ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಾನಪದ ದಿನಾಚರಣೆ

Last Updated 28 ಆಗಸ್ಟ್ 2017, 6:50 IST
ಅಕ್ಷರ ಗಾತ್ರ

ಕೆಂಭಾವಿ:‘ಜಾನಪದ ಕಲೆ, ಪರಂಪರೆ, ಉಡುಗೆ ತೊಡುಗೆ ಭಾಷೆ ಸಂಸ್ಕೃತಿ ಎಲ್ಲವೂ ಮಾನವೀಯ ಸಂಬಂಧದ ಸರಪಳಿಯಿದ್ದಂತೆ’ ಎಂದು ಕನ್ನಡ ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಹೇಳಿದರು.

ಪಟ್ಟಣದ ವಿದ್ಯಾವಾಹಿನಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ ವತಿಯಿಂದ ಶನಿವಾರ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,

‘ಜನರಿಂದ ಜನರಿಗೆ ಮಾತು, ಗಾಯನದ ಮೂಲಕ ಹರಡಿದ ಸರಪಳಿಯಂತಹ ಅಲಿಖಿತ ಸಾಹಿತ್ಯವೇ ಜಾನಪದ. ಯುವ ಜನತೆ ಪಾಶ್ಚತ್ಯ ಸಂಸ್ಕೃತಿಯಡೆಗೆ ಮಾರು ಹೋಗಿದ್ದು ಜನಪದ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಜನಪದದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ’ ಎಂದ ತಿಳಿಸಿದರು.
‘ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಮೂಲವಾಗಿರುವವ ಜಾನಪದವನ್ನು ಕಟ್ಟಿ ಬೆಳಸುವಲ್ಲಿ, ಉಳಿಸುವಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕು’ ಎಂದು ಅವರು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ ಮಾತನಾಡಿದರು. ಕೆಂಭಾವಿ ಸಂಸ್ಥಾನ ಹಿರೆಮಠದ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅದ್ಯಕ್ಷ ವಿಶ್ವನಾತರಡ್ಡಿ ಅಬ್ಬೆತುಮುಕುರು ಉದ್ಘಾಟಿಸಿದರು. ವಲಯ ಕಜಾಪ ಅಧ್ಯಕ್ಷ ಹಳ್ಳೇರಾವ ಕುಲಕರ್ಣಿ, ಶರಣಸಾಹಿತ್ಯ ಪರಿಷತ್ ಅದ್ಯಕ್ಷ ಡಾ.ಯಂಕನಗೌಡ ಪಾಟೀಲ್, ಪ್ರಾಂಶುಪಾಲರಾದ ಪಾರ್ವತಿ ಪಾಟೀಲ್, ರಮೇಶ ಪತ್ತೇಪೂರ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT