ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗೋಡ ಶಾಲೆಯಲ್ಲಿ ಕೊಠಡಿಗಳ ಕೊರತೆ; ಕುಸಿದು ಬೀಳುವ ಸ್ಥಿತಿಯಲ್ಲಿ ಕಟ್ಟಡ

Last Updated 2 ಸೆಪ್ಟೆಂಬರ್ 2017, 5:14 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ತಂಗೋಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲದೆ ಮಕ್ಕಳು ಬಯಲು ರಂಗ ಮಂದಿರದಲ್ಲಿ ವಿದ್ಯೆ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉನ್ನತೀಕರಣಗೊಂಡ ಶಾಲೆಯಲ್ಲಿ 1–8ನೇ ತರಗತಿಯವರಗೆ ಅಂದಾಜು 191 ಮಕ್ಕಳು ಓದುತ್ತಿದ್ದಾರೆ. ಆದರೆ ಇಲ್ಲಿ ಕೇವಲ 7 ಕೊಠಡಿಗಳು ಮಾತ್ರ ಇವೆ. ಇರುವ 7 ಕೊಠಡಿಗಳಲ್ಲಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗಾಗಿ ಎರಡು ಕೊಠಡಿ ಮೀಸಲಾಗಿದ್ದರೆ ಒಂದು ಕೊಠಡಿ ಅಕ್ಷರ ದಾಸೋಹಕ್ಕೆ ಮೀಸಲಾಗಿದೆ. ಇನ್ನುಳಿದ 5 ಕೊಠಡಿ ಗಳಲ್ಲಿ 191 ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗಿರುವುದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ.

‘ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡು ತ್ತಿದೆ. ಆದರೆ, ಆ ಅನುದಾನ ಇಲ್ಲಿ ತಲುಪಿಲ್ಲ. ಶಾಲೆ ಹಳೆಯದಾಗಿರುವುದ ರಿಂದ ಒಂದು ಕೊಠಡಿಯ ಚಾವಣಿ, ಆರ್‌ಸಿಸಿ ಕುಸಿದು ಬೀಳುತ್ತಿದೆ. ಹೀಗಾಗಿ, ಮಳೆಗಾಲದಲ್ಲಿ ಕೊಠಡಿ ಸೋರುತ್ತಿದ್ದು ಆಕಸ್ಮಿಕವಾಗಿ ಮಕ್ಕಳ ಮೇಲೆ ಸ್ಲ್ಯಾಬ್‌ ಬಿದ್ದು ಅಪಾಯ ಘಟಿಸುವ ಭಯ ಇದೆ’  ಎಂದು ಗ್ರಾಮದ ಬಸವರಾಜ ಶಾಲಿ, ಮಲ್ಲೇಶಪ್ಪ ಹರಿಜನ ಹೇಳಿದರು.

‘ನಮ್ಮ ಸಾಲ್ಯಾಗ ಭಾಳ ರೂಂ ಇಲ್ಲ. ಹಿಂಗಾಗಿ ನಾವು ರಂಗಮಂದಿರದಾಗ ಅಭ್ಯಾಸ ಮಾಡಾಕತ್ತೇವ್ರಿ. ರಸ್ತೆದಾಗ ಗಾಡಿ ಬಂದ್ರ ಕಿರಿಕಿರಿ ಅಕ್ಕೈತ್ರಿ’ ಎಂದು 7ನೇ ತರಗತಿ ಓದುತ್ತಿರುವ ಶಿವರಾಜ ಕಟ್ಟಿ ಹೊಲ, ಕಿರಣ ಹರಿಜನ ಹೇಳುತ್ತಾರೆ.

ನ್ನು ಈ ಶಾಲೆ ಮಕ್ಕಳಿಗೆ ಆಟದ ಮೈದಾನವೂ ಇಲ್ಲ. ಜನ ಮತ್ತು ವಾಹನಗಳು ಸಂಚರಿಸುವ ದಾರಿಯ ಮದ್ಯದಲ್ಲಿ ಆಟ ಆಡುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಇಲ್ಲ. ಈ ಕುರಿತು ಕೋಗನೂರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವ ಪ್ರಯೋ ಜನವೂ ಆಗಿಲ್ಲ’ ಎಂದು ಮುಖ್ಯಶಿಕ್ಷಕಿ ಜೆ.ಆರ್. ಹಳ್ಳಿಕಾವು ಹೇಳುತ್ತಾರೆ. 

ಈ ಕುರಿತು ಬಿಇಓ ವಿ.ವಿ. ಸಾಲಿ ಮಠ ಅವರನ್ನು ಸಂಪರ್ಕಿಸಿದಾಗ ‘ನಾನು ಇದೀಗ ವರ್ಗವಾಗಿ ಬಂದಿ ದ್ದೇನೆ. ಶಿಕ್ಷಕರೊಡನೆ ಮಾತನಾಡಿ ಕೊಠಡಿಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ. ಅದಕ್ಕಿಂತ ಮೊದಲು ಅನುದಾನ ಬಂದ ತಕ್ಷಣ ಶಾಲೆ ದುರಸ್ತಿ ಮಾಡಿಸುತ್ತೇವೆ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT