ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1. ಕ್ರೀಡಾ ಕ್ಷೇತ್ರದಲ್ಲಿ ತೋರಿದ ಉತ್ತಮ ಸಾಧನೆಗಾಗಿ ಭಾರತ ಸರ್ಕಾರ ನೀಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಗುರುತಿಸಿ ?
a) ರಾಜೀವ್ ಗಾಂಧಿ ಖೇಲ್ ರತ್ನ
b) ಅರ್ಜುನ ಪ್ರಶಸ್ತಿ
c) ಧ್ಯಾನ್‌ಚಂದ್ ಪ್ರಶಸ್ತಿ
d) ಮೇಲಿನ ಎಲ್ಲವೂ

2. ಭಾರತದಲ್ಲಿ ದೂರಸಂಪರ್ಕ ವ್ಯವಹಾರವನ್ನು ನಿಯಂತ್ರಣ ಮಾಡುವ ಸ್ವತಂತ್ರ ಸಂಸ್ಥೆ ಅಥವಾ ಪ್ರಾಧಿಕಾರ ಯಾವುದು?
a) ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ
b) ರಾಷ್ಟ್ರೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ
c) ಭಾರತ್ ದೂರಸಂಪರ್ಕ ಮತ್ತು ನಿಯಂತ್ರಣ ಪ್ರಾಧಿಕಾರ
d) ಭಾರತ್ ಟೆಲಿಕಾಂ ಪ್ರಾಧಿಕಾರ

3. ವೇದಗಳ ಕಾಲದ ನಂತರದಲ್ಲಿನ ವಿವಾಹ ವ್ಯವಸ್ಥೆಯಲ್ಲಿದ್ದ ‘ಗೌತಮ ಧರ್ಮಸೂತ್ರ’ ದಲ್ಲಿ ಒಟ್ಟು ಎಷ್ಟು ಬಗೆಯ ವಿವಾಹ ಪದ್ಧತಿಯನ್ನು ಹೇಳಲಾಗಿದೆ?
a) ನಾಲ್ಕು ಬಗೆ  b) ಎಂಟು ಬಗೆ
c) ಹನ್ನೆರಡು ಬಗೆ  d) ಹದಿನಾರು ಬಗೆ

4. ಬೌದ್ಧ ಗ್ರಂಥಗಳ ಸಂಗ್ರಹ ಮತ್ತು ಅಧ್ಯಯನಕ್ಕಾಗಿ ಎರಡನೇ ಚಂದ್ರಗುಪ್ತನ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನಾ ಯಾತ್ರಿಕ ಯಾರು?
a) ಕಾಸ್ಮಸ್   b) ಹೊಯೆನ್ಸ್ ತ್ಸಾಂಗ್
c) ಪಾಹಿಯಾನ  d) ಇತ್ಸಿಂಗ್

5. ಅರಿಶಿನ ಪುಡಿಯಲ್ಲಿ ಕಂಡುಬರುವ ಕಲಬೆರಕೆ ವಸ್ತುವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ಟಾಲ್ಕಮ್ ಪುಡಿ
b) ಮರದ ತೊಗಟೆಯ ಪುಡಿ
c) ಮೆಟಾನಿಲ್ ಹಳದಿ
d) ಹಳದಿ ಬಣ್ಣದ ಅಡುಗೆ ಸೋಡಾ

6. ಸಸ್ಯಶಾಸ್ತ್ರದ ಪ್ರಕಾರ ಆಲದ ಮರದ ಜೀವಿತಾವಧಿ 400 ವರ್ಷಗಳಾದರೆ, ದೈತ್ಯ ಸಿಕ್ಟೋಯಾ ಮರದ ಜೀವಿತಾವಧಿ ಎಷ್ಟು?
a) 2000 ವರ್ಷ  b) 3500 ವರ್ಷ
c) 4000 ವರ್ಷ  d) 4500 ವರ್ಷ

7. ಪ್ರಾಣಿಗಳಲ್ಲಿ ಅತ್ಯಂತ ದೀರ್ಘ ಆಯುಷ್ಯವನ್ನು ಹೊಂದಿರುವ ಪ್ರಾಣಿಯನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ಆಮೆ   b) ಆನೆ
c) ಜಿರಾಫೆ   d) ಹಿಮಕರಡಿ

8. ಸೊನ್ನೆಯನ್ನು ಒಂದು ಸಂಖ್ಯೆ ಎಂದು ತೋರಿಸಿ ಅದರ ಗಣಿತ ಪ್ರಕ್ರಿಯೆಯನ್ನು ಜಗತ್ತಿಗೆ ತೋರಿಸಿದವರು ಯಾರು?
a) ಆರ್ಯಭಟ  b) ಬ್ರಹ್ಮಗುಪ್ತ
c) ಚಾಣಕ್ಯ   d) ಚರಕ

9. ಆನೆಗಳಿಗೆ ಪ್ರಸಿದ್ಧವಾಗಿರುವ ಹಾಗೂ ಸರೋವರದ ಮಧ್ಯಭಾಗದಲ್ಲಿರುವ ಮಧುಪುರ ರಾಷ್ಟ್ರೀಯ ಉದ್ಯಾನವನ ಯಾವ ದೇಶದಲ್ಲಿದೆ?
a) ಭಾರತ   b) ಭೂತಾನ್
c) ಬಾಂಗ್ಲಾದೇಶ  d) ನೇಪಾಳ

10. ಈ ಕೆಳಕಂಡ ಯಾವ ಅಪರೂಪದ ಖನಿಜವನ್ನು ‘ಬಿಳಿ ಇದ್ದಿಲು’ ಎಂದು ಕರೆಯಲಾಗುತ್ತದೆ?
a) ಯುರೇನಿಯಂ b) ಥೋರಿಯಂ
c) ಲಿಥಿಯಮ್ d) ಲಿಗ್ನೈಟ್

ಉತ್ತರಗಳು: 1-d, 2-a, 3- b, 4-c, 5-c, 6-b, 7-a, 8-b, 9-c, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT