ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ-ಲಿಂಗಾಯತ ಒಂದೇ’

Last Updated 3 ಸೆಪ್ಟೆಂಬರ್ 2017, 7:15 IST
ಅಕ್ಷರ ಗಾತ್ರ

ಹನುಮಸಾಗರ: ವೀರಶೈವ- ಲಿಂಗಾಯತ ಒಂದೇ ಆಗಿದ್ದು, ರಾಜ್ಯಮಟ್ಟದ ಸಮ್ಮೇಳನದಲ್ಲಿ ಕೈಗೊಳ್ಳುವ ಯಾವುದೇ ಒಮ್ಮತದ ನಿರ್ಣಯಗಳಿಗೆ ನಮ್ಮ ಬೆಂಬಲ ಮತ್ತು ಬದ್ಧತೆಯನ್ನು ತೋರಿಸಬೇಕಾಗಿದೆ ಎಂದು ವೀರಶೈವ ಲಿಂಗಾಯತ ಧರ್ಮ ಸಮಾಜದ ನಿರ್ದೇಶಕ ಮಹಾಂತಯ್ಯ ಕೋಮಾರಿ ಹೇಳಿದರು.

ಇಲ್ಲಿನ ಅನ್ನದಾನೇಶ್ವರ ಮಠದಲ್ಲಿ ಶನಿವಾರ ವೀರಶೈವ ಲಿಂಗಾಯತ ಧರ್ಮದ ಸಂಘಟನೆಗಾಗಿ ಗುರು ವಿರಕ್ತರ ಹಾಗೂ ಭಕ್ತರ ಸದ್ಭಾವನಾ ಸಮಾವೇಶದ ನಿಮಿತ್ತ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸೆ. 4ರಂದು ಶಿವಯೋಗ ಮಂದಿರದಲ್ಲಿ ನಡೆಯುವ ಬೃಹತ್‌ ಸದ್ಭಕ್ತರ ಸದ್ಭಾವನಾ ಸಮ್ಮೇಳನದಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಸಮ್ಮೇಳನಕ್ಕೆ ಬರುವ ಸದಸ್ಯರಿಗಾಗಿ ವಾಹನ ಸೌಕರ್ಯ ಮಾಡಲಾಗಿದೆ ಎಂದರು.

ಸಮಾಜದ ಪ್ರಮುಖರಾದ ಶರಣಪ್ಪ ಅಗಸಿಮುಂದಿನ, ಕರಿಸಿದ್ದಪ್ಪ ಕುಷ್ಟಗಿ, ಕರಿಸಿದ್ದಪ್ಪ ಚಿನಿವಾಲರ, ಬಸವಂತಪ್ಪ ಕಂಪ್ಲಿ, ಅಂದಾನಯ್ಯ ಸೊಪ್ಪಿಮಠ, ಶರಣಪ್ಪ ಹಲಕೋಲಿ, ಬಸಪ್ಪ ದೋಟಿಹಾಳ, ಶೇಖಪ್ಪ ಸಜ್ಜನ, ಶೇಖಣ್ಣ ಗಡಾದ, ರಾಚಪ್ಪ ಚಿನಿವಾಲರ, ಮಲ್ಲಯ್ಯ ಕೋಮಾರಿ, ಬಸವರಾಜ ದ್ಯಾವಣ್ಣವರ, ಶಿವಪ್ಪ ಕಂಪ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT