ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೀರನ್ನು ಹಿಮ್ಮುಖ ಹರಿಸಿದ ರೈತರು!

Last Updated 3 ಸೆಪ್ಟೆಂಬರ್ 2017, 5:31 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಸಮುದಾಯದ ಸಹಭಾಗಿತ್ವದಲ್ಲಿ ತಾಲ್ಲೂಕಿನ ಹಗರಿ ಕ್ಯಾದಿಗಿಹಳ್ಳಿ ಬಳಿ ತುಂಗಭದ್ರಾ ಹಿನ್ನೀ ರನ್ನು ಹಿಮ್ಮುಖವಾಗಿ ಹರಿಸುವ ಕಾಮ ಗಾರಿ ಸುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲ ಹೆಚ್ಚಿಸಿದ್ದು, ಸತತ ಮೂರು ವರ್ಷಗಳ ಬರದಿಂದ ಕಂಗೆಟ್ಟಿದ್ದ ರೈತರ ಪಾಲಿಗೆ ಸಂಜೀವಿನಿಯಂತಾಗಿದೆ.

ಗ್ರಾಮದ ರೈತ ನರಸಿಂಹರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗುರುಬಸವರಾಜ, ಮುಖಂಡ ನೀಲ ಕಂಠಪ್ಪ ಸೇರಿದಂತೆ ಹಲವರು ನದಿ ನೀರನ್ನು ಹಿಮ್ಮುಖವಾಗಿ ಹರಿಸುವ ಯೋಜನೆಯ ರೂಪರೇಷೆ ಸಿದ್ಧ ಪಡಿಸಿದರು. ಆದರೆ ಮೊದಲೇ ಬರದಿಂದಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಯೋಜನೆಯ ಅಂದಾಜು ಮೊತ್ತವನ್ನು ವೈಯಕ್ತಿವಾಗಿ ಭರಿಸುವುದು ಕೊಂಚ ತೊಡಕಾಗಿತ್ತು.

ಆರಂಭದಲ್ಲಿ ಪರಸ್ಪರ ಒಂದಷ್ಟು ಮೊತ್ತ ವಂತಿಗೆ ನೀಡಿ ಕಾಮಗಾರಿ ಆರಂಭಿಸಿ ದರು. ಆದರೆ, ಆರು ಕಿಲೋ ಮೀಟರ್‌ ದೂರದವರೆಗೂ ಸಾಗಬೇಕಿದ್ದ ಕಾಮ ಗಾರಿಗೆ ಪೂರ್ಣ ಪ್ರಮಾಣದ ಮೊತ್ತ ಒದಗಿಸದಾದರು. ಈ ಹಿನ್ನೆಲೆಯಲ್ಲಿ ಶಾಸಕ ಎಸ್‌.ಭೀಮಾನಾಯ್ಕರನ್ನು ಭೇಟಿ ಮಾಡಿದ ರೈತರ ನಿಯೋಗ ಯೋಜ ನೆಯ ಮಹತ್ವ ವಿವರಿಸಿದರು.
ತಕ್ಷಣವೇ ರೈತರ ನೆರವಿಗೆ ಧಾವಿಸಿದ ಶಾಸಕ ಹಲವು ದಿನಗಳ ಮಟ್ಟಿಗೆ ಎಸ್ಕಾವೇಟರಿ ಸಹಯೋಗ ಒದಗಿಸಿದರು. ಜತೆಗೆ ವೈಯಕ್ತಿಕ ಮೊತ್ತದಲ್ಲಿ ಯಂತ್ರಕ್ಕೆ ಅಗತ್ಯವಾದ ಡೀಸೆಲ್ ವೆಚ್ಚವನ್ನು ಭರಿಸಿದರು.

ಇದರಿಂದಾಗಿ ನೋಡು ನೋಡುತ್ತಿದ್ದಂತೆಯೇ ಹಿಮ್ಮುಖದ ಕಾಲುವೆ ವಿಸ್ತಾರವಾಯಿತು. ಒಟ್ಟು ಆರು ಅಡಿ ಅಗಲದ ಕಾಲುವೆಯ ಮೂಲಕ 4.5 ಕಿಲೋ ಮೀಟರ್ ವರೆಗೂ ನೀರು ತರಲಾಯಿತು. ಈಗಾಗಲೇ ಕಾಮಗಾರಿ ಆರಂಭಗೊಂಡು ಏಳು ದಿನಗಳಾಗಿವೆ. ಚಿಲಗೋಡು ಗ್ರಾಮದ ಬಳಿ ಇರುವ ಪುರಾತನ ಕಾಲದ ಕಲ್ಲೇಶ್ವರ ದೇವ ಸ್ಥಾನದ ಬಳಿಯಲ್ಲೇ ನಿಂತಿದ್ದ ಹಿನ್ನೀರನ್ನು ಕಡಲಬಾಳು ಗ್ರಾಮದ ವರೆಗೂ ಕಾಲುವೆಯ ವರೆಗೂ ಹರಿದಿದೆ.

ನೀರು ಸಾಗಿ ಬರುವ ಮಾರ್ಗದಲ್ಲಿ ಅಪಾರ ಪ್ರಮಾಣದ ಮರಳು ತುಂಬಿರುವ ಹಿನ್ನೆಲೆ ಯಲ್ಲಿ ಕಳೆದೊಂದು ವಾರದಿಂದ ಅಂತ ರ್ಜಲದ ಪ್ರಮಾಣದ ಏರಿಕೆ ಆಗುತ್ತಿ ರುವುದನ್ನು ರೈತರು ಗುರುತಿಸಿದ್ದಾರೆ. ಅತ್ಯಂತ ಉತ್ಸಾಹದಿಂದ ಪುನಾ ಕಾಲುವೆಯನ್ನು ಆರು ಕಿಲೋ ಮೀಟರ್ ವರೆಗೂ ವಿಸ್ತರಿಸುವ ಗುರಿಯತ್ತ ತೊಡ ಗಿಸಿಕೊಂಡಿದ್ದಾರೆ.

‘ಹಿನ್ನೀರು ಹಿಮ್ಮುಖವಾಗಿ ಹರಿಯು ತ್ತಿರುವುದರಿಂದ ಈ ಭಾಗದ ಹತ್ತಾರು ಗ್ರಾಮಗಳ ರೈತರು ಬದುಕಿಕೊಳ್ಳುತ್ತಾರೆ, ಕೊಳವೆ ಬಾವಿಗಳು ರಿಚಾರ್ಜ್‌ ಆಗುತ್ತವೆ, ಇದೊಂದು ಒಳ್ಳೆಯ ಕೆಲಸ, ಈಗಾಗಲೇ ಭತ್ತ ನಾಟಿ ಮಾಡಿದೀವಿ, ನಿಂತ ಬೋರ್‌ ವೆಲ್‌ಗಳು ಮತ್ತೆ ಜೀವ ಪಡೆದಿವೆ’ ಎಂದು ಕ್ಯಾದಿಗಿಹಳ್ಳಿ ರೈತ ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಹಗರಿ ಕ್ಯಾದಿಗಿಹಳ್ಳಿ, ಹಿರೇ ಸೊಬಟಿ, ಚಿಕ್ಕ ಸೊಬಟಿ, ಯಡ್ರಮ್ಮನಹಳ್ಳಿ, ಕಡಲಬಾಳು, ಚಿಲ ಗೋಡು ಗ್ರಾಮಗಳ ರೈತರ ಮೊಗದಲ್ಲಿ ಹಿನ್ನೀರಿನ ಜಲಧಾರೆ ಮಂದಹಾಸ ಮೂಡಿಸಿದೆ. ಒಟ್ಟು ಆರು ಸಾವಿರ ಎಕರೆ ಪ್ರದೇಶದಲ್ಲಿ ಅಂತರ್ಜಲ ಸಮೃದ್ಧಿ ಆಗುವ ನಿರೀಕ್ಷೆ ರೈತರದ್ದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT