ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌: ಆತಂಕಕ್ಕೆ ಕಾರಣ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳ ಅತಿ ಬಳಕೆ ಹಾಗೂ ಅವಲಂಬನೆ ಆತಂಕ ಮನೋಭಾವವನ್ನು ಮೂಡಿಸುತ್ತದೆ. ಪದೇ ಪದೇ ಸ್ಮಾರ್ಟ್‌ಫೋನ್‌ಗಳನ್ನು ಪರೀಕ್ಷಿಸುತ್ತಾ ತಮ್ಮ ಬಗ್ಗೆ ತಿಳಿದು
ಕೊಳ್ಳುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಇತಹವರು ಸ್ಮಾರ್ಟ್‌ಫೋನ್‌ಗಳಿಂದ ದೂರವಿದ್ದರೂ ಅವರಲ್ಲಿ ಆತಂಕ ಮನೋಭಾವ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.

ಈಚೆಗೆ ಸ್ಮಾರ್ಟ್‌ಫೋನ್‌ಗಳು ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿವೆ. ನಿತ್ಯ ಜೀವನದ ಪ್ರತಿ ಹಂತದಲ್ಲೂ ಬಳಕೆಯಾಗುತ್ತಿವೆ. ಸಂವಹನ ನಡೆಸಲು ಅವು ಅನಿವಾರ್ಯವಾಗಿ ಬಿಟ್ಟಿವೆ.

ಈ ರೀತಿ ಮೊಬೈಲ್‌ಫೋನ್‌ಗಳಿಂದ ದೂರವಿದ್ದಾಗ ಉಂಟಾಗುವ ಆತಂಕವನ್ನು ಸಂಶೋಧಕರು ‘ನೊಮೊಫೋಬಿಯಾ’ (Nomophobia) ಎಂದು ಕರೆಯುತ್ತಾರೆ.

ಸ್ಮಾರ್ಟ್‌ಫೋನ್‌ಗಳನ್ನು ಅತಿಯಾಗಿ ಅವಲಂಬಿಸಿರುವವರು ಅವುಗಳಿಂದ ದೂರವಾದರೆ ಹೃದಯ ಬಡಿತ ಹೆಚ್ಚಾಗುವುದು, ರಕ್ತದೊತ್ತಡ, ಆತಂಕ ಮತ್ತು ಅಹಿತಕರ ಮನೋಭಾವ ಮೂಡುವುದಕ್ಕೆ ಕಾರಣವಾಗುತ್ತದೆ ಎಂದು ಹಿಂದಿನ ಅಧ್ಯಯನಗಳೂ ಎಚ್ಚರಿಸಿದ್ದವು.

ಬಳಕೆದಾರು ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಅಸ್ತಿತ್ವದ ಸಂಕೇತವಾಗಿ ನೋಡುವುದರಿಂದ, ಅವುಗಳ ಬಳಕೆ ನಿಲ್ಲಿಸಿದರೆ ನೋಮೊಫೋಬಿಯಾ ಉಂಟಾಗುತ್ತದೆ ಎಂದು ಹಾಂಕಾಂಗ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ನಮ್ಮ ಹಲವು ವೈಯಕ್ತಿಕ ನೆನಪುಗಳನ್ನು ಸ್ಮಾರ್ಟ್‌ಫೋನ್‌ಗಳು ಪ್ರಚೋದಿಸುವುದರಿಂದ ಬಳಕೆದಾರರು, ತಮ್ಮ ಅಸ್ತಿತ್ವವನ್ನು ಸ್ಮಾರ್ಟ್‌ಫೋನ್‌ಗಳ ಮೂಲಕವೇ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿಸಿದ್ದಾರೆ.

ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ ಮತ್ತು ಅವುಗಳಲ್ಲಿನ ಸೌಲಭ್ಯಗಳು ಹೆಚ್ಚಾಗುತ್ತಿರುವುದು ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ಹೆಚ್ಚಾಗಲು ಕಾರಣವಾಗಿದೆ.

ವ್ಯಕ್ತಿಯ ಖಾಸಗಿ ವಿಷಯ ಅಥವಾ ನೆನಪುಗಳು ಮತ್ತು ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗುವುದಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸುವ ತಂತ್ರಾಂಶವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದು ವ್ಯಕ್ತಿಯ ನೋಮೊಫೋಬಿಯಾ ಬಗ್ಗೆ ಅಧ್ಯಯನ ಮಾಡಲು ನೆರವಾಗುತ್ತದೆ.

ಸ್ಮಾರ್ಟ್‌ಫೋನ್‌ ಬಳಕೆದಾರರ ವೈಯಕ್ತಿಕ ಅಥವಾ ಖಾಸಗಿ ನೆನಪುಗಳು, ಅಸ್ತಿತ್ವ, ಅನುಬಂಧ, ಸಾಮೀಪ್ಯ ಮತ್ತು ವರ್ತನೆಗಳನ್ನು ನಿರ್ಣಯಿಸಲು ಆನ್‌ಲೈನ್ ಸಮೀಕ್ಷೆ ನಡೆಸಲು ಸಂಶೋಧಕರ ತಂಡ ನಿರ್ಧರಿಸಿದೆ.

ನೋಮೊಫೋಬಿಯಾ ಎಂದರೆ, ನಮ್ಮ ಅಸ್ತಿತ್ವ ನಶಿಸುತ್ತದೆ ಮತ್ತು ತಂತ್ರಜ್ಞಾನದಿಂದ ದೂರ ಇರಬೇಕಾಗುತ್ತದೆ ಎಂಬ ಆತಂಕ. ಇಂತಹ ಆತಂಕಗಳಿಗೆ ಆಡಂಬರದ ಜೀವನವೇ ಕಾರಣ ಎನ್ನುತ್ತಾರೆ ಅಮೆರಿಕದ ಇಂಟರ್‌ಯಾಕ್ಟೀವ್‌ ಮೀಡಿಯಾ ಇನ್ಸ್‌ಟ್ಯೂಟ್‌ನ ಬ್ರೆಂಡ ಕೆ. ‘ವೈಡರ್‌ ಹೋಲ್ಡ್‌ ತಿಳಿಸಿದ್ದಾರೆ.

ತಂತ್ರಜ್ಞಾನದಿಂದ ದೂರವಿರುವುದು ಮತ್ತು ಎಕ್ಸ್‌ಪೋಷರ್ ಥೆರಪಿ ಮೂಲಕ ಈ ಆತಂಕವನ್ನು ದೂರಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಅಧ್ಯಯನವು ಸೈಬರ್‌ ಸೈಕಾಲಜಿ, ಬಿಹೇವಿಯರ್‌ ಅಂಡ್‌ ಸೋಷಿಯಲ್‌ ನೆಟವರ್ಕಿಂಗ್‌ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT