, ಎಚ್ಚರಿಕೆ! ಸರಾಹ್ ಆ್ಯಪ್‍ನಲ್ಲಿ ಎಲ್ಲವೂ ರಹಸ್ಯವಾಗಿರುವುದಿಲ್ಲ! | ಪ್ರಜಾವಾಣಿ
ಅನಾಮಿಕ ಸಂದೇಶ ಕಳಿಸುವ ಮುನ್ನ

ಎಚ್ಚರಿಕೆ! ಸರಾಹ್ ಆ್ಯಪ್‍ನಲ್ಲಿ ಎಲ್ಲವೂ ರಹಸ್ಯವಾಗಿರುವುದಿಲ್ಲ!

ಸರಾಹ್ ಆ್ಯಪ್‍ನ್ನು ಮೊಬೈಲ್‍ನಲ್ಲಿ ಇನ್‍ಸ್ಟಾಲ್ ಮಾಡುವಾಗ ನಿಮ್ಮ ಕಾಂಟಾಕ್ಟ್ ಸಂಖ್ಯೆಗಳನ್ನು access ಮಾಡಲೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ, ಇದಕ್ಕೆ Allow ಎಂದು ಒತ್ತಿದ ನಂತರವೇ ಮುಂದೆ ಹೋಗಬಹುದಾಗಿದೆ.

ಎಚ್ಚರಿಕೆ! ಸರಾಹ್ ಆ್ಯಪ್‍ನಲ್ಲಿ ಎಲ್ಲವೂ ರಹಸ್ಯವಾಗಿರುವುದಿಲ್ಲ!

ನವದೆಹಲಿ: 'ಪ್ರಾಮಾಣಿಕ ಆ್ಯಪ್' ಎಂದೇ ಜನಪ್ರಿಯವಾಗಿರುವ ಸರಾಹ್ ಆ್ಯಪ್‍‍ನಲ್ಲಿ ಎಲ್ಲವೂ ರಹಸ್ಯವಾಗಿರುವುದಿಲ್ಲ. ಯಾರಿಗೆ ಬೇಕಾದರೂ ಅನಾಮಿಕ ಸಂದೇಶಗಳನ್ನು ಕಳುಹಿಸಬಹುದು ಎಂಬ ಕಾರಣದಿಂದಲೇ ಸರಾಹ್ ಆ್ಯಪ್ ಜನಮನ ಗೆದ್ದಿತ್ತು. ಆದರೆ, ಈ ಆ್ಯಪ್‍ನ್ನು ಇನ್‍ಸ್ಟಾಲ್ ಮಾಡಿದಾಗ ಅದು ನಮ್ಮ ಫೋನ್‍ನಲ್ಲಿರುವ ಸಂಪರ್ಕ ಸಂಖ್ಯೆಯನ್ನೂ ಸಂಗ್ರಹಿಸಿ ಸರಾಹ್ ಕಂಪನಿಯ ಸರ್ವರ್‍‍ಗೆ ಕಳುಹಿಸುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.

ಬಿಷಪ್ ಫೋಕ್ಸ್ ಎಂಬ ಐಟಿ ಸೆಕ್ಯುರಿಟಿ  ಸಂಸ್ಥೆಯಲ್ಲಿ ಹಿರಿಯ ಭದ್ರತಾ ವಿಶ್ಲೇಷಕರಾಗಿರುವ ಜಾಚರಿ ಜೂಲಿಯನ್ ಎಂಬವರು ಸರಾಹ್ ಆ್ಯಪ್ ನಮ್ಮ ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂಬ ವಿಷಯವನ್ನು ಪತ್ತೆ ಹಚ್ಚಿದ್ದಾರೆ. ಮಾನಿಟರಿಂಗ್ ಸಾಫ್ಟ್‌ವೇರ್ BURP Suite ಮೂಲಕ ಸರಾಹ್ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಸರಾಹ್ ಆ್ಯಪ್‍ಗೆ ಲಾಗಿನ್ ಆದ ಕೂಡಲೇ ಅದು ನಿಮ್ಮ ಇಮೇಲ್ ಮತ್ತು ಫೋನ್ ಕಾಂಟಾಕ್ಟ್ ನಂಬರ್‍‍ಗಳನ್ನು ಸಂಗ್ರಹಿಸುತ್ತದೆ ಎಂದು ಜೂಲಿಯನ್ ಹೇಳಿರುವುದಾಗಿ ದ ಇಂಟರ್‍‍ಸೆಪ್ಟ್ ಮಾಧ್ಯಮ ವರದಿ ಮಾಡಿದೆ.

ಸರಾಹ್ ಆ್ಯಪ್‍ನ್ನು ಮೊಬೈಲ್‍ನಲ್ಲಿ ಇನ್‍ಸ್ಟಾಲ್ ಮಾಡುವಾಗ ನಿಮ್ಮ ಕಾಂಟಾಕ್ಟ್ ಸಂಖ್ಯೆಗಳನ್ನು access ಮಾಡಲೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ, ಇದಕ್ಕೆ Allow ಎಂದು ಒತ್ತಿದ ನಂತರವೇ ಮುಂದೆ ಹೋಗಬಹುದಾಗಿದೆ. ಆದಾಗ್ಯೂ, ನಮ್ಮ ಫೋನ್‍ನಲ್ಲಿ ಸೇವ್ ಆಗಿರುವ ಕಾಂಟಾಕ್ಟ್ ನಂಬರ್‍‍ಗಳೆಲ್ಲಾ ಎಲ್ಲಿ ಬಳಸಲ್ಪಡುತ್ತವೆ? ಸರ್ಚ್ ಫೀಚರ್‍‍ನಲ್ಲಿ ಕಾಂಟಾಕ್ಟ್ ನಂಬರ್ ಬಳಸಿ ಸ್ನೇಹಿತರನ್ನು ಹುಡುಕುವ ಸೌಲಭ್ಯವೂ ಇಲ್ಲಿಲ್ಲ. ಹೀಗಿರುವಾಗ ಕಾಂಟಾಕ್ಟ್ ನಂಬರ್‍‍ಗಳನ್ನು ಸರಾಹ್ ಸಂಗ್ರಹಿಸುವುದು ಯಾಕೆ? ಎಂಬ ಪ್ರಶ್ನೆ ಎದ್ದಿದೆ.

ಏತನ್ಮಧ್ಯೆ, ಮುಂಬರುವ ದಿನಗಳಲ್ಲಿ ನಿಮ್ಮ ಫೋನ್ ‍ನಲ್ಲಿ ಸೇವ್ ಆಗಿರುವ ಕಾಂಟಾಕ್ಟ್ ನಂಬರ್‍‍ಗಳನ್ನು ಬಳಸಿ ಸ್ನೇಹಿತರ ಸರಾಹ್ ಖಾತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುವ ಸೌಲಭ್ಯ ಕಲ್ಪಿಸುವ ಸಲುವಾಗಿ ಆ್ಯಪ್‍ನಲ್ಲಿ ಕಾಂಟಾಕ್ಟ್ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸರಾಹ್  ಸಂಸ್ಥಾಪಕ ಜೈನ್ ಅಲ್ ಅಬಿದಿನ್ ತೌಫೀಖ್ ಹೇಳಿದ್ದಾರೆ. 

Comments
ಈ ವಿಭಾಗದಿಂದ ಇನ್ನಷ್ಟು
ಉತ್ತಮ ಸ್ವಂತೀಗೆ ಇನ್ನೊಂದು ಫೋನ್

ಗ್ಯಾಜೆಟ್‌ ಲೋಕ
ಉತ್ತಮ ಸ್ವಂತೀಗೆ ಇನ್ನೊಂದು ಫೋನ್

19 Apr, 2018
ಗ್ಯಾಜೆಟ್‌ ಲೋಕ

ತಂತ್ರಜ್ಞಾನ
ಗ್ಯಾಜೆಟ್‌ ಲೋಕ

19 Apr, 2018

ತಂತ್ರೋಪನಿಷತ್ತು
ವ್ಲೋಗಿಂಗ್ ಮಾಡಿ ಸಂಪಾದನೆ ಮಾಡಿ

ವಿಡಿಯೊ ಬ್ಲಾಗಿಂಗ್‌ನ ಹೃಸ್ವ ರೂಪವೇ ವ್ಲೋಗಿಂಗ್. ದಿನ ನಿತ್ಯದ ಜೀವನದಲ್ಲಿ ನಡೆಯುವ ಆಸಕ್ತಿಕರ ವಿಷಯಗಳ ಬಗ್ಗೆ, ಉದಾಹರಣೆಗೆ ಪ್ರವಾಸ, ಅಡುಗೆ, ತಂತ್ರಜ್ಞಾನ ಮೊದಲಾದವುಗಳ ಬಗ್ಗೆ...

19 Apr, 2018
5ಜಿಯಿಂದ ಮತ್ತಷ್ಟು ಸ್ಮಾರ್ಟ್ ಆಗಲಿದೆ ಜೀವನ

ತಂತ್ರಜ್ಞಾನ
5ಜಿಯಿಂದ ಮತ್ತಷ್ಟು ಸ್ಮಾರ್ಟ್ ಆಗಲಿದೆ ಜೀವನ

18 Apr, 2018
ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

ತಂತ್ರಜ್ಞಾನ
ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

18 Apr, 2018