ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್ ಹಣಕಾಸು ವಹಿವಾಟಿನ ಮೇಲೆ ನಿರ್ಬಂಧ

ಕರಾಚಿಯಲ್ಲಿನ ಮೂರು ವಿಳಾಸಗಳು ಪತ್ತೆ
Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿ ಹಣಕಾಸು ವಹಿವಾಟು ನಡೆಸುವವರ ಮೇಲೆ ನಿರ್ಬಂಧ ವಿಧಿಸಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹೆಸರು ಸೇರ್ಪಡೆಯಾಗಿದೆ. ದಾವೂದ್‌ ಇಬ್ರಾಹಿಂ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ವ್ಯಕ್ತಿ.

ಬ್ರಿಟನ್‌ ಹಣಕಾಸು ಇಲಾಖೆ ಈ ಬಗ್ಗೆ ಮಂಗಳವಾರ ಈ ಪಟ್ಟಿ ಬಿಡುಗಡೆ ಮಾಡಿದೆ.

ದಾವೂದ್ ಇಬ್ರಾಹಿಂ ಕರಾಚಿಯಲ್ಲಿನ ಮೂರು ವಿಳಾಸಗಳು ಹಾಗೂ 21 ಅಲಿಯಾಸ್‌ ಹೆಸರುಗಳನ್ನು ನೀಡಿರುವ ದಾಖಲೆಗಳು ಸಹ ಪತ್ತೆಯಾಗಿವೆ.

ಎಲ್‌ಟಿಟಿಇ, ಖಲಿಸ್ತಾನ ಜಿಂದಾಬಾದ್‌ ಪಡೆ, ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಗಳ ಹಣಕಾಸಿನ ವಹಿವಾಟಿನ ಮೇಲೆಯೂ ನಿರ್ಬಂಧ ವಿಧಿಸಲಾಗಿದೆ.

ಈ ಕ್ರಮದಿಂದ ಹಣ ವರ್ಗಾವಣೆಗೆ ನಿಷೇಧ ಹೇರಲಾಗುವುದು ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ಬ್ರಿಟನ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT