ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಜೆಕ್ಟ್‌ ವರ್ಷಧಾರೆ’ಗೆ ಮತ್ತೆ ವಿಘ್ನ

Last Updated 22 ಆಗಸ್ಟ್ 2017, 19:20 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾಜೆಕ್ಟ್‌ ವರ್ಷಧಾರೆ’ ಹೆಸರಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಮೋಡ ಬಿತ್ತನೆ ಯೋಜನೆಗೆ ಆರಂಭದಲ್ಲೆ ವಿಘ್ನಗಳು ಎದುರಾಗಿವೆ.

ಮೊದಲ ದಿನವಾದ ಸೋಮವಾರ ಸಂಜೆ ರಾಮನಗರ, ಮಾಗಡಿ ಮತ್ತು ಆನೇಕಲ್‌ ಭಾಗದಲ್ಲಿ ಕೆಲಹೊತ್ತು ಮೋಡ ಬಿತ್ತನೆ ಮಾಡಿದ್ದ ಅತ್ಯಾಧುನಿಕ ಪರಿಕರಗಳನ್ನು ಒಳಗೊಂಡ ಅಮೆರಿಕದ ವಿಶೇಷ ವಿಮಾನ, ಮಂಗಳವಾರವೂ ಟೇಕಾಫ್‌ ಆಗಲಿಲ್ಲ.

ಮೋಡಗಳ ಸಾಂದ್ರತೆಯ ಚಿತ್ರ ಮತ್ತು ಮಾಹಿತಿಯನ್ನು ನೀಡಬೇಕಿದ್ದ ರೇಡಾರ್‌ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ಅಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ. ಹೀಗಾಗಿ, ವಿಮಾನ ಆಗಸಕ್ಕೆ ನೆಗೆಯಲೇ ಇಲ್ಲ.

‘ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ರಾಡಾರ್ ಸ್ಥಾಪನೆ ಪೂರ್ಣಗೊಂಡಿದೆ. ಆದರೆ, ಅದರ ತಾಂತ್ರಿಕ ಕ್ಯಾಲಿಬ್ರೇಷನ್ ಕಾರ್ಯ ಪ್ರಗತಿಯಲ್ಲಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಈ ಕೆಲಸ ಪೂರ್ಣಗೊಳ್ಳಲಿದೆ. ಬಳಿಕ ಎಚ್ಎಎಲ್ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಹಾರಾಟ ಆರಂಭಿಸಲಿದೆ’ ಎಂದು ಯೋಜನೆಯ ಸಂಯೋಜಕರೂ ಆಗಿರುವ ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಎಂಜಿನಿಯರ್‌ ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT