ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸಂವಿಧಾನ ನಮಗೆಷ್ಟು ಗೊತ್ತು?

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತೀಯ ಆಡಳಿತ ಸೇವೆಗಳು (INDIAN ADMINISTRATIVE SERVICE) ಮತ್ತು ಭಾರತೀಯ ಪೋಲೀಸ್ ಸೇವೆಗಳನ್ನು (INDIAN POLICE SERVICE) 1946 ರಲ್ಲಿ ಬ್ರಿಟನ್ ಮಾದರಿಯಲ್ಲಿ ಮರು ರಚಿಸಲಾಯಿತು.

ಭಾರತದ ವಿಮೋಚನಾ ಹೋರಾಟದ ಅಂತಿಮ ದಿನಗಳಲ್ಲಿ ಬ್ರಿಟಿಷ್‌ ಆಡಳಿತದ ದಟ್ಟ ಪ್ರಭಾವ ಹೊಂದಿದ್ದ ನಾಗರಿಕ ಸೇವೆಗಳನ್ನು ರದ್ದು ಮಾಡಬೇಕೆಂಬ ಆಗ್ರಹವೂ ಇತ್ತು.

ಭಾರತವು ಬ್ರಿಟನ್ನಿನ ಆಡಳಿತ ವ್ಯವಸ್ಥೆಯಿಂದ ವಿಮೋಚನೆ ಹೊಂದಿದ ನಂತರದ ದಿನಗಳಲ್ಲಿ ಜಾರಿಗೆ ಬಂದ ಸಂವಿಧಾನವು ನಾಗರಿಕ ಸೇವೆಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ಅವರನ್ನು ಸಂಸದೀಯ (PARLIAMENTARY SYSTEM) ವ್ಯವಸ್ಥೆಗೆ ಉತ್ತರದಾಯಿಯನ್ನಾಗಿಸಿದೆ.

ನಾಗರಿಕ ಸೇವೆಗಳ ನೇಮಕಾತಿ, ಕಾರ್ಯಕ್ಷೇತ್ರದ ವ್ಯಾಪ್ತಿ, ಅಧಿಕಾರ ವ್ಯಾಪ್ತಿ, ಸಂಬಳ, ಪಿಂಚಣಿ, ಸೇವಾ ನಿಯಮಗಳು ಕೇಂದ್ರ ಸರ್ಕಾರದ (CENTRAL GOVT EMPLOYEES) ಸೇವೆಗಳಲ್ಲಿರುವ ನೌಕರರಿಗಿಂತ ಸ್ವಲ್ಪ ಭಿನ್ನವಾಗಿದೆ.

ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ನೇಮಕಾತಿ, ಸೇವಾ ನಿಯಮಗಳಿಗೆ ಭಾರತೀಯ ನಾಗರಿಕ ಸೇವೆಗಳಿಗೆ ಒದಗಿಸಿರುವಂತಹ ಸಂವಿಧಾನಾತ್ಮಕ ಸ್ಥಾನಮಾನಗಳು ಲಭಿಸಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರಿಗೆ ಆಡಳಿತದ ಹಿತದೃಷ್ಟಿಯಿಂದ ಶಾಸನಾತ್ಮಕ ಸ್ಥಾನಮಾನ ನೀಡಲಾಗಿದೆ. ಆದರೆ ಈ ಎಲ್ಲಾ ಅಧಿಕಾರಿ ಸಮೂಹವು ಒಟ್ಟಾಗಿ ದೇಶದ ಅಭಿವೃದ್ಧಿಗೆ ದುಡಿಯುವ ಅಗತ್ಯತೆಯನ್ನು ಸಂವಿಧಾನವು ಪ್ರತಿಪಾದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT