರೆ, ನಿಯೋಜಿಸಲಾಗುವ ಸೇನಾ ತುಕಡಿಗಳ ವಿವರ ನೀಡಲಿಲ್ಲ.

ಅಫ್ಗಾನಿಸ್ತಾನಕ್ಕೆ 3,900 ಸೈನಿಕರನ್ನು ನಿಯೋಜಿಸಲು ರಕ್ಷಣಾ ಸಚಿವರಿಗೆ ಟ್ರಂಪ್‌ ಸೂಚಿಸಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ತಿಳಿಸಿದ್ದಾರೆ.

* ಯುದ್ಧವನ್ನು ಮುಂದುವರಿಸುವ ಬದಲಾಗಿ ಅಫ್ಗಾನಿಸ್ತಾನದಿಂದ ಹೇಗೆ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಬೇಕು ಎನ್ನುವ ಬಗ್ಗೆ ಅಮೆರಿಕ ಚಿಂತನೆ ನಡೆಸಬೇಕು

- ಝಬಿವುಲ್ಲಾಹ್‌ ಮುಜಾಹಿದ್‌, ತಾಲಿಬಾನ್‌ ವಕ್ತಾರ

Comments
ಈ ವಿಭಾಗದಿಂದ ಇನ್ನಷ್ಟು

ಭ್ರಷ್ಟಾಚಾರ ಪ್ರಕರಣ
ಖಲೀದಾ ಜಿಯಾ ಜಾಮೀನು ಅವಧಿ ವಿಸ್ತರಣೆ

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ಸೋಮವಾರದವರೆಗೆ ಜಾಮೀನು ವಿಸ್ತರಣೆಯಾಗಿದೆ.

26 Feb, 2018
ಅಧ್ಯಕ್ಷೀಯ ಅವಧಿ ನಿರ್ಬಂಧ ತೆರವು

ವರದಿ
ಅಧ್ಯಕ್ಷೀಯ ಅವಧಿ ನಿರ್ಬಂಧ ತೆರವು

26 Feb, 2018
ರೋಮ್: ಕೊಲೊಸಿಯಂಗೆ ಕೆಂಪು ಬಣ್ಣ

ಪುರಾತನ ಕಮಾನು
ರೋಮ್: ಕೊಲೊಸಿಯಂಗೆ ಕೆಂಪು ಬಣ್ಣ

26 Feb, 2018

ವರದಿ
ಗಡಿ ನಿಯಂತ್ರಣ ರೇಖೆ ನಿವಾಸಿಗಳ ಸ್ಥಳಾಂತರ

‘ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಬಳಿ ಭಾರತ ಇತ್ತೀಚೆಗೆ ಅಪ್ರಚೋದಿತ ದಾಳಿ ನಡೆಸಿದ್ದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಸರ್ಕಾರವು ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ...

26 Feb, 2018
ಸಿರಿಯಾದಲ್ಲಿ ಹಿಂಸಾಚಾರ: ಕದನವಿರಾಮ ಘೋಷಣೆಗೆ ಒಪ್ಪಿಗೆ

ವಿಶ್ವಸಂಸ್ಥೆಯ ಕರಡು ನಿರ್ಣಯ
ಸಿರಿಯಾದಲ್ಲಿ ಹಿಂಸಾಚಾರ: ಕದನವಿರಾಮ ಘೋಷಣೆಗೆ ಒಪ್ಪಿಗೆ

26 Feb, 2018