ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣಬಸವೇಶ್ವರರ ವಿಜೃಂಭಣೆಯ ಜೋಡು ರಥೋತ್ಸವ

Last Updated 1 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ಕಾರಟಗಿ: ಶ್ರಾವಣ ಮಾಸದಾದ್ಯಂತ ಇಲ್ಲಿ ನಡೆದಿರುವ ಶರಣಬಸವೇಶ್ವರರ ಪುರಾಣ ಪ್ರವಚನ ಮಂಗಲದ ನಿಮಿತ್ತ ಗುರುವಾರ ಜೋಡು ರಥೋತ್ಸವ ಹಾಗೂ ಶರಣಬಸವೇಶ್ವರರ ಬೆಳ್ಳಿಮೂರ್ತಿಯ ಮೆರವಣಿಗೆ ಸಡಗರದಿಂದ ನಡೆಯಿತು.

ದೇವಾಲಯದ ಬಳಿ ಪೂಜೆ ಸಲ್ಲಿಸುವುದರೊಂದಿಗೆ ಹಿರೇಮಠದ ಮರುಳಸಿದ್ದಯ್ಯ, ಪುರಾಣ ಸಮಿತಿಯ ಮುಖ್ಯಸ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು. ಸುಂಕಲಮ್ಮ ಬೈಲ್‌ನ ಎದುರಿಗಿರುವ ಬಸವಣ್ಣ ದೇವಾಲಯದವರೆಗೆ ಸಾಗಿದ ಜೋಡು ರಥೋತ್ಸವವು ವಾಪಸ್ ದೇವಾಲಯಕ್ಕೆ ಆಗಮಿಸಿತು.

ರಸ್ತೆಯ ಅಕ್ಕ–ಪಕ್ಕದ ಮನೆಯ ಮೇಲೆ ನೆರೆದಿದ್ದ ನಾಗರಿಕರು, ಮಹಿಳೆಯರು ಉತ್ತತ್ತಿ, ಬಾಳೆಹಣ್ಣು ಎಸೆದು ಧನ್ಯತಾಭಾವ ಮೆರೆದು, ಭಕ್ತಿಯನ್ನು ಸಮರ್ಪಿಸಿದರು. ಕಾರಟಗಿ ಸೇರಿದಂತೆ ಅನೇಕ ಗ್ರಾಮಗಳ ಸಾವಿರಾರು ಭಕ್ತರು ರಥೊತ್ಸವಕ್ಕೆ ಸಾಕ್ಷಿಯಾದರು.

ರಥೋತ್ಸವದ ಬಳಿಕ ಸಾಂಪ್ರದಾಯಕವಾಗಿ ಪುರಾಣ ಪ್ರವಚನದ ಆರಂಭ ಬಳಿಕ ಮುಕ್ತಾಯದೊಂದಿಗೆ ಪುರಾಣ ಪ್ರವಚನ, ರಥೋತ್ಸವದ ಕಾರ್ಯಕ್ರಮಕ್ಕೆ ತೆರೆಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT