ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾರ, ಹರ್ಮನ್‌ಗೆ ಅರ್ಜುನ: ಭೂಪೆಂದರ್‌ಗೆ ಧ್ಯಾನ್‌ಚಂದ್ ಪುರಸ್ಕಾರ

Last Updated 22 ಆಗಸ್ಟ್ 2017, 19:36 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ಅಥ್ಲೀಟ್‌ ಭೂಪೆಂದರ್ ಸಿಂಗ್  ಮತ್ತು ಕ್ರಿಕೆಟಿಗ ಚೇತೇಶ್ವರ್ ಪೂಜಾರ ಅವರಿಗೆ ಕ್ರಮವಾಗಿ ಧ್ಯಾನಚಂದ್ ಪುರಸ್ಕಾರ ಮತ್ತು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆಯು ಮಂಗಳವಾರ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಅವರಿಗೂ ಪ್ರಶಸ್ತಿ ಗೌರವ ಲಭಿಸಿದೆ.

ಭಾರತ ಹಾಕಿ ತಂಡದ ಅನುಭವಿ ಆಟಗಾರ ಸರ್ದಾರ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ದೇವೇಂದ್ರ ಜಝಾರಿಯಾ ಅವರಿಗೆ ರಾಜೀವಗಾಂಧಿ ಖೇಲ್ ರತ್ನ ಪುರಸ್ಕಾರ ನೀಡಲಾಗಿದೆ. ಟೆನಿಸ್ ಆಟಗಾರ ಸಾಕೇತ್ ಮೈನೇನಿ ಅವರಿಗೂ ಅರ್ಜುನ ಪ್ರಶಸ್ತಿ ನೀಡಲಾಗಿದೆ.

ಅನುಭವಿ ಟೆನಿಸ್ ಪಟು ಕರ್ನಾಟಕದ ರೋಹನ್ ಬೋಪಣ್ಣ ಅವರ ಹೆಸರನ್ನು ಐಟಿಟಿಎಫ್ ಶಿಫಾರಸು ಮಾಡಿರಲಿಲ್ಲ.

ತರಬೇತುದಾರರಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗಳ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಅಥ್ಲೆಟಿಕ್ ಕೋಚ್ ದಿವಂಗತ ಡಾ. ಆರ್.
ಗಾಂಧಿ, ಹೀರಾನಂದ ಕಟಾರಿಯಾ. ಹಾಕಿ ಕೋಚ್ ಪಿ.ಎ. ರಾಫೆಲ್ ಸೇರಿದಂತೆ ಒಟ್ಟು ಏಳು ಜನರಿಗೆ ಈ ಗೌರವ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT