ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಾಯಭಾರಿ ನೇಮಕಕ್ಕೆ ಮನವಿ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತಕ್ಕೆ ಅಮೆರಿಕದ ಹೊಸ ರಾಯಭಾರಿಯನ್ನು ಕೂಡಲೇ ನೇಮಿಸುವಂತೆ ಸಂಸದ ಫ್ರಾಂಕ್‌ ಪಲೋನ್‌ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಮನವಿ ಮಾಡಿದ್ದಾರೆ.

ಭಾರತದ ಜತೆಗಿನ ಅಮೆರಿಕದ ಸಂಬಂಧವನ್ನು ಉತ್ತಮಪಡಿಸುವ ದೃಷ್ಟಿಯಿಂದ ಈ ನೇಮಕ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯ
ಪಟ್ಟಿದ್ದಾರೆ.

ಜನವರಿ 20ರಿಂದ ರಾಯಭಾರಿ ಹುದ್ದೆ ಖಾಲಿ ಇದೆ. ಟ್ರಂಪ್‌ ಅವರು ನೂತನ ಅಧ್ಯಕ್ಷರಾಗಿ ಅದೇ ದಿನ ಅಧಿಕಾರ ವಹಿಸಿಕೊಂಡರು. ಆದರೆ, ಇದುವರೆಗೂ ರಾಯಭಾರಿಯ ನೇಮಕವಾಗಿಲ್ಲ.  ಟ್ರಂಪ್‌ ಅವರ ಆರ್ಥಿಕ ಸಲಹೆಗಾರ ಕೆನೆತ್‌ ಜಸ್ಟರ್‌ (62) ಅವರು ಭಾರತದ ನೂತನ ರಾಯ
ಭಾರಿಯಾಗಲಿದ್ದಾರೆ ಎಂದು ಶ್ವೇತ ಭವನ ಕಳೆದ ಜೂನ್‌ನಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT