ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶಸ್ತಿ ಘನತೆ ಬೀದಿಪಾಲು’

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅರ್ಜುನ ಪ್ರಶಸ್ತಿಯ ಘನತೆಯನ್ನು ಸರ್ಕಾರ ಬೀದಿಪಾಲು ಮಾಡಿದೆ ಎಂದು ಹಿರಿಯ ಹಾಕಿ ಆಟಗಾರ ಅಶೋಕ ಕುಮಾರ್‌ ಧ್ಯಾನ್‌ಚಂದ್ ಮತ್ತು ಮೂವರು ಅಥ್ಲೀಟ್‌ಗಳು ಅಸಮಾಧಾನವ್ಯಕ್ತಪಡಿಸಿದ್ದಾರೆ.

‘ಅರ್ಜುನ ಪ್ರಶಸ್ತಿಗಳನ್ನು ಪ್ರತಿವರ್ಷ ಕೊಡುವುದರಿಂದ ಅದರ ಘನತೆ ಕುಂದುತ್ತಿದೆ. ಕಾಟಾಚಾರಕ್ಕಾಗಿ ಮಾತ್ರ ಈಗ ಸರ್ಕಾರ ಪ್ರಶಸ್ತಿಗಳನ್ನು ನೀಡುತ್ತಿದೆ’ ಎಂದು ಅಶೋಕ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥ್ಲೀಟ್‌ ಶ್ರೀರಾಮ್ ಸಿಂಗ್ ಶೆಖಾವತ್‌, ವಾಲಿಬಾಲ್‌ ಆಟಗಾರ ಸುರೇಶ್ ಮಿಶ್ರಾ ಹಾಗೂ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್‌ ಅವರು ಅಶೋಕ್ ಕುಮಾರ್ ಅವರ ಹೇಳಿಕೆಗೆ ದನಿಗೂಡಿಸಿದ್ದಾರೆ.

‘ಸರ್ಕಾರ ತನ್ನದೇ ಮಾನದಂಡವನ್ನು ರೂಪಿಸಿಕೊಂಡು ಪ್ರಶಸ್ತಿ ನೀಡುತ್ತಿದೆ. ಏಷ್ಯಾ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರನ್ನು ಮಾತ್ರ ಆಯ್ಕೆ ಮಾಡಿದರೆ ಪ್ರಶಸ್ತಿಯ ಘನತೆ ಉಳಿಯುತ್ತಿತ್ತು. ಈಗ ಕಾಡಿ ಬೇಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಶೋಕ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT