ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ

Last Updated 2 ಸೆಪ್ಟೆಂಬರ್ 2017, 5:57 IST
ಅಕ್ಷರ ಗಾತ್ರ

ಭಟ್ಕಳ: ತ್ಯಾಗ, ಬಲಿದಾನದ ಮಹತ್ವ ವನ್ನು ಸಾರುವ ಈದ್‌ಉಲ್ಅಝಾ (ಬಕ್ರೀದ್) ಹಬ್ಬವನ್ನು ಭಟ್ಕಳದಲ್ಲಿ ಮುಸ್ಲಿಮರು ಶುಕ್ರವಾರ ಸಂಭ್ರಮ ಸಡಗರಗಳಿಂದ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಶುಭ್ರ ಶ್ವೇತವಸ್ತ್ರ ಧರಿಸಿ ಮಸೀದಿಗಳಲ್ಲಿ ವಿಶೇಷ ನಮಾಜ್‌ನೊಂದಿಗೆ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.

ಭಟ್ಕಳದ ಪ್ರಮುಖ ಜಾಮಿಯಾ ಮಸೀದಿ (ಚಿನ್ನದಪಳ್ಳಿ)ಯಲ್ಲಿ ಪ್ರವಚನ ನೀಡಿದ ಮೌಲಾನಾ ಅಬ್ದುಲ್‌ ಅಲೀಮ್‌ ಖತೀಬ್‌ ನದ್ವಿ ಅವರು, ಜಗತ್ತಿನ ಮನುಷ್ಯ ವರ್ಗದ ನಾಯಕರಾಗಿ ನೇಮಿಸಲಸ್ಪಟ್ಟ ಪ್ರವಾದಿ ಇಬ್ರಾಹಿಂರನ್ನು ಅನುಸರಿಸುತ್ತ, ತಮ್ಮ ಜೀವನದಲ್ಲಿ ತ್ಯಾಗ ಮತ್ತು ಬಲಿದಾನಗಳಿಗೆ ಸಿದ್ಧರಾಗುವಂತೆ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದರು.

ಕುರ್ಬಾನಿ (ಬಲಿದಾನ) ಎನ್ನುವುದು ಕೇವಲ ಪ್ರಾಣಿ ಬಲಿಯಾಗದೆ ಇಸ್ಲಾಮ್‌ನ ಚಿಹ್ನೆಯಾಗಿದ್ದು, ಅದರ ಹಿಂದಿರುವ ಮಹಾನ್ ಉದ್ದೇಶವನ್ನು ಅರಿಯಬೇಕಾಗಿದೆ ಎಂದ ಅವರು, ಅಲ್ಲಾಹನ ಆದೇಶದ ಮೇರೆಗೆ ಪ್ರವಾದಿ ಇಬ್ರಾಹಿಂರು ತಮ್ಮ ಪ್ರೀತಿಯ ಪುತ್ರನನ್ನೇ ಬಲಿನೀಡಲು ಮುಂದಾದರು. ಇದು ಕೇವಲ ಸಂಕೇತ ಮಾತ್ರ. ಇಂದು ಮುಸ್ಲಿಮ್ ಸಮುದಾಯವು ಕೂಡ ಯಾವುದೇ ರೀತಿಯ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿರ ಬೇಕೆಂಬುದು ಇದರ ಅಂತರಾಳವಾಗಿದೆ ಎಂದರು.

ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ: ಈದ್‌ಉಲ್‌ಅಝಾ ಹಬ್ಬದ ಅಂಗವಾಗಿ ತಾಲ್ಲೂಕಿನ ವಿವಿಧ ಮಸೀದಿಗಳಾದ ಖಲಿಫಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಮಗ್ದುಂ ಕಾಲೊನಿ ಜಾಮಿಯ ಮಸೀದಿಯಲ್ಲಿ ಮೌಲಾನ ನೇಮತ್‌ಉಲ್ಲಾ ಅಸ್ಕರಿ ನದ್ವಿ, ನವಯಾತ್ ಕಾಲೊನಿ ತಂಝೀಮ್ ಜಾಮಿಯಾ ಮಸೀದಿಯಲ್ಲಿ ಮೌಲಾನ ಮೊಹಮ್ಮದ್ ಅನ್ಸಾರ್ ಖತೀಬ್ ನದ್ವಿ, ಮುಗಳಿಹೊಂಡ ಜಾಮಿಯಾ ಮಸೀದಿಯಲ್ಲಿ ಮೌಲಾನ ಮುನವ್ವರ್ ಪೇಶ್ಮಾಮ್ ನದ್ವಿ, ಮದೀನಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಜಕ್ರಿಯಾ ಬರ್ಬಾವರ್ ನದ್ವಿ, ನೂರ್ಜಾಮಿಯಾ ಮಸೀದಿಯಲ್ಲಿ ಮೌಲಾನ ತಾರಿಖ್ ಅಕ್ರಮಿ ನದ್ವಿ, ಗುಳ್ಮಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಆಹದ್ ಫರ್ಕದೆ ನದ್ವಿ, ಹಂಜಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಕ್ಬಾಲ್ ನಾಯ್ತೆ ನದ್ವಿ, ಅಹ್ಮದ್ ಸಯೀದ್ ಹುರುಳಿಸಾಲ್ ಜಾಮಿಯಾ ಮಸೀದಿಯಲ್ಲಿ ಮೌಲಾನ ಜಾಫರ್ ಫಕ್ಕಿಭಾವ್ ನದ್ವಿ, ಇಮಾಮ್ ಬುಖಾರಿ ಜಾಮಿಯಾ ಮಸೀದಿಯಲ್ಲಿ ಶೇಖ್ ಫಝ್ಲುರ್ರಹ್ಮಾನ್ ಸಲಫಿ, ತೆಂಗಿನಗುಂಡಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಸ್ಮಾಯಿಲ್ ಡಾಂಗಿ ನದ್ವಿ ಹಾಗೂ ಇಸ್ಮಾಯಿಲ್ ಜಾಮಿಯಾ ಮಸೀದಿ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಮೌಲಾನ ಮಹೆರಾಜ್ ಈದ್ ನಮಾಜ್‌ ನಿರ್ವಹಿಸಿ ಹಬ್ಬದ ಮಹತ್ವ, ಮುಸ್ಲಿಮ್ ಸಮುದಾಯದ ಹೊಣೆಗಾರಿಕೆ ಕುರಿತಂತೆ ಪ್ರವಚನ ನೀಡಿ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು.

* * 

ವ್ಯಕ್ತಿಯ ಬಲಿದಾನವು ಒಂದು ಸಮುದಾಯ ಹಾಗೂ ಸಮಾಜವನ್ನು ಜೀವಂತವಾಗಿಡುತ್ತದೆ
ಅಬ್ದುಲ್‌ ಅಲೀಮ್‌ ಖತೀಬ್‌ ನದ್ವಿ
ಮೌಲಾನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT