ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದೊಳಗಣ ಮನೆ

Last Updated 31 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಾಲ್ಪನಿಕ ಕತೆಯ ಅರಮನೆಯನ್ನು ನೆನಪಿಸುವ ಈ ಕಟ್ಟಡ ಇರುವುದು ವಿಯೆಟ್ನಾಂನಲ್ಲಿ. ಹೀಗೆ ವಕ್ರವಕ್ರವಾಗಿರುವ ಈ ಗೆಸ್ಟ್‌ಹೌಸ್‌ನ ಹೆಸರು ಹ್ಯಾಂಗ್‌ ಎನ್‌ಜಿಎ. ಕ್ರೇಜಿ ಹೌಸ್‌ ಎಂದು ಸ್ಥಳೀಯರು ಇದನ್ನು ಕರೆಯುತ್ತಾರೆ. ಮರದಿಂದಲೇ ವಿಭಿನ್ನವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ಇದರ ವಿಶೇಷ. ದೊಡ್ಡ ಮರದ ಕಾಂಡಗಳನ್ನೇ ಕೊರೆದು ಮನೆಯ ಆಕಾರ ನೀಡಿದ್ದಾರೆ.

1990ರಲ್ಲಿ ಇದರ ನಿರ್ಮಾಣವಾಯಿತು. ಪರಿಸರದಿಂದಲೇ ಪ್ರೇರಣೆ ಪಡೆದು ರೂಪುಗೊಂಡ ವಿನ್ಯಾಸವಿದು. ಮರದ ಬುಡವನ್ನೇ ತಳಪಾಯವಾಗಿ ಬಳಸಿ ಇದನ್ನು ನಿರ್ಮಿಸಲಾಗಿದೆ. ‌ಪ್ರಾಣಿಗಳು, ಅಣಬೆ ಮತ್ತು ಗುಹೆಗಳಂತಹ ನೈಸರ್ಗಿಕ ರೂಪಗಳನ್ನು ಪ್ರತಿನಿಧಿಸುವ ಕಟ್ಟಡ ವಿನ್ಯಾಸದ ವಾಸ್ತುಶಿಲ್ಪಿ ದಾಂಗ್‌ ವಿಯೆಟ್‌ ಎನ್‌ಜಿಎ. ಈ ಕಟ್ಟಡ ವಿನ್ಯಾಸ ಆ್ಯಂಟೊನಿ ಗೌಡಿ, ಸಲ್ವಾದೊರ್‌ ಡ್ಯಾಲಿ ಮತ್ತು ವಾಲ್ಟ್‌ ಡಿಸ್ನಿ ಅವರ ವಿನ್ಯಾಸದಿಂದ ಪ್ರೇರಣೆ ಪಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT