ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂತಕರ ಬಂಧನದವರೆಗೆ ಹೋರಾಟ’

Last Updated 30 ಆಗಸ್ಟ್ 2017, 5:19 IST
ಅಕ್ಷರ ಗಾತ್ರ

ಗದಗ: ‘ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಡೆದು ಎರಡು ವರ್ಷವಾದರೂ ಆರೋಪಿಗಳ ಪತ್ತೆಯಾಗದಿರುವುದು ತೀವ್ರ ನೋವಿನ ಸಂಗತಿ. ಇದು ಸರ್ಕಾ ರದ ನಿರ್ಲಕ್ಷ್ಯ ತೋರಿಸುತ್ತದೆ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧ ಲಿಂಗ ಶ್ರೀ ಬೇಸರ ವ್ಯಕ್ತಪಡಿಸಿದರು.

ಡಾ.ಕಲಬುರ್ಗಿ, ದಾಬೋಲ್ಕರ್‌, ಪಾನ್ಸರೆ ಹತ್ಯಾ ವಿರೋಧಿ ಹೋರಾಟ ಸಮಿತಿಯು ಮಂಗಳವಾರ ಗದುಗಿನಲ್ಲಿ ಆಯೋಜಿಸಿದ್ದ ‘ನ್ಯಾಯಕ್ಕಾಗಿ ಎಚ್ಚರಿಕೆ ಜಾಥಾ’ಗೆ ಚಾಲನೆ ನೀಡಿ ಅವರು, ‘ಇದುವರೆಗೂ ಹಂತಕರ ಪತ್ತೆಯಾಗದಿರುವುದು ಸರ್ಕಾರದ  ವೈಫಲ್ಯ ತೋರಿಸುತ್ತದೆ. ಇದರಿಂದ ಸರ್ಕಾರದ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ತನಿಖಾ ತಂಡ ವನ್ನು ಬಲಪಡಿಸಿ, ಹಂತಕರನ್ನು ಬಂಧಿ ಸಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರದ ಬಸವೇಶ್ವರ ಕಾಲೇಜು ಆವ ರಣದಿಂದ ಬೆಳಿಗ್ಗೆ 11 ಗಂಟೆಗೆ ‘ನ್ಯಾಯ ಕ್ಕಾಗಿ ಎಚ್ಚರಿಕೆ ಜಾಥಾ’ ಪ್ರಾರಂಭವಾ ಯಿತು. ಭೂಮರಡ್ಡಿ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್‌ ವೃತ್ತ, ಮಹೇಂದ್ರಕರ್ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ  ಜಾಥಾದಲ್ಲಿ, ದಲಿತ ಸಂಘರ್ಷ ಸಮಿತಿ, ಲಡಾಯಿ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು, ಪೌರಕಾರ್ಮಿಕರ ಸಂಘ, ಪ್ರಾದ್ಯಾಪಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಲಿಂಗಾಯತ ಪ್ರಗತಿಶೀಲ ಸಂಘ ಸೇರಿದಂತೆ ಜಿಲ್ಲೆಯ 38ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು, ಶಾಲಾ–ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾ ರ್ಥಿಗಳು ಭಾಗವಹಿಸಿದ್ದರು. 

ಮೆರವಣಿಗೆ ಯುದ್ದಕ್ಕೂ, ಡಾ.ಎಂ.ಎಂ. ಕಲಬುರ್ಗಿ, ಡಾ. ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಹಂತಕರನ್ನು ಬಂಧಿ ಸುವಂತೆ ಒತ್ತಾಯಿಸಲಾಯಿತು. ಹಂತಕ ರನ್ನು ಪತ್ತೆ ಹಚ್ಚುವಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಘೋಷಣೆ ಕೂಗಿದರು. ಜಾಥಾ ಬಳಿಕ ಮಹಾತ್ಮ ಗಾಂಧಿ ವೃತ್ತದಲ್ಲಿ ಅಹೋರಾತ್ರಿ ಧರಣಿ– ಸತ್ಯಾಗ್ರಹ ನಡೆಯಿತು.

‘ಕಲಬುರ್ಗಿ ಅವರ ಹತ್ಯೆಯಿಂದ ಮಾನವೀಯತೆ, ಪ್ರಜಾಪ್ರಭುತ್ವ, ಬಸವ ವಾದ, ನಾಗರಿಕತೆಯ ಕೊಲೆಯಾಗಿದೆ. ಅವರ ವೈಚಾರಿಕ ನಿಲುವುಗಳನ್ನು ಸಹಿ ಸದ ಪಟ್ಟಭದ್ರ ಶಕ್ತಿಗಳು ಹಿಂಸೆ ಮೂಲಕ ಅವುಗಳನ್ನು ಎದುರಿಸಿದರು. ಒಂದೇ ಮನಸ್ಥಿತಿ ಹೊಂದಿದವರೇ ಕಲಬುರ್ಗಿ, ದಾಬೋಲ್ಕರ್‌, ಪನ್ಸಾರೆ ಅವರ ಹತ್ಯೆ ಮಾಡಿದ್ದಾರೆ. ಹತ್ಯೆ ಪ್ರಕರಣಗಳ ಹಿಂದೆ ಸಾಂಸ್ಥಿಕ ಶಕ್ತಿ ಬೆಂಬಲವಿದೆ. ಮತ ರಾಜ ಕಾರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಶಕ್ತಿಗಳ ವಿರುದ್ಧ ಕ್ರಮ ವಹಿಸಲು ಹಿಂದೇಟು ಹಾಕುತ್ತಿದೆ’ ಎಂದು ಹೋರಾಟ ಸಮಿತಿ ಸಂಚಾಲಕ ಡಿ.ಬಿ ಗವಾನಿ ದೂರಿದರು.

‘ದೇಶದಲ್ಲಿ ವಿಚಾರವಾದಿಗಳು, ಸಾಹಿತಿಗಳು, ಚಿಂತಕರ ಬದುಕು ದುಸ್ತರ ವಾಗಿದೆ. ಕೋಮು ಸಾಮರಸ್ಯ ಕದ ಡಿದ್ದು, ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಎದುರಾಗಿದೆ. ವೈಯಕ್ತಿಕ ಹಕ್ಕುಗಳು ಮೊಟಕುಗೊಂಡಿವೆ’ ಎಂದು ಹೋರಾಟ ಸಮಿತಿಯ ಬಸವರಾಜ ಸೂಳಿಬಾವಿ ಅಭಿಪ್ರಾಯಪಟ್ಟರು.

ವಿಠಪ್ಪ ಜಿ., ಕೆ.ಭಾರದ್ವಾಜ, ಎಸ್.ಎಂ. ಕವಳಿಕಾಯಿ, ರಾಮಚಂದ್ರ ಹಂಸನೂರ, ಸುರೇಶ ಬಾಲೆಹೊಸೂರ, ಶರೀಫ ಬಿಳೆಯಲಿ, ರಮೇಶ ಕೋಳೂರ, ಅನಿಲ್ ಕಾಳೆ, ವೀರಣ್ಣ ಬೇವಿನಮರದ, ವಿರುಪಾಕ್ಷಪ್ಪ ಬಳ್ಳೊಳ್ಳಿ, ಹನುಮಂತ ಹಾಸಂಗಿ, ಎಸ್.ಜಿ.ಹಂಚಿನಾಳ ಜಾಥಾ ದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT