ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲಿರಲಿ ಕಾಮಧೇನು

Last Updated 31 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಾಮಧೇನುವಿಗೆ ‌ಕೇಳಿದ್ದೆಲ್ಲವನ್ನೂ ನೀಡುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ಫೆಂಗ್‌ಶೂಯಿ ವಾಸ್ತುವಿನಲ್ಲಿಯೂ ಕಾಮಧೇನುವಿಗೆ ವಿಶೇಷ ಮಹತ್ವ ನೀಡಲಾಗಿದೆ. ಇದು ಮನೆಯಲ್ಲಿದ್ದರೆ ನೆಮ್ಮದಿ, ಸುಖ ನೆಲೆಸಿರುತ್ತದೆ ಎನ್ನುತ್ತದೆ ವಾಸ್ತು.

l ಸೋಮವಾರ ಮನೆಯ ನೈಋತ್ಯ ಭಾಗದಲ್ಲಿ ಇದನ್ನು ಇರಿಸುವುದರಿಂದ ಅನಾವಶ್ಯಕ ಖರ್ಚು ಕಡಿಮೆಯಾಗುತ್ತದೆ. ಇದನ್ನು ಮನೆ, ಕಚೇರಿಯಲ್ಲಿ ಇಡಬಹುದು. ಸಂಕಷ್ಟದ ವಾತಾವರಣವನ್ನು ತಿಳಿ ಮಾಡುವ ಶಕ್ತಿ ಇದಕ್ಕಿದೆ. ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು ಎಂಬ ನಂಬಿಕೆ ಇದೆ.

l ನಿಮ್ಮ ಕೋರಿಕೆಗಳನ್ನು ಪೂರೈಸುವ ಶಕ್ತಿ ಇದಕ್ಕಿದೆ. ಈಶಾನ್ಯ-ಆಗ್ನೇಯ ದಿಕ್ಕಿನಲ್ಲಿ ಇರಿಸುವುದರಿಂದ ಮನೆ ಮಂದಿಯ ಆತಂಕ ಮಾಡಿಮೆ ಮಾಡುತ್ತದೆ. ಮನೆ ಜಗಳವೂ ಕಡಿಮೆಯಾಗುತ್ತದೆ.

l ನಕಾರಾತ್ಮಕ ಶಕ್ತಿಯನ್ನು ಮನೆ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಇದರಿಂದ ಮನೆ ಮಂದಿ ನೆಮ್ಮದಿಯಿಂದ ಇರುವುದು ಸಾಧ್ಯವಾಗುತ್ತದೆ.

l ಕೆಲಸ ಅಥವಾ ಇನ್ಯಾವುದೇ ಕಾರಣಕ್ಕೆ ನೀವು ಖಿನ್ನರಾಗಿದ್ದರೆ ಇದನ್ನು ಮನೆಯ ಪಶ್ಚಿಮ ಮತ್ತು ವಾಯವ್ಯ ದಿಕ್ಕುಗಳ ಮಧ್ಯದ ಪ್ರದೇಶದಲ್ಲಿ ಇರಿಸುವುದರಿಂದ ಖಿನ್ನತೆಯಿಂದ ದೂರಾಗಬಹುದು.

l ಗಣಿಗಾರಿಕೆ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕ್ಷೇತ್ರದವರು ಮನೆ ಅಥವಾ ಕಚೇರಿಯ ಪೂರ್ವ, ದಕ್ಷಿಣ ದಿಕ್ಕಿನಲ್ಲಿ ಇರಿಸುವುದರಿಂದ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಗಳಿಸಬಹುದು.

→ (ಮೂಲ: ಮಹಾವಾಸ್ತು ಬ್ಲಾಗ್‌ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT