ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಚಿತ್ರಗಳು ಖಿನ್ನತೆಗೆ ಮದ್ದು!

Last Updated 28 ಆಗಸ್ಟ್ 2017, 11:21 IST
ಅಕ್ಷರ ಗಾತ್ರ

ನವದೆಹಲಿ: ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿರುವವರಿಗೆ ವೈದ್ಯರ ಚಿಕಿತ್ಸೆಗಿಂತಲೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟ್ರಾಗ್ರಾಂ ಚಿತ್ರಗಳು ಮತ್ತು ವಿಡಿಯೊಗಳೇ ಉತ್ತಮ ಮದ್ದಾಗಬಲ್ಲವು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ಅಮೆರಿಕದ ವೆರ್ಮಾಂಟ್‌ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಕ್ರಿಸ್ಟಫರ್‌ ಡ್ಯಾನ್‌ಪೋರ್ಥ್‌ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿದೆ.
ಈ ಸಂಶೋಧನೆಗಾಗಿ 43 ಸಾವಿರಕ್ಕೂ ಹೆಚ್ಚು ಚಿತ್ರಗಳ ಲೈಕ್ಸ್‌ ಮತ್ತು ಕಮೆಂಟ್‌ಗಳನ್ನು ಸಂಗ್ರಹಿಸಲಾಗಿತ್ತು. ಇದರ ಜತೆಗೆ 166 ಫೇಸ್‌ಬುಕ್‌ ಮತ್ತು ಇನ್‌ಸ್ಟ್ರಾಗ್ರಾಂ ಬಳಕೆದಾರರ ಸಂದರ್ಶನ ನಡೆಲಾಗಿತ್ತು.  ಇವರಲ್ಲಿ 71 ಬಳಕೆದಾರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಒತ್ತಡದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಚಿತ್ರಗಳನ್ನು ವೀಕ್ಷಿಸುವುದಾಗಿ ತಿಳಿಸಿದ್ದಾರೆ.

ವೈದ್ಯರು ನೀಡುವ ಆಪ್ತಸಮಾಲೋಚನೆಗಿಂತಲೂ ಚಿತ್ರಗಳ ವೀಕ್ಷಣೆ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಕಡು ಬಣ್ಣದ ಚಿತ್ರಗಳಿಗಿಂತ ತಿಳಿ ಬಣ್ಣದ ಚಿತ್ರಗಳು ಮನಸ್ಸಿಗೆ ಹೆಚ್ಚು ಆಪ್ತವಾಗುತ್ತವೆ ಎಂದು ಬಳಕೆದಾರರು ತಿಳಿಸಿದ್ದಾರೆ ಎಂದು ಡ್ಯಾನ್‌ಪೋರ್ ತಮ್ಮ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT