ಟೀಸರ್‌ ಬಿಡುಗಡೆ

‘ಕನ್ನಡ ಮೀಡಿಯಂ’ನಲ್ಲಿ ಕಿಚ್ಚನ ಖದರ್‌

ಟೀಸರ್‌ ನೋಡಿದ ಕಿಚ್ಚನ ಅಭಿಮಾನಿಗಳು ‘ಹಾಲಿವುಡ್‌ ಹೀರೊನಂತೆ ಕಾಣ್ತಿದ್ದಾರೆ ನಮ್ಮ ಬಾಸು’ ಎಂದು ಬೆರಗಾಗಿದ್ದಾರೆ.

‘ಕನ್ನಡ ಮೀಡಿಯಂ’ನಲ್ಲಿ ಕಿಚ್ಚನ ಖದರ್‌

ಸುದೀಪ್‌ ಹುಟ್ಟುಹಬ್ಬದಂದೇ (ಸೆ.2) ‘ರಾಜು ಕನ್ನಡ ಮೀಡಿಯಂ’ನ ಟೀಸರ್‌ ಬಿಡುಗಡೆಯಾಗಿದೆ. ಮೂರೇ ದಿನಗಳಲ್ಲಿ 4.50 ಲಕ್ಷ ಹಿಟ್ ಸಿಕ್ಕಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಅರುವತ್ತು ಸೆಕೆಂಡು ಆಗುವುದಕ್ಕೂ ಮೊದಲೇ ಟೀಸರ್‌ ಮುಗಿಯುತ್ತದೆ. ಅಷ್ಟರಲ್ಲಿ ನಮಗೆ ದಕ್ಕುವ ದೃಶ್ಯಗಳು, ಚಿತ್ರದಲ್ಲಿ ಗ್ಲಾಮರ್‌, ಹೊಡೆದಾಟ, ‘ಸುದೀಪ್‌ಗಿರಿ’, ಹಾಡು, ಮನರಂಜನೆ, ಕತೆ... ಎಲ್ಲವೂ ಇರುವ ಸುಳಿವು ಕೊಡುತ್ತವೆ.

ಕಪ್ಪು ಬಣ್ಣದ ಒಂದಷ್ಟು ಕಾರುಗಳು ರಭಸದಿಂದ ಮುನ್ನುಗ್ಗಿ ಬರುತ್ತವೆ. ಯಾರೋ ತೆರೆದ ಆಡಿ ಕಾರಿನ ಮುಂಬಾಗಿಲಿನಿಂದ ಸುದೀಪ್‌ ಇಳಿಯುತ್ತಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಹತ್ತಾರು ಹೂಗುಚ್ಛಗಳು ಸುದೀಪ್‌ ಕೈಸೇರುತ್ತವೆ. ಸುಂದರವಾದ ಮೈಕಟ್ಟಿನ ಹೆಣ್ಣುಮಕ್ಕಳು, ಮತ್ತೊಂದೆಡೆ ನಿಂತ ಪುರುಷರ ಹಾಯ್‌ಗೆ ಕೈಬೀಸುತ್ತಲೇ ನಿಧಾನಗತಿಯಲ್ಲಿ ಮುನ್ನಡೆಯುತ್ತಾರೆ.

ಹುಲಿಯ ಮುಖವೊಂದು ಹಾದುಹೋಗುತ್ತದೆ, ಗಾಲ್ಫ್‌ ಕೋರ್ಟ್‌ನಲ್ಲಿ ಸುದೀಪ್‌ ಚೆಂಡನ್ನು ದೂರಕ್ಕಟ್ಟುತ್ತಾರೆ, ಹೆಲಿಕ್ಯಾಮ್‌ನಲ್ಲಿ ಒಂದು ದ್ವೀಪದ ದೃಶ್ಯ ಅರೆಕ್ಷಣ ಮನಸ್ಸನ್ನಾವರಿಸಿಕೊಳ್ಳುತ್ತದೆ, ಶರ್ಟ್‌ ಧರಿಸದ ಸುದೀಪ್‌ ಮೈಕಟ್ಟು ಮಸುಕಾಗಿ ಕಾಣುತ್ತದೆ, ಡಾಲ್ಫಿನ್‌ ಬೆನ್ನಟ್ಟಿ ಬರುವ ಸಮುದ್ರದಲ್ಲಿಯೇ ಅವರು ಈಜಿಕೊಂಡು ಬರುತ್ತಾರೆ. ಈಜುಡುಗೆಯಲ್ಲಿ ನಾಯಕಿ ಕಾಣಿಸಿಕೊಳ್ಳುತ್ತಾಳೆ... ಹೀಗೆ ಸಾಲುಸಾಲು ದೃಶ್ಯಗಳ ಮೆರವಣಿಗೆ.

ಟೀಸರ್‌ ನೋಡಿದ ಕಿಚ್ಚನ ಅಭಿಮಾನಿಗಳು ‘ಏನ್ ಖದರ್‌ ಗುರೂ’, ‘ಹಾಲಿವುಡ್‌ ಹೀರೊನಂತೆ ಕಾಣ್ತಿದ್ದಾರೆ ನಮ್ಮ ಬಾಸು’ ಎಂದು ಬೆರಗಾಗಿದ್ದಾರೆ.

ಗುರುನಂದನ್‌, ಆವಂತಿಕಾ ಶೆಟ್ಟಿ ಮತ್ತು ಆಶಿಕಾ, ಅಚ್ಯುತಕುಮಾರ್, ಸುಚೇಂದ್ರ ಪ್ರಸಾದ್‌, ಸಾಧು ಕೋಕಿಲಾ ಮತ್ತು ರಷ್ಯಾದ ರೂಪದರ್ಶಿ ಆಂಜೆಲಿನಾ ಭೂಮಿಕೆಯಲ್ಲಿದ್ದಾರೆ. ನರೇಶ್‌ ಕುಮಾರ್‌ ನಿರ್ದೇಶನದ ಈ ಸಿನಿಮಾ ಕನ್ನಡ ರಾಜ್ಯೋತ್ಸವದಂದೇ ತೆರೆ ಕಾಣಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ನಿರ್ದೇಶಕಿಯಾದರು ಮಾಡೆಲ್‌ ರೋಶಿನಿ

ಚೊಚ್ಚಲ ಪ್ರಯತ್ನ
ನಿರ್ದೇಶಕಿಯಾದರು ಮಾಡೆಲ್‌ ರೋಶಿನಿ

20 Oct, 2017
ವಿವಾದದಲ್ಲಿ ‘ಮರ್ಸಲ್’

ಚೆನ್ನೈ
ವಿವಾದದಲ್ಲಿ ‘ಮರ್ಸಲ್’

20 Oct, 2017
ಸ್ನೇಹಕ್ಕೆ ಎಣೆಯಿಲ್ಲ; ಒತ್ತಡಕ್ಕೆ ಮಣಿಯಲ್ಲ

ಮುಕ್ತ ಮಾತಿನ ಸುದೀಪ್‌
ಸ್ನೇಹಕ್ಕೆ ಎಣೆಯಿಲ್ಲ; ಒತ್ತಡಕ್ಕೆ ಮಣಿಯಲ್ಲ

20 Oct, 2017
‘ದಯವಿಟ್ಟು ಗಮನಿಸಿ’ ಇದು ಪಯಣದ ಕಥೆ!

ಹೊಸ ಸಿನಿಮಾ
‘ದಯವಿಟ್ಟು ಗಮನಿಸಿ’ ಇದು ಪಯಣದ ಕಥೆ!

20 Oct, 2017
‘ಚಾಣಾಕ್ಷ’ನ ಮೈನವಿರೇಳಿಸುವ ಸಾಹಸ

ಸಿನಿಮಾದ ಸುದ್ದಿಗೋಷ್ಠಿ
‘ಚಾಣಾಕ್ಷ’ನ ಮೈನವಿರೇಳಿಸುವ ಸಾಹಸ

20 Oct, 2017