ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಶತಮಾನದ ಶಾಲೆಗಿಲ್ಲ ಅಭಿವೃದ್ಧಿ ಭಾಗ್ಯ!

Last Updated 30 ಆಗಸ್ಟ್ 2017, 5:11 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸರ್ಕಾರಿ ಶಾಲೆಗಳ ಅಭಿವೃ ದ್ಧಿಗೆ ಸರ್ಕಾರ ಪ್ರತಿವರ್ಷ ಸಾಕಷ್ಟು ಅನು ದಾನ ನೀಡುತ್ತಿದ್ದರೂ ಸಾಕಷ್ಟು ಶಾಲೆ ಗಳು ಇನ್ನೂ ದುಃಸ್ಥಿತಿಯಲ್ಲಿವೆ. ಇದಕ್ಕೆ ಸಮೀಪದ ಅಕ್ಕಿಗುಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉದಾಹರಣೆ.

1956ರಲ್ಲಿ ಗ್ರಾಮದ ಶ್ರೀಧರರಾವ್‌ ಸೊರಟೂರ ಎಂಬುವವರು ಶಾಲೆ ನಿರ್ಮಾಣಕ್ಕೆ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಊರಿನ ಶಿವರುದ್ರವ್ವ ಕುರ್ತಕೋಟಿ ಆಗಿನ ಕಾಲದಲ್ಲಿ ₹ 1,011 ದೇಣಿಗೆ ನೀಡಿ, ಶಾಲೆ ಆರಂಭಕ್ಕೆ ಕಾರಣರಾಗಿದ್ದರು.

ಆದರೆ, ಈಚೆಗೆ ಶಾಲೆ ಸಮರ್ಪಕ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪಿ ದೆ. ಹಳೇ ಕಟ್ಟಡದ ಚಾವಣಿಯ ಹೆಂಚು ಗಳು ಒಡೆದಿವೆ. ಹೀಗಾಗಿ, ಹೊಸದಾಗಿ ನಿರ್ಮಿಸಿರುವ ಎರಡೇ ಕೊಠಡಿಗಳಲ್ಲಿ ಮಕ್ಕಳು ಕೂತು ಪಾಠ ಕೇಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೊಸ ಕೊಠಡಿಗಳ ನಿರ್ಮಾಣಕ್ಕೆ ಸಾಕಷ್ಟು ಸ್ಥಳಾ ವಕಾಶ ಇದ್ದರೂ ಸಹ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ.

ಹಾಳಾದ ಕಟ್ಟಡದಲ್ಲಿ ಕಸಕಡ್ಡಿ ತುಂಬಿದ್ದು, ಅಲ್ಲಿನ ವಾತಾವರಣ ಹದ ಗೆಟ್ಟಿದೆ. ಶಾಲೆಗೆ ಕಂಪೌಂಡ್‌ ಕಟ್ಟಿಸಿದ್ದರೂ ಗೇಟ್‌ ಅಳವಡಿಸಿಲ್ಲ. ಹೀಗಾಗಿ, ರಜಾ ದಿನಗಳಲ್ಲಿ ಶಾಲಾ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಜನ ಪ್ರತಿನಿಧಿಗಳು, ಎಸ್.ಡಿ.ಎಂ.ಸಿ ಸದಸ್ಯರು ಶಾಲೆಯ ಅಭಿ ವೃದ್ಧಿಗೆ ಯತ್ನಿಸುತ್ತಿಲ್ಲ ಎಂಬ ನೋವು ಗ್ರಾಮಸ್ಥರಲ್ಲಿದೆ.
‘ಅಕ್ಕಿಗುಂದ ಸಾಲಿ ಭಾಳ ಹಳೇದ್ರಿ. ಅದನ್ನ ರಿಪೇರಿ ಮಾಡ್ಸಬೇಕಾದ ತುರ್ತು ಐತಿ’ ಎಂದು ಸ್ಥಳೀಯ ನಿವಾಸಿ ನಾಗ ರಾಜ ಕುಲಕರ್ಣಿ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT