ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಧಾರಣೆಯಲ್ಲಿ ಏರಿಕೆ

Last Updated 29 ಆಗಸ್ಟ್ 2017, 7:24 IST
ಅಕ್ಷರ ಗಾತ್ರ

ಅರಸೀಕೆರೆ: ತೆಂಗು ಉತ್ಪನ್ನ ಪ್ರಮುಖ ಖರೀದಿ ಕೇಂದ್ರಗಳೆಂದೇ ಗುರುತಿಸಿಕೊಂಡಿರುವ ಅರಸೀಕೆರೆ, ತಿಪಟೂರು, ತುರುವೇಕೆರೆ ಹಾಗೂ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರಗಳಲ್ಲಿ ಕೊಬ್ಬರಿ ಧಾರಣೆ ಏರಿಕೆ ಕಂಡಿದೆ.

ಆ. 26ರಂದು ತಿಪಟೂರು ಎಪಿಎಂಸಿಯಲ್ಲಿ ನಡೆದ ಹರಾಜಿನಲ್ಲಿ ಪ್ರತಿ ಕ್ವಿಂಟಲ್‌ ಕೊಬ್ಬರಿ ₹ 13,100ಕ್ಕೆ ಮಾರಾಟವಾಗುವ ಮೂಲಕ ಮೂರೂವರೆ ವರ್ಷಗಳ ಬಳಿಕ ದಾಖಲೆ ಏರಿಕೆ ಆಗಿದೆ. ಎರಡು ತಿಂಗಳ ಹಿಂದೆ ಕೇವಲ ₹ 7,800–8,000 ಅಸುಪಾಸಿನಲ್ಲಿದ್ದ ಧಾರಣೆ ಕೆಲವೇ ದಿನಗಳ ಹರಾಜಿನಲ್ಲಿ ಕ್ವಿಂಟಲ್‌ ಗೆ ₹ 5,000 ಹೆಚ್ಚಳವಾಗಿರುವುದು ತೆಂಗು ಬೆಳೆಗಾರರಲ್ಲಿ ಆಶಾಭಾವ ಮೂಡಿಸಿದೆ.

ಜುಲೈ 6ರಂದು ನಡೆದ ಹರಾಜಿನಲ್ಲಿ ₹ 7,926 ರಿಂದ 8,225ರ ಅಸುಪಾಸಿನಲ್ಲಿದ್ದ ಧಾರಣೆ ಕ್ರಮೇಣ ಚೇತರಿಕೆ ಕಂಡಿದ್ದು, ಆ. 4ರ ಹರಾಜಿನಲ್ಲಿ ₹ 9,100 ಗಳಿಗೆ ತಲುಪಿತ್ತು. ಆ. 23ರ ಹರಾಜಿನ ವೇಳೆಗೆ ₹ 12,000 ಸಮೀಪಿಸಿತ್ತು. ಈಗ ₹ 13,100ಗಳಿಗೆ ಹೆಚ್ಚಳವಾಗಿದೆ.

‘ನೆರೆ ರಾಜ್ಯಗಳ ವ್ಯಾಪಾರಿಗಳು ಕೊಬ್ಬರಿ ಖರೀದಿಸಲು ಮುಂದಾಗಿರುವುದು ಸಹಜವಾಗಿಯೇ ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಧಾರಣೆ ₹15,000ರಿಂದ ₹ 16,000 ಗಡಿ ದಾಟುವ ನಿರೀಕ್ಷೆ ಇದೆ. ರೈತರು ಕೊಬ್ಬರಿ ಮಾರಾಟಕ್ಕೆ ಗಡಿಬಿಡಿ ಮಾಡಿಕೊಳ್ಳಬಾರದು’ ಎಂದು ವರ್ತಕ ಲೋಕೇಶ್‌ ಸಲಹೆ ನೀಡಿದರು.
ನಾಗರ ಪಂಚಮಿ, ವರಮಹಾಲಕ್ಷ್ಮಿ, ಗೌರಿ, ಗಣೇಶ, ಆಯುಧ ಪೂಜೆ, ದೀಪಾವಳಿ ಹಬ್ಬಗಳು ಸಾಲುಸಾಲಾಗಿ ಬಂದಿರುವುದು ಮಾರುಕಟ್ಟೆಯಲ್ಲಿ ಸಹಜವಾಗಿ ಕೊಬ್ಬರಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.

ಪಂಜಾಬ್‌, ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಪುಣೆ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಿಗೆ ಅರಸೀಕೆರೆ, ತಿಪಟೂರು ಹಾಗೂ ತುರವೇಕೆರೆ ಹಾಗೂ ಇತರ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದ ಕೊಬ್ಬರಿ ರವಾನೆ ಆಗುತ್ತಿರುವುದು ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT