ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವ ತಂತುಗಳನೂ ಲಗತ್ತಿಸುವಂತಿಲ್ಲ’

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾವಚಿತ್ರದ ಕೆಳಗೆ ಭಾವವಿಲ್ಲದ ಬರಹ
ಇದೊಂದು ತರಹ
'ನಿಮ್ಮ ಪ್ರೀತಿಗೆ ನೀವೇ ಜವಾಬ್ದಾರರು'
ಎಂದಂತೆನಿಸಿ
ನಸುನಕ್ಕು ಅನುಮತಿಸಿ
ಮೈದಡವಿ ಮುದ್ದಾಡಿ ಮೈಮನಗಳ ಮಥಿಸಿ
ಕೊನೆಗೆ ಮೈಕೊಡವಿ ಮನೆಗೆ ಮರಳಿದ

ಮತ್ಯಾವುದೋ ದಿನ ಮತ್ಯಾರದೋ ತೆಕ್ಕೆಯ
ಸಖ್ಯದಲ್ಲಿ ನಿನ್ನ ಮೈಸಿರಿಯ ದನಿಯ
ನೋಟದ ಜೀವದ ಭಾವದ ದೇಹರುಚಿಯ
ಮಾಯದ ಮೌನದ ಮುತ್ತಿನ ಮುಲುಕಿನ
ತರಹೇವಾರಿ ತಂತುಗಳ ತುಂತುರು ನೆನಪಿನ
ಮಳೆ; ಮಾಡುತ್ತವೆ ಒಲುಮೆ ಖಾತೆಯ ಸಂಕಲನ

ಈ ನೆನಪುಗಳೇ ಹೀಗೆ
ಅವತಾರವೆತ್ತುವ ದೇವರ ಹಾಗೆ
ನೀತಿ ನಿಯಮಗಳ ಬೇಲಿ ಹಾರುತ್ತವೆ
ದೇಶ ಕಾಲಗಳ ಹಂಗು ತೊರೆಯುತ್ತವೆ
ಪಾತ್ರ ಸೂತ್ರಗಳ ಮುರಿದು ಕಟ್ಟುತ್ತವೆ
ಒಲವ ಹಾದಿಯ ಮಂಜು ಸರಿಸುತ್ತವೆ

ನಿನಗೂ ದೇವರಲ್ಲಿ ದುವಾ ಕೇಳುತ್ತೇನೆ
ನನ್ನ ನೆನಪು ನಿನಗೂ ಆಗಲಿ
ಪ್ರೇಮದ ಬಾಗಿಲ ಬೇಗನೆ ಸೇರಲಿ

–ದಾದಾಪೀರ್ ಪಿ ಜೈಮನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT