ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ವಿಶ್ವೇಶ್ವರಯ್ಯ ಪುತ್ಥಳಿ ಸ್ಥಾಪನೆಗೆ ಸಿದ್ಧತೆ

Last Updated 2 ಸೆಪ್ಟೆಂಬರ್ 2017, 9:49 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ರೈಲುನಿಲ್ದಾಣಕ್ಕೆ ಸಾಗುವ ಬಿ.ಎಚ್.ರಸ್ತೆ ಬಳಿ ನಿಂತಿರುವ ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿಯ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕಲಾವಿದ, ಶಿಲ್ಪಿ ಶಾಂತಲಾ ಆರ್ಟ್ಸ್‌ನ ಎಸ್.ಜಿ. ಶಂಕರಮೂರ್ತಿ ಅವರ ನಿವಾಸಕ್ಕೆ ತೆರಳಿದ ವಿಐಎಸ್ಎಲ್ ಕಾರ್ಮಿಕ ಸಂಘದ ಮುಖಂಡರು, ರೈಲ್ವೆ ಅಧಿಕಾರಿ, ಸಮಿತಿ ಸದಸ್ಯರು ಪುತ್ಥಳಿ ನಿರ್ಮಾಣ ಯಶಸ್ವಿ ಮಾಡಿಕೊಡುವಂತೆ ಪೂಜೆ ನೆರವೇರಿಸಿದರು.

ನಿಂತ ಭಂಗಿಯಲ್ಲಿರುವ ಪುತ್ಥಳಿ ನಿರ್ಮಾಣಕ್ಕೆ ಸಂಪೂರ್ಣ ನೆರವನ್ನು ವಿಐಎಸ್‌ಎಲ್‌ ಕಾರ್ಮಿಕ ಸಂಘ ನೀಡಿದೆ ಎಂದು ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ ತಿಳಿಸಿದರು.
ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್.ವಿಶ್ವನಾಥರಾವ್, ‘ಎರಡು ಕೈಗಾರಿಕೆಗಳು ಸೇರಿದಂತೆ ಜಲಾಶಯ ನಿರ್ಮಾಣಕ್ಕೆ ಕಾರಣರಾದ ವಿಶ್ವೇಶ್ವರಯ್ಯ ಅವರ ನೆನಪಿನ ವಿಶೇಷ ಪ್ರತಿಮೆಗೆ ನೆರವು ನೀಡುವಂತೆ ಕಾರ್ಮಿಕ ಸಂಘಕ್ಕೆ ಮಾಡಿದ ಮನವಿಗೆ ಉತ್ತಮ ಸಹಕಾರ ಸಿಕ್ಕಿದೆ ಎಂದು ಸ್ಮರಿಸಿದರು.

ಮುಖಂಡರಾದ ಜಗದೀಶ್, ಶಿವಬಸಪ್ಪ ಪಾಟೀಲ್, ಮಲ್ಲಿಕಾರ್ಜುನ, ಸುರೇಶ ವರ್ಮ, ಕುಮಾರ ಕಲ್ಲಪ್ಪ ದಳವಾಯಿ, ಅಮೃತಕುಮಾರ್, ಪ್ರದೀಪ ಕುಮಾರ್, ಗುಣಕರ, ಬೋರೇಗೌಡ, ಹನುಮಂತಪ್ಪ, ರಾಘವೇಂದ್ರ, ಯೋಗೀಶ, ಲಕ್ಷ್ಮೀಕಾಂತ, ರೈಲುನಿಲ್ದಾಣ ಅಧಿಕಾರಿ ಫರ್ನಾಂಡಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT