ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಹಾಸಿಗೆಯಲ್ಲಿ ಇಬ್ಬರಿಗೆ ಚಿಕಿತ್ಸೆ

Last Updated 29 ಆಗಸ್ಟ್ 2017, 5:19 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಒಂದು ವಾರದಿಂದ ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅತಿಯಾಗಿ ಜ್ವರಬಾಧೆ ಕಾಣಿಸಿಕೊಂಡಿದೆ. ನಿತ್ಯ 400ರಿಂದ 500 ಜನ ತಪಾಸಣೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ.ತೀವ್ರ ಜ್ವರ ಇರುವವರನ್ನು ದಾಖಲಿಸಿಕೊಂಡು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಬೆಡ್‌ಗಳ ಕೊರತೆ ಉಂಟಾಗಿದೆ.

ಒಮ್ಮೆಲೆ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬೆಡ್‌ಗಳ ಕೊರತೆ ಎದುರಾಗಿದೆ. ಲಕ್ಷ್ಮೇಶ್ವರದಲ್ಲಿ 30 ಹಾಸಿಗೆಗಳ ಆಸ್ಪತ್ರೆ ಇದ್ದು, ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಕ್ಷ್ಮೇಶ್ವರ ಅಕ್ಕಪಕ್ಕದ ಹರದಗಟ್ಟಿ, ಅಡರಕಟ್ಟಿ, ಗೋವನಾಳ, ಪುಟಗಾಂವ್‌ ಬಡ್ನಿ, ಬಟ್ಟೂರು ಗ್ರಾಮಗಳಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಮೈ, ಕೈ ನೋವಿನಿಂದ ಬಳಲುತ್ತಿದ್ದಾರೆ.

‘ಆಸ್ಪತ್ರೆಯಲ್ಲಿರುವ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ನರ್ಸ್‌ಗಳ ಕೊರತೆಯಿದೆ. ಇಲ್ಲಿ ಅಂದಾಜು 20 ನರ್ಸ್‌ಗಳ ಅಗತ್ಯ ಇದೆ. ಆದರೆ ಸದ್ಯ ಇರುವುದು ಎಂಟು ಜನ ನರ್ಸ್‌ಗಳು ಮಾತ್ರ’ ಎಂದು ವೈದ್ಯರ ಬಳಿ ಬಂದಿದ್ದವರು ಹೇಳಿದರು.

ಮೇಲ್ದರ್ಜೆಗೆ ಏರಿಸಿ: ‘30 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆ ಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಅಗತ್ಯವಿರುವಷ್ಟು ನರ್ಸ್‌ಗಳನ್ನು ನೇಮಕ ಮಾಡಬೇಕು’ ಎಂದು ಕರ್ನಾಟಕ ಜನ ಹಿತ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ ಸುತಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT