ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ: ಧರೆಗುರುಳಿದ ಮರಗಳು

Last Updated 27 ಆಗಸ್ಟ್ 2017, 6:10 IST
ಅಕ್ಷರ ಗಾತ್ರ

ಯಾದಗಿರಿ: ಮರಗಿಡ ಬೆಳೆಸಿ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಿರಂತರ ಶ್ರಮಿಸುತ್ತಿದೆ. ಆದರೆ, ಜಿಲ್ಲಾ ಆಸ್ಪತ್ರೆಯ ಒಳ ಆವರಣದಲ್ಲಿ ಬೆಳೆದಿದ್ದ ಮರಗಳನ್ನು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಧರೆಗುರುಳಿಸಿದ್ದಾರೆ.

‘ಆಸ್ಪತ್ರೆ ಸಂಕೀರ್ಣದ ಮುಖ್ಯದ್ವಾರ ದಾಟಿದರೆ ಒಳಾಂಗಣದಲ್ಲಿ ನೇರಳೆ ಮರ ಬೃಹದಾಕಾರವಾಗಿ ಬೆಳೆದಿತ್ತು. ಅದರೊಂದಿಗೆ 8 ತೊಗಸೆ ಜಾತಿಯ ಮರಗಳನ್ನು ಕಡಿಯಲಾಗಿದೆ. ಮರಗಳಿಂದ ರೋಗಿಗಳಿಗೆ ನೆರಳು ಮತ್ತು ಆಮ್ಲಜನಕ ಸಿಗುತ್ತಿತ್ತು. ಅಲ್ಲದೇ ಜಿಲ್ಲಾ ಆಸ್ಪತ್ರೆಯ ಉತ್ತಮ ವಾತಾವರಣ ಒದಗಿಸಿದ್ದವು.

ಅವನ್ನು ಏಕಾಏಕಿ ಕಡಿದು ಹಾಕಲಾಗಿದೆ’ ಎಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಆಸ್ಪತ್ರೆ ಸಿಬ್ಬಂದಿ, ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಜಿಲ್ಲೆಯಲ್ಲಿ ಶೇ 3ರಷ್ಟು ಮಾತ್ರ ಅರಣ್ಯ ಇದೆ. ಅರಣ್ಯ ಅಭಿವೃದ್ಧಿಗೆ ಜಿಲ್ಲಾಡಳಿತದ ಜತೆಗೆ ಖಾಸಗಿ ಸಂಘ–ಸಂಸ್ಥೆಗಳು ಕೂಡ ಶ್ರಮಿಸುತ್ತಿವೆ. ಜಿಲ್ಲಾಡಳಿತ ಹೊರ
ತುಪಡಿಸಿದರೆ ಯಾವ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮರಗಿಡಗಳನ್ನು ಅಧಿಕಾರಿಗಳು ನೆಟ್ಟಿಲ್ಲ. ಜಿಲ್ಲಾ ಆಸ್ಪತ್ರೆಯ ಅಂಗಳದಲ್ಲಿ ನೇರಳೆ ಬೃಹದಾಕಾರವಾಗಿ ಬೆಳೆದಿತ್ತು. ಅಂತಹ ಮರವನ್ನು ಬೆಳೆಸಲು ಹತ್ತಾರು ವರ್ಷ ಬೇಕಾಗುತ್ತದೆ ಎಂಬ ಅರಿವು ಅಧಿಕಾರಿಗಳಿಗಿಲ್ಲ’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT