ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿಗಾಗಿ ಪಕ್ಷದ ಪ್ರತಿಷ್ಠೆ ಕೈಬಿಡಿ

Last Updated 2 ಸೆಪ್ಟೆಂಬರ್ 2017, 5:08 IST
ಅಕ್ಷರ ಗಾತ್ರ

ನರಗುಂದ: ಮಹದಾಯಿ ಹೋರಾಟ ವನ್ನು ಲಘುವಾಗಿ ಪರಿಗಣಿಸಬಾರದು ಎಂದು ಮಹದಾಯಿ  ಹೋರಾಟ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಆಗ್ರಹಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹ ದಾಯಿ ಧರಣಿಯ 779ನೇ ದಿನವಾದ ಶುಕ್ರವಾರ ಅವರು ಮಾತನಾಡಿದರು.

ಮಹದಾಯಿಗಾಗಿ ಈ ಭಾಗದ ರೈತರು ಸಾಕಷ್ಟು  ತೊಂದರೆ ಅನುಭವಿಸಿ ದ್ದಾರೆ, ಅನುಭವಿಸುತ್ತಿದ್ದಾರೆ. ಯೋಜನೆ ಜಾರಿಗಾಗಿ ಜೀವ ಕೊಡಲು ಕೂಡ ಸಿದ್ಧ ರಾಗಿದ್ದಾರೆ. ಆದರೆ, ರಾಜಕೀಯ ಪಕ್ಷಗಳ ಒಣ ಪ್ರತಿಷ್ಠೆಯಿಂದ ಯೋಜನೆ  ಸಾಕಾರ ಗೊಳ್ಳುತ್ತಿಲ್ಲ. ಆದ್ದರಿಂದ ಇನ್ನಾದರೂ ಜನಪ್ರತಿನಿಧಿಗಳು ತಮ್ಮ ಹಾಗೂ ತಮ್ಮ ಪಕ್ಷದ ಪ್ರತಿಷ್ಟೆ ಕೈ ಬಿಟ್ಟು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ನೀರು ಸಿಗುವವರೆಗೂ ನಾವು ಈ ಹೋರಾಟ ನಿಲ್ಲಿಸುವುದಿಲ್ಲ. ವಿವಿಧ ರೂಪದ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಆದರೂ ಸರ್ಕಾರಗಳು ತಮ್ಮ ಮೊಂಡು ಧೋರಣೆ  ಬಿಡುತ್ತಿಲ್ಲ. ಇದು ಸರಿಯಾದ ಕ್ರಮ ಅಲ್ಲ ಎಂದು ಹೇಳೀದರು.

ರೈತರ ಋಣದಲ್ಲಿ ಬದುಕುವ ರಾಜಕಾರಣಿಗ ಕೃತಜ್ಞತೆ ಸಲ್ಲಿಸಬೇಕು. ಅವರಿಗೆ ಬೇಕಾದ ಮೂಲಸೌಲಭ್ಯ ಒದಗಿಸಬೇಕು ಎಂದು ಹೇಳಿದರು. ಮಹದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಮಾತ ನಾಡಿ, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರೂ ರಾಜ್ಯಗಳ ಜತೆ ಮಾತುಕತೆ ನಡೆಸಿ ಮಹಾದಾಯಿಗೆ ಹಸಿರು ನಿಶಾನೆ ತೋರಿಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಚನ್ನಪ್ಪಗೌಡ ಪಾಟೀಲ, ಎಸ್‌.ಬಿ.ಜೋಗಣ್ಣವರ, ಜಗದೀಶ ಬೆಳ ವಟಗಿ, ಯಲ್ಲಪ್ಪ ಗುಡದೇರಿ,  ಈರಣ್ಣ ಗಡಗಿಶೆಟ್ಟರ, ಬೀಬಿಜಾನ್ ಕುರ್ಲಗೇರಿ, ಬಸಮ್ಮ ಐನಾಪುರ, ದೇವಕ್ಕ ತಾಳಿ, ವೀರಣ್ಣ ಸೊಪ್ಪಿನ, ವಾಸು ಚವ್ಹಾಣ, ಹೋರಾಟ ಸಮಿತಿ ಸದಸ್ಯರು ಹಾಗೂ ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT