ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿಗೆ ಪ್ರವಾಹ: ಆತಂಕ

Last Updated 3 ಸೆಪ್ಟೆಂಬರ್ 2017, 5:38 IST
ಅಕ್ಷರ ಗಾತ್ರ

ಆಲಮೇಲ: ನೆರೆ ರಾಜ್ಯ ಮಹಾ ರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಜನಿ ಜಲಾಶಯದಿಂದ ಭೀಮಾ ನದಿಗೆ ಸುಮಾರು 65 ಸಾವಿರ ಕ್ಯುಸೆಕ್‌ ನೀರು ಬಿಟ್ಟ ಪರಿಣಾಮ ಭೀಮಾ ನದಿ ತುಂಬಿ ಹರಿಯುತ್ತಿರುವುದರಿಂದ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಪ್ರವಾಹ ಭೀತಿಯಲ್ಲಿದೆ.

ತಾರಾಪುರ ಗ್ರಾಮದ ಸುತ್ತಲು ಶುಕ್ರವಾರ ಸಂಜೆ 6 ಗಂಟೆಗೆ ನೀರು ಏಕಾಏಕಿ ಹರಿದು ಬಂದಿದ್ದು, ನದಿಯ ದಂಡೆಯಲ್ಲಿರುವ ಪಂಪ್‌ಸೆಟ್‌ ತೆಗೆ ಯಲು ವಿಫಲರಾದ ರೈತರ ಕೆಲವು ಪಂಪ್‌ಸೆಟ್‌ ನೀರುಪಾಲಾಗಿವೆ. ಪ್ರತಿ ಭಾರಿ ಮಳೆಗಾಲದಲ್ಲಿ ನೀರು ಬಿಡುವ ಮುನ್ನ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಜನರಿಗೆ ಹೇಳುತ್ತಿದ್ದರು.

ಆದರೆ ಈ ಬಾರಿ ಯಾರು ಹೇಳದ ಕಾರಣ ನಾವು ಏನು ಮುನ್ನೆಚ್ಚರಿಕೆ ಮಾಡಿಕೊಂಡಿಲ್ಲ ಇದರಿಂದ ನಮ್ಮ ಬೆಳೆ ಹಾಗೂ ಪಂಪ್‌ಸೆಟ್ ಹಾಳಾಗಿವೆ ಇದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕಾ ಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಸಮೀಪದ ಸೊನ್ನ ಬ್ಯಾರೇಜ್ ಕಟ್ಟಿದರಿಂದ ಈ ಗ್ರಾಮ ಸ್ಥಳಾಂತರ ಗ್ರಾಮವಾಗಿದ್ದು ಭೀಮಾ ಏತ ನೀರಾವರಿ ಅಧಿಕಾರಿಗಳ ವೈಫಲ್ಯದಿಂದ ಇನ್ನೂ ಇಲ್ಲಿನ ಜನರಿಗೆ ಸ್ಥಳ ಹಂಚಿಕೆ ಆಗಿಲ್ಲ. ಸುಮಾರು 1 ವರ್ಷದಿಂದ ಇಲ್ಲಿರುವ ಜನರು ತಮ್ಮ ಮನೆಗಳನ್ನು ಸರಿಪಡಿಸಿಕೊಂಡಿಲ್ಲ.

ಏಕೆಂದರೆ ಪ್ರತಿವರ್ಷ ಅಧಿ ಕಾರಿಗಳು ಇವರಿಗೆ ನಿಮ್ಮ ಗ್ರಾಮ ಸ್ಥಳಾಂತರ ಮಾಡಿಕೊಡುತ್ತೇವೆ ಎಂಬ ಸುಳ್ಳು ಭರವಸೆ ನೀಡುತ್ತಲೇ ಬಂದಿ ದ್ದಾರೆ. ಇದರಿಂದ ಬಿಟ್ಟು           ಹೋಗುವ ಮನೆಗಳಿಗೆ ಏಕೆ ದುರಸ್ತಿ ಮಾಡಬೇಕು ಎಂದು ಹಾಗೆ ಬಿಟ್ಟಿದ್ದರಿಂದ ಈಗ ಮನೆಗಳು ಕೂಡಾ ಬೀಳುವ ಆತಂಕದಲ್ಲಿದ್ದಾರೆ. ಈ ವಿಷಯವಾಗಿ ಹಲವಾರು ಭಾರಿ ಅಧಿಕಾರಿಗಳಿಗೆ ಕೇಳಿ ದರು ಯಾರು ಸ್ಪಂದಿಸುತ್ತಿಲ್ಲ ಹೀಗಾಗಿ ಮುಂದೆ ಏನಾದರೂ ಅನಾಹುತಗಳು ಸಂಭವಿಸಿದ್ದರೆ ಅದಕ್ಕೆ ನೀರಾವರಿ ಅಧಿ ಕಾರಿಗಳು ಕಾರಣರಾಗುತ್ತಾರೆ  ಎನ್ನುತ್ತಾರೆ ಗ್ರಾಮಸ್ಥರಾದ ವಿಶ್ವನಾಥ ಹಿರೇಮಠ.

ಗ್ರಾಮದ ಸುತ್ತಲು ಬಾರಿ ಪ್ರಮಾಣದಲ್ಲಿ ನೀರು ತುಂಬಿದ್ದು ಗ್ರಾಮ ನಡುಗಡ್ಡೆ ಆಗುವ ಭೀತಿಯಲ್ಲಿ ಇದೆ. ಹಾವು ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಗ್ರಾಮದ ಒಳಗಡೆ ಬರಬಹುದು ಎಂಬ ಆತಂಕದಲ್ಲಿ ಜನರಿದ್ದು, ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಸೂಕ್ತ ಪರಿಹಾರ ಒದಗಿಸುತ್ತಾರೆಯೇ? ಎಂದು ಕಾದು ನೋಡಬೇಕಾಗಿದೆ.

ಪ್ರವಾಹ ವಿಷಯ ತಿಳಿದ ಸಿಂದಗಿ ತಹಶೀಲ್ದಾರ್‌ ವೀರೇಶ ಬಿರಾದಾರ ಗ್ರಾಮಸ್ಥರ ಜೋತೆ ದೂರವಾಣಿ ಮೂಲಕ ಮಾತನಾಡಿ, ಗ್ರಾಮ ಲೆಕ್ಕಾಧಿ ಕಾರಿ ಮತ್ತು ಕಂದಾಯ ನಿರೀಕ್ಷಕರಿಗೆ ತಾರಾಪುರದಲ್ಲಿ ಇರಲು ತಿಳಿಸಿದ್ದೇನೆ ಮತ್ತು ಸೊನ್ನ ಬ್ರಿಜ್‌ನಿಂದ ನೀರು ಬಿಡಲು ತಿಳಿಸಲಾಗಿದ್ದು ಭಾನುವಾರ ಅಥವಾ ಸೋಮವಾರ ಅಷ್ಟರಲಿ ಕಡಿಮೆ ಆಗುತ್ತವೆ. ಜನರು ಆತಂಕ ಪಡುವ ಅಗತ್ಯವಿಲ್ಲ, ಯಾವುದೇ ತೊಂದರೆ ಇದ್ದರೆ ಸಂಪರ್ಕಿಸಿ ನಿಮ್ಮೊಂದಿಗೆ ನಾನು ಹಾಗೂ ನಮ್ಮ ಅಧಿಕಾರಿಗಳು ಇರುತ್ತೇವೆ ಎಂದು ಹೇಳಿದರು.

* * 

ಮೇಲಿಂದ ಮೇಲೆ ಪ್ರವಾಹಕ್ಕೆ ತುತ್ತಾಗುವ ಮತ್ತು ಏತ ನೀರಾ ವರಿ ಯೋಜನೆಯಿಂದ ಗ್ರಾಮ ಸ್ಥಳಾಂತರ ಮಾಡುವುದಾಗಿ ಅಧಿಕಾರಿ ಗಳು ಹೇಳುತ್ತಾರೆ. ಆದರೆ ಆ ಕಾರ್ಯ ಇನ್ನೂ ನೆರವೇರಿಲ್ಲ
ವಿಶ್ವನಾಥ ಹಿರೇಮಠ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT