ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿಯಲ್ಲಿ ಸಂಭ್ರಮದ ಬಕ್ರೀದ್‌ ಹಬ್ಬ

Last Updated 2 ಸೆಪ್ಟೆಂಬರ್ 2017, 10:11 IST
ಅಕ್ಷರ ಗಾತ್ರ

ದೇವನಹಳ್ಳಿ: ನಗರದ ಅಕ್ಕು ಪೇಟೆ ಜಾಮೀಯ ಮಸೀದಿ ಆವರಣದಲ್ಲಿ ಶುಕ್ರವಾರ ಸಂಭ್ರಮದ ಬಲಿದಾನ ಹಬ್ಬವನ್ನು ಮುಸ್ಲಿಮರು ಆಚರಿಸಿದರು. ಪ್ರಾರ್ಥನೆಯ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಾಮೀಯ ಮಸೀದಿ ಅಧ್ಯಕ್ಷ ಅಬ್ದುಲ್ ಖುದ್ದುಸ್, ತ್ಯಾಗ್ ಬಲಿದಾನ ಸೌಹಾರ್ದಗಳ ಸಂಕೇತವಾಗಿ ಬಕ್ರೀದ್ ಅನ್ನು ಸಾಮೂಹಿಕವಾಗಿ ಆಚರಿಸ ಲಾಗುತ್ತದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬಾಲ್ಯದಲ್ಲಿ ಇದೇ ಮೈದಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಎಂದರು.

ಬಕ್ರೀದ್ ಹಬ್ಬ ವಿಶ್ವದ ಸಹಸ್ರ ಮಾನವ ಕುಲದ ಹಬ್ಬ. ಪ್ರವಾದಿ ಹಜರತ್ ಇಬ್ರಾಹಿಂ ಜೀವನದಲ್ಲಿ ನಡೆದ ನೈಜ ಘಟನೆಯ ನೆನಪಿಗಾಗಿ ಆಚರಿಸಲಾಗುತ್ತಿದೆ ಎಂದರು. ಹಜರತ್ ಇಬ್ರಾಹಿಂ ಅಲ್ಲಾಹ ಅವರ ದೂತನಾಗಿದ್ದ ಸಂದರ್ಭದಲ್ಲಿ ಅನೇಕ ವರ್ಷ ಕಳೆದರೂ ಮಕ್ಕಳಾಗಲಿಲ್ಲ, ಅಲ್ಲಾಹುನನ್ನು ಪ್ರಾರ್ಥಿಸಿದಾಗ ಗಂಡು ಮಗು ಜನನವಾಗುತ್ತದೆ. ಆ ಮಗುವೇ ಹಜರತ್ ಇಸ್ಮಾಯಿಲ್ ಎಂದರು.

ಬೆಳೆದು ದೊಡ್ಡವನಾಗುವಷ್ಟರಲ್ಲಿ ಅಲ್ಲಾಹುವಿನ ಮೇಲೆ ಇಟ್ಟಿರುವ ನಿಷ್ಠೆ ಪರೀಕ್ಷಿಸಲು ಆಜ್ಞಾಪಿಸಲಾಯಿತು. ಆಗ ಹಜರತ್ ಇಬ್ರಾಹಿಂ ಅಲ್ಲಾಹನ ಇಚ್ಛೆಯನ್ನು ಕನಸಿನಲ್ಲಿ ಬಂದು ಮುದ್ದು ಮಗುವನ್ನು ನನ್ನ ಹೆಸರಿನಲ್ಲಿ ಬಲಿಕೊಡಬೇಕು ಎಂಬ ಸಂದೇಶ ತಿಳಿಸುತ್ತಾನೆ. ಹೆದರದೆ ಅಳುಕದೆ ಹಜರತ್ ಇಸ್ಮಾಯಿಲ್ ಮಗುವನ್ನು ಬಲಿಕೊಡಲು ಅಲ್ಲಾಹುನ ಪ್ರಾರ್ಥನೆ ಮಾಡಿ ಮುಂದಾದರು ಎಂದು ಅವರು ಹೇಳಿದರು.

‘ಆಗ ಅಲ್ಲಾಹನು ಪ್ರತ್ಯಕ್ಷನಾಗಿ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಎಂದು ಸ್ವರ್ಗಲೋಕದಿಂದ ಕಳುಹಿಸಿದ ಕುರಿಯನ್ನು ಬಲಿ ನೀಡಿದ. ಆ ಪರಂಪರೆ ಇಂದಿಗೂ ಮುಂದುವರೆದಿದೆ ಎಂದರು. ಜಾಮೀಯ ಮಸೀದಿಯ ಹಿರಿಯ ಇಮಾಮ್ ಶೇಖ್ ಅಬ್ದುಲ್ ಜಬ್ಬಾರ್ ರಹಮಾನಿ ಮಾತನಾಡಿ, ಒಂದು ವರ್ಷದ ಎಲ್ಲಾ ಪಾಪ ಕರ್ಮಗಳು ಕ್ಷಮೆಯಾಗುವ ಪವಿತ್ರ ದಿನವೇ ಈ ಬಕ್ರೀದ್ ಆಚರಣೆ ಎಂದು ಅವರು ಹೇಳಿದರು.

ಜಾಮೀಯ ಮಸೀದಿ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ ಮಾತನಾಡಿ, ರಾಜ್ಯದ ಕರಾವಳಿ ಮತ್ತು ಕೇರಳ ರಾಜ್ಯದಲ್ಲಿ ಮೆಕ್ಕಾ ಮಸೀದಿ ಆದೇಶದಂತೆ ಇಲ್ಲಿಯು ಆಚರಿಸಲಾಗುತ್ತದೆ. ಎಲ್ಲಾ ಸಮುದಾಯ ಸೇರಿ ಮಾಡುವ ಪ್ರಾರ್ಥನೆ ಅಲ್ಲಾಹವುವಿಗೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT